Please enable javascript.ತಾಲೂಕು ಮಹರ್ಷಿ ವಾಲ್ಮೀಕಿ,ನೌಕರರ ಒಕ್ಕೂಟ ಸ್ಥಾಪನೆಗೆ ನಿರ್ಣಯ - determine the establishment of employees union - Vijay Karnataka

ನೌಕರರ ಒಕ್ಕೂಟ ಸ್ಥಾಪನೆಗೆ ನಿರ್ಣಯ

Vijaya Karnataka 20 Dec 2018, 5:00 am
Subscribe

ಶಿಗ್ಗಾವಿ: ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ನೌಕರರ ಸಂಘ ರಚಿಸುವ ಕುರಿತು ಪೂರ್ವಭಾವಿಯಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಜದ ನೌಕರರ ಸಭೆಯು ತ್ವರಿತವಾಗಿ ನೌಕರರ ಒಕ್ಕೂಟ ಸ್ಥಾಪನೆಗೆ ಒಮ್ಮತದ ನಿರ್ಣಯ ಕæೖಗೊಂಡಿತು.

determine the establishment of employees union
ನೌಕರರ ಒಕ್ಕೂಟ ಸ್ಥಾಪನೆಗೆ ನಿರ್ಣಯ
ಶಿಗ್ಗಾವಿ: ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ನೌಕರರ ಸಂಘ ರಚಿಸುವ ಕುರಿತು ಪೂರ್ವಭಾವಿಯಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಜದ ನೌಕರರ ಸಭೆಯು ತ್ವರಿತವಾಗಿ ನೌಕರರ ಒಕ್ಕೂಟ ಸ್ಥಾಪನೆಗೆ ಒಮ್ಮತದ ನಿರ್ಣಯ ಕæೖಗೊಂಡಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಾಲ್ಮೀಕಿ ಪ್ರಶಸ್ತಿ ವಿಜೇತ ಗುರುನಗೌಡ್ರ ಪಾಟೀಲ, ತಾಲೂಕಿನಾದ್ಯಂತ ಹೆಚ್ಚು ಪ್ರಮಾಣದಲ್ಲಿ ಸಮಾಜದ ನೌಕರರಿದ್ದಾರೆ. ನೌಕರರ ಒಕ್ಕೂಟ ರಚನೆಯಿಂದ ಸಮಾಜದ ಸಂಘಟನೆ, ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ನೌಕರರ ಒಕ್ಕೂಟ ರಚನೆಗೆ ಸಹಾಯ, ಸಹಕಾರ ನೀಡಬೇಕು. ಸಮಾಜ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ಹೋಗಲಾಡಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸಮಾಜದ ಚಿಂತನೆಯಾಗಬೇಕು ಎಂದರು.

ನ್ಯಾಯವಾದಿ ಬಿ.ಎ.ಬಾಲೇಹೊಸೂರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಿದರೆ ನಮಗೇನು ಎಂದು ವೈಯಕ್ತಿಕ ಲಾಭದ ಬಗ್ಗೆ ಚಿಂತನೆ ಮಾಡದೆ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಚಿಂತನೆ ಮಾಡಬೇಕು. ಸಮಾಜಮುಖಿಯಾಗಿ ಕೆಲಸ ಮಾಡುವ ವ್ಯಕ್ತಿಗೆ ಸಮಾಜ ದೊಡ್ಡ ಸ್ಥಾನ, ಗೌರವ ನೀಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಆದ್ಧೂರಿ ಜಾತ್ರೆಗೆ ತಾಲೂಕಿನ ಸಮಾಜ ಬಾಂಧವರು ಸಹಕಾರಿಯಾಗಲು ಪ್ರತಿಯೊಬ್ಬರು ಶ್ರಮಿಸಲು ನಿರ್ಣಯಿಸಲಾಯಿತು. ಜನತಾ ಬಜಾರ ನಿರ್ದೇಶಕ ಮಲ್ಲಿಕಾರ್ಜುನಗೌಡ್ರ ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಶ್ರೀರಾಮಲು ಅಭಿಮಾನಿ ಬಳಗದ ಅದ್ಯಕ್ಷ ಮಲ್ಲೇಶಪ್ಪ ಚೋಟ್ಟಪ್ಪನವರ, ಶಾಂತಪ್ಪ ತಳವಾರ, ಬಸುರಾಜ ಕಬನೂರ, ಎಲ್‌.ಎಫ್‌.ಪಾಟೀಲ, ಸಿ.ಎಸ್‌.ಇಂಗಳಕಿ, ಬಿ.ಎಚ್‌.ಓಲೆಕಾರ, ಬಿ.ಕೆ.ಹಿತ್ತಲಮನಿ, ಡಿ.ವೈ.ನಾಯಕ, ಎಂ.ವೈ.ಬೊಮ್ಮಕ್ಕನವರ ಸೇರಿದಂತೆ ಶಿಕ್ಷ ಕರು, ಪೊಲೀಸ್‌ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷ ಕ ಸಿ.ಎನ್‌.ಕಲಕೋಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ