Please enable javascript.ತೆರೆಮರೆಗೆ ಸರಿದ ಬುಡಬುಡಿಕೆ ಕಸುಬು - ತೆರೆಮರೆಗೆ ಸರಿದ ಬುಡಬುಡಿಕೆ ಕಸುಬು - Vijay Karnataka

ತೆರೆಮರೆಗೆ ಸರಿದ ಬುಡಬುಡಿಕೆ ಕಸುಬು

ವಿಕ ಸುದ್ದಿಲೋಕ 24 May 2014, 5:00 am
Subscribe

ಹಲವಾರು ಜಾತಿ, ಉಪಜಾತಿಗಳು ಹಾಗೂ ಬುಡಕಟ್ಟು ಜನಾಂಗಳನ್ನು ಒಳಗೊಂಡ ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಹಲವು ಜಾತಿ, ಜನಾಂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ

ತೆರೆಮರೆಗೆ ಸರಿದ ಬುಡಬುಡಿಕೆ ಕಸುಬು
ಸಂತೋಷ ಅಪ್ಪಾಜಿ ಅಕ್ಕಿಆಲೂರು ಹಲವಾರು ಜಾತಿ, ಉಪಜಾತಿಗಳು ಹಾಗೂ ಬುಡಕಟ್ಟು ಜನಾಂಗಳನ್ನು ಒಳಗೊಂಡ ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಹಲವು ಜಾತಿ, ಜನಾಂಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಭಿನ್ನತೆಗಳಿದ್ದರೂ ಒಟ್ಟು ಭಾರತೀಯ ಸಂಸ್ಕೃತಿಯ ಮೂಲದೊಂದಿಗೆ ಅವು ಹಾಸುಹೊಕ್ಕಾಗಿವೆ.

ಕಾಲಚಕ್ರ ಉರುಳಿದಂತೆ ಹಳೆಯದೆಲ್ಲಾ ಮರೆಯಾಗುತ್ತ, ನೆನಪು ಮಾತ್ರ ನಮ್ಮಲ್ಲಿ ಉಳಿದು ಹೋಗುತ್ತಿದೆ. ಆ ನೆನಪುಗಳನ್ನು ಕೆಣಕಿದಾಗ ನೇಪಥ್ಯಕ್ಕೆ ಸರಿದ ಅನೇಕ ಜಾನಪದ ವತ್ತಿಪರ ಹಗಲು ವೇಷಗಾರರು, ತಂಬೂರಿ ದಾಸಯ್ಯ, ಹಾವಾಡಿಗ, ಬುಡಬುಡಕಿಗಾರರು ಹೀಗೆ ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದ ಅನೇಕ ವತ್ತಿನಿರತರ ಸಾಲು ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಇಂದು ಅವರೆಲ್ಲ ಅನಿವಾರ್ಯವಾಗಿ ತಮ್ಮ ವತ್ತಿಯಿಂದ ನಿವತ್ತರಾಗಿದ್ದು ನಮ್ಮ ಪರಂಪರೆಯ ಕೊಂಡಿ ಕಳಚಿದಂತಾಗಿದೆ.

ಆಧುನಿಕತೆಯ ಅಬ್ಬರಕ್ಕೆ ತಮ್ಮ ಬದುಕುಗಳನ್ನು ಹೊಂದಿಸಿಕೊಳ್ಳಲಾಗದೆ, ಪ್ರತಿದಿನ ಅಸಹನೀಯ ಜೀವನ ನಡೆಸುತ್ತಿರುವ ಸಮುದಾಯಗಳ ಪೆಕಿ ಬುಡಬುಡಿಕೆ ಜನಾಂಗವೂ ಒಂದು. ಸಾಕ್ಷಾತ್ ಶಿವನ ವರ ಪ್ರಸಾದವೆಂದೇ ಹೇಳಿಕೊಳ್ಳುವ ಬುಡಬುಡಿಕೆ ಜನಾಂಗ ಆಧುನಿಕತೆಯ ಸೋಂಕಿಗೆ ಮಂಕಾಗಿ, ಬುಡಬುಡಿಕೆಯನ್ನು ಬಡಿಬಡಿಸದೆ ನೇಪಥ್ಯಕ್ಕೆ ಸರಿಯುತ್ತಿದೆ.

ಈ ಸಮುದಾಯದ್ದು ಮೂಲತಃ ಅಲೆಮಾರಿ ಜೀವನ. ಇತ್ತೀಚೆಗೆ ನಿರ್ದಿಷ್ಟ ಒಂದು ಕಡೆ ನೆಲೆಯೂರಿ ಜೀವನ ನಡೆಸುವ ಶೆಲಿಯನ್ನು ಮೆಗೂಡಿಸಿಕೊಂಡಿದ್ದಾರೆ. ಶಿವನ ವೇಷಧಾರಿಗಳಾಗಿ ಬುಡಬುಡಿಕೆ ಹಾಗೂ ಗಂಟೆ ಬಾರಿಸುತ್ತಾ ಭಿಕ್ಷೆ ಬೇಡುವ ಇವರು, ಭವಿಷ್ಯದಲ್ಲಿ ಉಂಟಾಗುವ ಅನಾಹುತಗಳ ಬಗ್ಗೆ ಜನರನ್ನು ಎಚ್ಚರಿಸುತ್ತಾರೆ. ತಲೆಗೆ ಶಿವನ ಸಣ್ಣ ಪುತ್ಥಳಿಯಿರುವ ಪೇಟ, ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ಕರಿಮಣಿ ಮಾಲೆಗಳು, ಎಡಗೆಯಲ್ಲಿ ದೆವಶಕ್ತಿಯಿದೆ ಎಂದು ನಂಬಲಾದ ಕೆಕಡಗ, ಭುಜದಿಂದ ಇಳಿಬಿಟ್ಟಿರುವ ಶಲ್ಯ, ತೋಳು ಮುಚ್ಚುವಂತೆ ಧರಿಸಲಾದ ದಪ್ಪಪೂರ್ಣ ಅಂಗಿ, ಸೊಂಟದಲ್ಲಿ ಸದಾ ತೂಗುತ್ತಿರುವ ಗಂಟೆ, ಕೆಯಲ್ಲಿ ಶಬ್ದ ಮಾಡುತ್ತಿರುವ ಚಿಕ್ಕ ಡಮಗರುಗಳು ಇವರ ವೇಷಭೂಷಣ.

ಒಂದು ಊರಿಗೆ ಇವರು ಭಿಕ್ಷೆ ಬೇಡಲು ಹೋಗುವ ಮುನ್ನ ಪೂರ್ವಭಾವಿಯಾಗಿ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಊರಿನ ಗಡಿ ಸುತ್ತಲೂ ಮೂರು ದಿನಗಳ ಕಾಲ ಸುತ್ತುತ್ತಾರೆ. ಈ ರೀತಿ ಸುತ್ತುವುದರಿಂದ ಈ ಊರಿನಲ್ಲಿ ಮುಂದೆ ಆಗಬಹುದಾದ ವಿದ್ಯಮಾನಗಳನ್ನು ಬುಡಬುಡಿಕೆ ಶಬ್ದದ ಮುಖೇನ ತಿಳಿದುಕೊಳ್ಳುತ್ತಾರಂತೆ. ನಾಲ್ಕನೇ ದಿನ ಭಿಕ್ಷಾಟನೆ ಪ್ರಾರಂಭಿಸುವ ಮುನ್ನ, ಊರು ಬಾಗಿಲು ಪ್ರದೇಶಕ್ಕೆ ತೆರಳಿ ತಮ್ಮ ಇಷ್ಟ ದೇವತೆಗಳನ್ನು ಪ್ರಾರ್ಥಿಸುತ್ತಾರೆ. ನಂತರ ಊರು ಪ್ರವೇಶಿಸಿ ಬುಡಬುಡಿಕೆ ಮತ್ತು ಗಂಟೆಯನ್ನು ಬಾರಿಸುತ್ತಾ, ಮುಂದೆ ಘಟಿಸಬಹುದಾದ ಘಟನೆಗಳ ಬಗ್ಗೆ ಎಚ್ಚರಿಕೆ ನೀಡುತ್ತ ಮನೆಮನೆಗೆ ಬರುತ್ತಾರೆ. ಸರಸ್ವತಿ ದೇವಿಯ ಅನುಗ್ರಹದಿಂದ ಬುಡಬುಡಿಕೆ ಶಬ್ದದ ಆಧಾರದ ಮೇಲೆ ಕಣಿ ನುಡಿಯುತ್ತೇವೆ ಎಂದು ಹೇಳಿಕೊಳ್ಳುವ ಇವರು, ಊರಿನ ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಧಾರ್ಮಿಕವಾಗಿ ಶಿವ ಹಾಗೂ ಶಕ್ತಿ ದೇವತೆಯ ಆರಾಧಕರಾಗಿದ್ದು, ತಮ್ಮ ಇಷ್ಟ ದೇವತೆಗಳ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ದಸರೆ, ಯುಗಾದಿ ಮತ್ತು ದೀಪಾವಳಿ ಇವರು ಆಚರಿಸುವ ಪ್ರಮುಖ ಹಬ್ಬಗಳು. ಕುಟುಂಬ ಸದಸ್ಯರಲ್ಲಿ ಮರಾಠಿ ಭಾಷೆ ಹಾಗೂ ಅನ್ಯರೊಂದಿಗೆ ತೆಲುಗು, ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಾರೆ.

ಕಳೆದ 40 ವರ್ಷಗಳಿಂದ ಈ ವತ್ತಿ ಮಾಡಿಕೊಂಡು ಬರುತ್ತಿದ್ದೇವೆ. ಕೂಲಿನಾಲಿ ಸಿಕ್ಕಿದಾಗ ದುಡಿಯಲು ಹೋಗುತ್ತೇವೆ ಎನ್ನುವ 60 ವರ್ಷದ ಬುಡಬುಡಿಕೆ ರಾಮಣ್ಣ, ತನ್ನ ತಂದೆಯ ಕಾಲದ ಜೀವನ ಮತ್ತು ಈಗಿನ ಆಧುನಿಕ ಜೀವನ ಪದ್ಧತಿಗೆ ಹೋಲಿಸಿಕೊಂಡು ಕಾಲ ಎಷ್ಟೊಂದು ಬದಲಾಗಿಬಿಟ್ಟಿದೆ ಎಂದು ನಿಟ್ಟುಸಿರು ಬಿಡುತ್ತಾರೆ. ವರ್ಷಕ್ಕೆ ಕಾಲಕಾಲಕ್ಕೆ ಮಳೆ, ಬೆಳೆಯಾಗುತ್ತಿದ್ದ ಕಾಲವದು. ನಮ್ಮ ಗುಡಿಸಲುಗಳು ದವಸ ಧಾನ್ಯಗಳಿಂದ ತುಂಬಿರುತ್ತಿದ್ದವು. ಊರಿನ ಪ್ರಮುಖರಿಂದ ಕುರಿ, ಮೇಕೆಗಳನ್ನು ದಾನವಾಗಿ ಪಡೆಯುತ್ತಿದ್ದೆವು. ಹಾಲು ಮಜ್ಜಿಗೆಯನ್ನು ಯಾರೂ ಮಾರಾಟ ಮಾಡುತ್ತಿರಲಿಲ್ಲ. ಈಗ ಊರೆಲ್ಲಾ ತಿರುಗಿದರೂ ಹತ್ತಿಪ್ಪತ್ತು ರೂಪಾಯಿ ಪುಡಿಗಾಸು ಹಾಗೂ ಒಂದಷ್ಟು ಉಟ್ಟುಬಿಟ್ಟ ಬಟ್ಟೆ ಸಿಗುತ್ತದೆ ಅಷ್ಟೆ. ಮೊದಲಿಗೆ ತಮ್ಮ ಜನಾಂಗ ಈಶ್ವರನಲ್ಲಿ ಪ್ರಾರ್ಥಿಸಿ ಬದುಕುವ ದಾರಿಗಾಗಿ ಮೊರೆಯಿಟ್ಟಿತಂತೆ, ಅಂದು ಶಿವನಿಂದ ಪಡೆದ ಡಮರುಗವನ್ನು ಚಿಕ್ಕದಾದ ಬುಡಬುಡಿಕೆಯನ್ನಾಗಿ ಪರಿವರ್ತಿಸಿಕೊಂಡು ನಮ್ಮ ಹಿರಿಯರು ಜೀವನ ಪ್ರಾರಂಭಿಸಿದರಂತೆ, ಅದನ್ನೇ ನಾವು ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ತಮ್ಮ ಸಂಪ್ರದಾಯ ಬದ್ಧ ಮೂಲ ಕಥೆ ಹೇಳುತ್ತಾರೆ.

ಈ ಜನಾಂಗದಲ್ಲಿ ಹೆಣ್ಣು ಗಂಡು ಬೇಧವಿಲ್ಲದೆ ಮದ್ಯ ಸೇವನೆ ಮಾಡುತ್ತಾರೆ. ಸದ್ಯ ಬುಡಬುಡಿಕೆಗಳು ಹಾವೇರಿ, ಧಾರವಾಡ, ಕಾರವಾರ, ಗದಗ ಸೇರಿದಂತೆ ಇನ್ನಿತರ ಕೆಲವು ಜಿಲ್ಲೆಗಳಲ್ಲಿ ಸ್ಥಿರವಾಗಿ ನೆಲೆಸಿದ್ದಾರೆ. ಹತ್ತು ಹಲವು ಕಾರಣಗಳಿಂದ ಕಣ್ಮರೆಯಾಗುತ್ತಿರುವ ಇಂಥ ಸಂಸ್ಕೃತಿಗಳ ಪುನರುತ್ಥಾನಕ್ಕೆ ಸರ್ಕಾರ ಕಾಳಜಿ ವಹಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ