ಆ್ಯಪ್ನಗರ

ತಹಸೀಲ್‌ ಕಚೇರಿಗೆ ಮನೆಯಿಂದಲೇ ನೀರಿನ ಬಾಟಲಿ ಒಯ್ಯಬೇಕು!

ರಟ್ಟೀಹಳ್ಳಿ: ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಹೋಗಬೇಕೆಂದರೆ ಮನೆಯಿಂದಲೇ ನೀರಿನ ಬಾಟಲಿ ತೆಗೆದುಕೊಂಡು ಹೋಗಲೇಬೇಕು. ಇಲ್ಲವೇ ಬಾಯಾರಿಕೆಯಿಂದ ಪರದಾಡುವುದು ಖಂಡಿತ. ಇನ್ನು ಶೌಚಾಲಯ ಹೋಗಬೇಕೆಂದು ಎನಿಸಿದರೆ ಗಿಡ, ಮರ ಸಂದಿಗೊಂದಿ ಹುಡುಕುವುದು ಅನಿವಾರ್ಯ.

Vijaya Karnataka 1 Feb 2019, 5:00 am
ರಟ್ಟೀಹಳ್ಳಿ: ಇಲ್ಲಿನ ತಹಸೀಲ್ದಾರ್‌ ಕಚೇರಿಗೆ ಹೋಗಬೇಕೆಂದರೆ ಮನೆಯಿಂದಲೇ ನೀರಿನ ಬಾಟಲಿ ತೆಗೆದುಕೊಂಡು ಹೋಗಲೇಬೇಕು. ಇಲ್ಲವೇ ಬಾಯಾರಿಕೆಯಿಂದ ಪರದಾಡುವುದು ಖಂಡಿತ. ಇನ್ನು ಶೌಚಾಲಯ ಹೋಗಬೇಕೆಂದು ಎನಿಸಿದರೆ ಗಿಡ, ಮರ ಸಂದಿಗೊಂದಿ ಹುಡುಕುವುದು ಅನಿವಾರ್ಯ.
Vijaya Karnataka Web take a bottle of water from home to tahsildel office
ತಹಸೀಲ್‌ ಕಚೇರಿಗೆ ಮನೆಯಿಂದಲೇ ನೀರಿನ ಬಾಟಲಿ ಒಯ್ಯಬೇಕು!


ಇದು ರಟ್ಟೀಹಳ್ಳಿ ತಹಸೀಲ್ದಾರ್‌ ಕಚೇರಿಯಲ್ಲಿನ ದುಸ್ಥಿತಿ. ಹೊಸ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಟ್ಟೀಹಳ್ಳಿಯಲ್ಲಿ ಪಟ್ಟಣದಿಂದ 3 ಕಿ.ಮೀ. ದೂರದಲ್ಲಿರುವ ಯುಟಿಪಿ ಕಚೇರಿಗಳನ್ನು ತಹಸೀಲ್ದಾರ್‌ ಕಚೇರಿಯಾಗಿ ಪರಿವರ್ತಿಸಲಾಗಿದೆ. ಆದರೆ ಈ ಆವರಣದಲ್ಲಿ ಮೂಲಸೌಲಭ್ಯಗಳು ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ.

ತಹಸೀಲ್ದಾರ್‌ ಕಚೇರಿಗೆ ಪ್ರತಿದಿನ ನೂರಾರು ಜನರು ನಾನಾ ಕೆಲಸದ ನಿಮಿತ್ತ ಬರುತ್ತಾರೆ. ಆದರೆ ಇಲ್ಲಿ ನೀರಿನ ವ್ಯವಸ್ಥೆ ಇಲ್ಲ. ಸುತ್ತಮುತ್ತಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ನೀರು ಸಿಗದೇ ಜನರು ಪರದಾಡುವಂತಾಗಿದೆ.

ಮೊದಲು ನೀರಿನ ವ್ಯವಸ್ಥೆ ಇತ್ತು. ಆದರೆ ಮೂರು ತಿಂಗಳ ಹಿಂದೆ ಮೋಟರ್‌ ಸುಟ್ಟು ನೀರಿನ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಮೋಟರ್‌ ದುರಸ್ತಿ ಕಾರ‍್ಯವಾಗಿದೆಯಾದರೂ ಮೋಟರ್‌ಗೆ ಸಂಪರ್ಕ ಕಲ್ಪಿಸುವ ವಿದ್ಯುತ್‌ ಕೇಬಲ್‌ ಸುಟ್ಟು ಹೋಗಿದೆ. ಇದರಿಂದ ನೀರು ಸಿಗುತ್ತಿಲ್ಲ. ಇಲ್ಲಿನ ಸಿಬ್ಬಂದಿ ಮನೆಯಿಂದಲೇ ಬಾಟಲ್‌ಗಳಿಂದ ನೀರು ತಂದು ಉಪಯೋಗಿಸುತ್ತಿದ್ದಾರೆ. ಆದರೆ ಸಾರ್ವಜನಿಕರಿಗೆ ಕುಡಿಯುವ ನೀರು ಸಿಗುತ್ತಿಲ್ಲ.

ಸಾರ್ವಜನಿಕ ಶೌಚಾಲಯವಿಲ್ಲ: ಇನ್ನು ಶೌಚಾಲಯ ಸಮಸ್ಯೆಯನ್ನು ಹೇಳತೀರದು. ಪುರುಷರು ಹೇಗೊ ಹೊರಹೋಗಿ ಶೌಚ ಪೂರೈಸಿಕೊಳ್ಳುತ್ತಾರೆ. ಆದರೆ ಮಹಿಳೆಯರು ಪರದಾಡುವಂತಾಗಿದೆ. ಈ ಬಗ್ಗೆ ಯಾರೂ ಗಮನಹರಿಸಿಲ್ಲ ಎಂದು ದೂರಲಾಗುತ್ತಿದೆ.

ಇನ್ನಾದರೂ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ