ಆ್ಯಪ್ನಗರ

ಬ್ಯಾಡಗಿಯಲ್ಲಿ ಗರ್ಜಿಸಿದ ಜೆಸಿಬಿ

ಬ್ಯಾಡಗಿ:ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ -136(ಪಟ್ಟಣದ ಮುಖ್ಯರಸ್ತೆ) ಎರಡನೇ ಹಂತದ ಅಗಲೀಕರಣ ಕಾಮಗಾರಿಗಾಗಿ ಚುಮು ಚುಮು ನಸುಕಿನಲ್ಲಿಯೇ

ವಿಕ ಸುದ್ದಿಲೋಕ 14 Jun 2016, 5:00 am

ಬ್ಯಾಡಗಿ:ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ -136(ಪಟ್ಟಣದ ಮುಖ್ಯರಸ್ತೆ) ಎರಡನೇ ಹಂತದ ಅಗಲೀಕರಣ ಕಾಮಗಾರಿಗಾಗಿ ಚುಮು ಚುಮು ನಸುಕಿನಲ್ಲಿಯೇ ಜೆಸಿಬಿಗಳು ಭಾರೀ ಸದ್ದಿನೊಂದಿಗೆ ಭಾನುವಾರ ಅತಿಕ್ರಮಣದಾರರನ್ನು ತೆರವುಗೊಳಿಸಿದವು.

ಕೆಲ ವ್ಯಾಪಾರಸ್ಥರ ವಿರೋಧದ ನಡುವೆಯೂ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಕೈಗೊಂಡಿತು.

ಜೂ.4ರಂದು ಮುಖ್ಯರಸ್ತೆಯಲ್ಲಿ ಅತಿಕ್ರಮಿಸಿದ ಜಾಗವನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸುವಂತೆ 7 ದಿನಗಳ ಗಡುವು ವಿಧಿಸಿ ಮುಖ್ಯರಸ್ತೆಯಲ್ಲಿನ ವ್ಯಾಪಾರಸ್ಥರಿಗೆ ತಾಲೂಕಾಡಳಿತ ನೋಟಿಸ್‌ ಜಾರಿಗೊಳಿಸಿತ್ತು. ಜೂ.11ಕ್ಕೆ ವಿಧಿಸಿದ ಗಡುವು ಮುಕ್ತಾಯವಾಗಿದ್ದು ಭಾನುವಾರ ಜೂ.12ರಂದು ಬೆಳಗ್ಗೆ 5.30ರಿಂದಲೆ ತಹಸೀಲ್ದಾರ ಶಿವಶಂಕರ ನಾಯಕ್‌ ಹಾಗೂ ಪೊಲೀಸ್‌ ಕಾವಲಿನೊಂದಿಗೆ ತೆರವು ಕಾರಾರ‍ಯಚರಣೆ ಆರಂಭವಾಯಿತು.

ತೆರವು ಕಾರಾರ‍ಯಚರಣೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು, ಸದಾ ಜನರಿಂದ ತುಂಬಿರುತ್ತಿದ್ದ ಮುಖ್ಯರಸ್ತೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದವು.

ಮುಖ್ಯ ರಸ್ತೆಯಲ್ಲಿನ ಸುಮಾರು ನೂರಕ್ಕೂ ಹೆಚ್ಚು ವ್ಯಾಪಾರಸ್ಥರು ಹಲವಾರು ವರ್ಷಗಳಿಂದ ಅಗಲೀಕರಣ ವಿರೋಧಿಸಿ ಕೋರ್ಟ್‌ ಕಚೇರಿಗಳನ್ನು ತಿರುಗಿ ವಿರೋಧ ವ್ಯಕ್ತಪಡಿಸಿದ್ದರೂ ಇದ್ಯಾವುದಕ್ಕೂ ಮಣೆ ಹಾಕದೆ ತೆಗೆದುಕೊಂಡ ದಿಟ್ಟ ನಿರ್ಧಾರದಂತೆಯೇ ತಾಲೂಕಾಡಳಿತವು ಅತಿಕ್ರಮಣ ತೆರವುಗೊಳಿಸಲು ಮುಂದಾಗಿತ್ತು.

ಬೇರೆ ಮಾರ್ಗದ ಮೂಲಕ ಸಂಚಾರ: ತೆರವು ಕಾರಾರ‍ಯಚರಣೆ ಹಿನ್ನೆಲೆಯಲ್ಲಿ ಮುಖ್ಯರಸ್ತೆಯಲ್ಲಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿತ್ತು. ಮಾರ್ಗ ಬದಲಿಸಿ ಸಾರಿಗೆ ವಾಹನಗಳನ್ನು ಸಂಚಾರ ಮಾಡುವಂತೆ ನೋಡಿಕೊಳ್ಳಲಾಯಿತು. ಹಾವೇರಿ ಕಡೆಗೆ ಸಂಚರಿಸುವ ವಾಹನಗಳನ್ನು ಪಟ್ಟಣದ ಸುಭಾಷ ಸರ್ಕಲ್‌ನಲ್ಲಿಯೇ ಸ್ಥಗಿತಗೊಳಿಸಲಾಗಿತ್ತು, ಇನ್ನೂ ಹಿರೇಕೆರೂರ ಕಡೆಗೆ ಸಂಚರಿಸುವ ವಾಹನಗಳನ್ನು ಎಸ್‌ಜೆಜೆಎಂ ಹೈಸ್ಕೂಲ್‌ ಬಳಿ ನಿಲ್ಲುವಂತೆ ನೋಡಿಕೊಳ್ಳಲಾಯಿತು. ಇದರಿಂದ ಪಟ್ಟಣದ ಬಸ್‌ನಿಲ್ದಾಣ ವಾಹನ ಮತ್ತು ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಾವುದೇ ಸಾರಿಗೆ ವಾಹನಗಳು ಬಸ್‌ನಿಲ್ದಾಣಕ್ಕೆ ಪ್ರವೇಶ ನೀಡಲಿಲ್ಲ.

ನಿಷೇಧಾಜ್ಞೆ ಜಾರಿ

ಮುಂಜಾಗ್ರತಾ ಕ್ರಮವನ್ನು ಜಾರಿಗೊಳಿಸಿದ ತಾಲೂಕಾಡಳಿತ ಯಾವುದೇ ರೀತಿಯ ಅವಘಡಗಳು ಸಂಭವಿಸದಿರಲಿ ಎಂದು ತಾಲೂ ಕಾಡಳಿತವು ಪಟ್ಟಣದಾತ್ಯಂತ ಭಾನುವಾರ ಬೆಳಗ್ಗೆಯಿಂದ ಜೂ.13 ರರ ಬೆಳಗಿನ ವರೆಗೂ 144ನೇ ಸೆಕ್ಷ ನ್‌ (ನಿಷೇಧಾಜ್ಞೆ) ಜಾರಿಗೊಳಿಸಿತ್ತು.

ಮುಖ್ಯರಸ್ತೆಯಲ್ಲಿ ಕಟ್ಟಡವನ್ನು ಹೊಂದಿರುವ ಚೇತನ್‌ ಕಬ್ಬೂರ ಎಂಬುವರು ತಾಲೂಕಾಡಳಿತವು ಕಾರಾರ‍ಯಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡ ಘಟನೆ ನಡೆಯಿತು. ತಹಸೀಲ್ಧಾರ ಶಿವಶಂಕರ ನಾಯಕ್‌ ಚಿತ್ರೀಕರಣ ನಡೆಸದಂತೆ ಸೂಚನೆ ನೀಡಿದರೂ ಅದನ್ನು ಲೆಕ್ಕಿಸದೇ ಅವಾಚ್ಯ ಶಬ್ದ ಗಳಿಂದ ನಿಂದಿಸುವ ಮೂಲಕ ಕಾರಾರ‍ಯಚರಣೆಗೆ ಅಡ್ಡಿಪಡಿಸಿದ್ದಲ್ಲದೇ, ಕಾರಾರ‍ಯಚರಣೆಯ ವಿಡಿಯೋ ಚಿತ್ರಿಕರಣಕ್ಕೆ ಮುಂದಾದರು. ಇದರಿಂದ ಆಕ್ರೋಶಗೊಂಡ ಪೊಲೀಸರು ಚೇತನ್‌ ಕಬ್ಬೂರ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡರು.

ಹಿರಿಯ ಅಧಿಕಾರಿಗಳ ದಂಡು: ತೆರವು ಕಾರಾರ‍ಯಚರಣೆ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ಪೊಲೀಸ್‌ ಇಲಾಖೆಯ ಬಹುತೇಕ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಡಿವೈಎಸ್‌ಪಿ ಗೋಪಾಲ ಬ್ಯಾಕೋಡ ಉಪವಿಭಾಗಾಧಿಕಾರಿ ಬಸವರಾಜಪ್ಪ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿ ಗಳು ಪಟ್ಟಣದಲ್ಲೇ ಮುಕ್ಕಾಂ ಹೂಡಿದ್ದಾರೆ.

ಪೊಲೀಸ್‌ ಬಂದೋಬಸ್ತ್‌

ಬ್ಯಾಡಗಿಯಲ್ಲಿ ತೆರವು ಕಾರಾರ‍ಯಚರಣೆಯ ಕಾರ‍್ಯಕ್ರಮಕ್ಕೆ ತಾಲೂಕಾ ಮಟ್ಟದ ಎಲ್ಲ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಡಿಶನಲ್‌ ಎಸ್‌ಪಿ ನೇತೃತ್ವದಲ್ಲಿ 1 ಡಿವೈಎಸ್‌ಪಿ, 4 ಸಿಪಿಐ, 14 ಪಿಎಸ್‌ಐ, 14 ಎಎಸ್‌ಐ, 107 ಕಾನ್‌ಸ್ಟೇಬಲ್ಸ್‌, 21 ಮಹಿಳಾ ಪೊಲೀಸ್‌ ಮತ್ತು 3 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವ್ಯಾನ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ