Please enable javascript.ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ - ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ - Vijay Karnataka

ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ವಿಕ ಸುದ್ದಿಲೋಕ 28 May 2013, 4:18 am
Subscribe

ರಾಣೇಬೆನ್ನೂರ :ಗೊಬ್ಬರದ ಕತಕ ಅಭಾವ ಸಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಬಿ. ಕೋಳಿವಾಡ ಎಚ್ಚರಿಕೆ ನೀಡಿದರು.

ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ
ರಾಣೇಬೆನ್ನೂರ :ಗೊಬ್ಬರದ ಕತಕ ಅಭಾವ ಸಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಬಿ. ಕೋಳಿವಾಡ ಎಚ್ಚರಿಕೆ ನೀಡಿದರು.

ನಗರದ ತಾ.ಪಂ. ಸಭಾಭವನದಲ್ಲಿ ತಾಲೂಕಿನ ರಸಗೊಬ್ಬರ ಮತ್ತು ಬೀಜ ಮಾರಾಟಗಾರರ, ವ್ಯವಸಾಯ ಸೇವಾ ಸಹಕಾರಿ ಸಂಘಗಳ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಸಗೊಬ್ಬರ ಹಾಗೂ ಬೀಜದ ಕತಕ ಅಭಾವದ ಪರಿಸ್ಥಿತಿ ಕಂಡುಬಂದರೆ ನಾನೇ ಸ್ವತಃ ಅಂತಹ ವರ್ತಕರ ಗೋದಾಮುಗಳ ಮೇಲೆ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಅನಂತರ ನನ್ನ ಮೇಲೆ ತಪ್ಪು ಕಲ್ಪನೆ ಮಾಡಿಕೊಳ್ಳುವುದು ಬೇಡ ಎಂದರು.

ಕೃಷಿ ಅಧಿಕಾರಿಗಳ ಹೇಳಿಕೆಯಂತೆ ಮುಂಗಾರು ಹಂಗಾಮಿನ ಸಲುವಾಗಿ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರ ಹಾಗೂ ಬೀಜದ ದಾಸ್ತಾನು ಮಾಡಲಾಗಿದೆ ಎಂದು ತಾವು ಭಾವಿಸುವುದಾಗಿ ತಿಳಿಸಿದ ಶಾಸಕರು ಈ ಕುರಿತು ವರ್ತಕರ ಸಮಸ್ಯೆಗಳು ಏನಾದರೂ ಇದ್ದಲ್ಲಿ ತಿಳಿಸುವಂತೆ ಕೋರಿದರು.

ವರ್ತಕರ ಪರವಾಗಿ ಮಾತನಾಡಿದ ಅಂದಾನೆಪ್ಪ ಅಸುಂಡಿ, ಸೊಸೈಟಿಯಿಂದ ಮಾರಾಟ ಮಾಡಲಾಗುವ ಡಿಎಪಿ ಗೊಬ್ಬರದ ಮೇಲೆ 980ರೂ. ಗಳಾದರೆ ಖಾಸಗಿ ವರ್ತಕರಿಗೆ 1200 ರೂ. ದರದಂತೆ ಮಾರಾಟ ಮಾಡಬೇಕಾಗಿದೆ. ದಯವಿಟ್ಟು ಬೆಲೆ ತಾರತಮ್ಯ ಹೋಗಲಾಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಹಿರೇಮಾಗನೂರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಂಜನಗೌಡ ಪಾಟೀಲ, ಫೆಡರೇಷನ್ ಮೂಲಕ ಸಹಕಾರಿ ಸಂಘಗಳಿಗೆ ಪೂರೈಸಲಾದ ಗೊಬ್ಬರ ಹಳೆ ದಾಸ್ತಾನಾಗಿದ್ದರಿಂದ ಬೆಲೆ ಕಡಿಮೆ ಇದೆ. ಹೊಸ ಸ್ಟಾಕ್ ಬಂದರೆ ದರದ ವ್ಯತ್ಯಾಸ ಸರಿಯಾಗಲಿದೆ ಎಂದರು.

ಕುಪ್ಪೇಲೂರಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರೊಬ್ಬರು ಮಾತನಾಡಿ, ಎಪಿಎಂಸಿಯಿಂದ ಸಹಕಾರಿ ಸಂಘಕ್ಕೆ ಗೋದಾಮು ಹಸ್ತಾಂತರಿಸಲು ಆದೇಶಿಸಲಾಗಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರಸಗೊಬ್ಬರ ದಾಸ್ತಾನು ಮಾಡಲು ಗೋದಾಮು ಖಾಲಿಯಿಲ್ಲ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಕೋಳ ತಾ.ಪಂ. ಸದಸ್ಯ ಬಿ.ಐ. ಪಾಟೀಲ ತಮ್ಮ ಗ್ರಾಮದಲ್ಲಿಯೂ ಇದೇ ಸಮಸ್ಯೆಯಿದ್ದು, ಅದಕ್ಕೆ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಇಬ್ಬರ ಹೇಳಿಕೆ ಆಲಿಸಿದ ಶಾಸಕ ಕೆ.ಬಿ.ಕೋಳಿವಾಡರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಕೃಷಿ ಅಧಿಕಾರಿ ನಾಗನಗೌಡರಿಗೆ ಆದೇಶ ನೀಡಿದರು. ಇದೇ ವೇಳೆ ಬೆಳೆ ವಿಮೆ ಕುರಿತಂತೆ ಜನರಲ್ಲಿ ಜಾಗತಿ ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟನಲ್ಲಿ ಪಿಡಿಒಗಳು ಹಾಗೂ ಚೇರಮನ್‌ರು ರೈತರ ಮನವೊಲಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗನಗೌಡ ಮಾತನಾಡಿ, ಬೆಳೆ ವಿಮೆ ಕಂತು ಪಾವತಿಸಲು 31-08-2013 ಕೊನೆಯ ದಿನವಾಗಿದ್ದು, ಕಳೆದ ಸಾಲಿನಲ್ಲಿ 121 ಲಕ್ಷ ರೂ. ಬೆಳೆ ವಿಮೆ ಪರಿಹಾರ ಬಂದಿದೆ ಎಂದರು.

ಜಿ.ಪಂ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮುದ್ದಪ್ಪಳವರ ಮಾತನಾಡಿ, ಯಾವಾವ ಬೆಳೆಗಳಿಗೆ ಎಷ್ಟೆಷ್ಟು ವಿಮೆ ಕಂತು ಪಾವತಿಸಬೇಕು ಎಂಬುದರ ಕುರಿತು ಕೃಷಿ ಅಧಿಕಾರಿಗಳು, ಪಿಡಿಒಗಳು ತಾಲೂಕಿನ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ತಹಸೀಲ್ದಾರ ಕೆ.ಎಚ್. ಶಿವಕುಮಾರ ಮಾತನಾಡಿ, ಸರಕಾರದ ನಿಯಮಾವಳಿ ಪ್ರಕಾರ ರಸಗೊಬ್ಬರ ವರ್ತಕರು ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಹಾಗೂ ತಮ್ಮ ಅಂಗಡಿಗಳಲ್ಲಿ ಎಂಆರ್‌ಪಿ ದರಪಟ್ಟಿ ಪ್ರಕಟಿಸಬೇಕು ಹಾಗೂ ಅದರಂತೆ ಮಾರಾಟ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಬೇರೆ ತಾಲೂಕಿನ ರೈತರಿಗೆ ಬೀಜ, ಗೊಬ್ಬರ ಮಾರಾಟ ಮಾಡಬಾರದು ಎಂದು ಎಚ್ಚರಿಸಿದರು.

ತಾಲೂಕು ರಸಗೊಬ್ಬರ ಹಾಗೂ ಬೀಜ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ಕೃಷಿ ಅಧಿಕಾರಿ ಜಿ.ಎಂ.ಬತ್ತಿಕೊಪ್ಪ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶಿವಾನಂದ ಹಾವೇರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ