ಆ್ಯಪ್ನಗರ

ನಿರ್ಮಲ ಗ್ರಾಮವನ್ನಾಗಿಸಲು ಶ್ರಮಿಸಿ

ತುಮ್ಮಿನಕಟ್ಟಿ: ಗ್ರಾಮೀಣ ಪ್ರದೇಶದಲ್ಲಿಪ್ರತಿಮನೆಗೆ ಒಂದು ಬಚ್ಚಲದ ನೀರು ಇಂಗುವ ಗುಂಡಿ ನಿರ್ಮಿಸಿ ಅನಾರೋಗ್ಯ ತಡೆಯಿರಿ ನಿಮ್ಮ ಗ್ರಾಮವನ್ನು ನಿರ್ಮಲ ಗ್ರಾಮವನ್ನಾಗಿ ಮಾಡಿ ಎಂದು ಗ್ರಾ.ಪಂ. ಅಧ್ಯಕ್ಷ ರಾಜಪ್ಪ ಪೂಜಾರ ಹೇಳಿದರು.

Vijaya Karnataka 2 Sep 2020, 5:00 am
ತುಮ್ಮಿನಕಟ್ಟಿ: ಗ್ರಾಮೀಣ ಪ್ರದೇಶದಲ್ಲಿಪ್ರತಿಮನೆಗೆ ಒಂದು ಬಚ್ಚಲದ ನೀರು ಇಂಗುವ ಗುಂಡಿ ನಿರ್ಮಿಸಿ ಅನಾರೋಗ್ಯ ತಡೆಯಿರಿ ನಿಮ್ಮ ಗ್ರಾಮವನ್ನು ನಿರ್ಮಲ ಗ್ರಾಮವನ್ನಾಗಿ ಮಾಡಿ ಎಂದು ಗ್ರಾ.ಪಂ. ಅಧ್ಯಕ್ಷ ರಾಜಪ್ಪ ಪೂಜಾರ ಹೇಳಿದರು.
Vijaya Karnataka Web 01 TMK 02_23
ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿಯಲ್ಲಿಮನ್ರೇಗಾ ಯೋಜನೆಯ ವಿಶೇಷ ಅಭಿಯಾನಕ್ಕೆ ರಾಜು ಪೂಜಾರ ಚಾಲನೆ ನೀಡಿದರು.


ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿಗ್ರಾ.ಪಂ. ಕಚೇರಿ ಆವರಣದಲ್ಲಿಮಂಗಳವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ, ಜಿ.ಪಂ. ಆಶ್ರಯದಲ್ಲಿಮನ್ರೇಗಾ ಯೋಜನೆಯಡಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರಕಾರವು ಗ್ರಾ.ಪಂ. ಮಟ್ಟದಲ್ಲಿಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಚ್ಚಲ ಗುಂಡಿ ನಿರ್ಮಾಣ, ಪೌಷ್ಟಿಕ ತೋಟ ಕಾಮಗಾರಿ, ಅಣಬೆ ಬೇಸಾಯ, ಶೆಡ್‌ ನಿರ್ಮಾಣ ಇತ್ಯಾದಿ ಯೋಜನೆಗಳ ಲಾಭವನ್ನು ಸರ್ವಜನಿಕರು ಪಡೆಯಬೇಕೆಂದು ಹೇಳಿದರು.

ಪಿಡಿಒ ಸುಮಿತ್ರಾ ಬೂದಿಹಾಳ, ಹೊನ್ನಪ್ಪ ಅಜ್ಜೇರ, ನಾಗನಗೌಡ ಜೀವನಗೌಡ, ಶಂಕ್ರಪ್ಪ ಸುಂಕಾಪುರ, ಬಸವರೆಡ್ಡಿ ಸುಂಕಾಪುರ, ಆನಂದ ಕಮ್ಮಾರ, ಹೇಮಪ್ಪ ಗಂಧಣ್ಣನವರ, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ