ಆ್ಯಪ್ನಗರ

ಘಟಕವಿದ್ದರೂ ಉದ್ಘಾಟನೆ ಭಾಗ್ಯವಿಲ್ಲ !

ಕುಮಾರಪಟ್ಟಣ : ರಾಣೇಬೆನ್ನೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಸ್ಥಾಪಿಸಿರುವ ವಾಟರ್‌ ಶೆಡ್‌ ಕಾಮಗಾರಿ ಪೂರ್ಣಗೊಂಡು ನಾಲ್ಕು ತಿಂಗಳು ಗತಿಸಿದರೂ, ಶುದ್ಧ ನೀರು ಕುಡಿಯುವ ಭಾಗ್ಯ ಮಾತ್ರ ಇದುವರೆಗೂ ಹನುಮನಹಳ್ಳಿ ಗ್ರಾಮಸ್ಥರಿಗೆ ಬಂದೊದಗಿಲ್ಲ.

Vijaya Karnataka 26 Apr 2018, 5:00 am
ಕುಮಾರಪಟ್ಟಣ : ರಾಣೇಬೆನ್ನೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಸ್ಥಾಪಿಸಿರುವ ವಾಟರ್‌ ಶೆಡ್‌ ಕಾಮಗಾರಿ ಪೂರ್ಣಗೊಂಡು ನಾಲ್ಕು ತಿಂಗಳು ಗತಿಸಿದರೂ, ಶುದ್ಧ ನೀರು ಕುಡಿಯುವ ಭಾಗ್ಯ ಮಾತ್ರ ಇದುವರೆಗೂ ಹನುಮನಹಳ್ಳಿ ಗ್ರಾಮಸ್ಥರಿಗೆ ಬಂದೊದಗಿಲ್ಲ.
Vijaya Karnataka Web theres no opening in the unit
ಘಟಕವಿದ್ದರೂ ಉದ್ಘಾಟನೆ ಭಾಗ್ಯವಿಲ್ಲ !


ಹನುಮನಹಳ್ಳಿ ಗ್ರಾಮದಲ್ಲಿ ಶುದ್ಧ ನೀರು ಪೂರೈಸಲು ದುರುಗಮ್ಮದೇವಿ ದೇವಸ್ಥಾನದ ಬಳಿ ಸ್ಥಾಪಿಸಿರುವ ಶುದ್ಧೀಕರಣ ಘಟಕಕ್ಕೆ ಯಂತ್ರಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದ ಕೆಲಸವೆಂದರೆ ಕೊಳವೆ ಬಾವಿಯ ಸಂಪರ್ಕ ಕಲ್ಪಿಸಿ ಚಾಲನೆ ನೀಡುವುದು ಮಾತ್ರ.

ಹನುಮನಹಳ್ಳಿ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ಸವಳು ಮತ್ತು ಫೊ್ಲೕರೈಡ್‌ಯುಕ್ತ ನೀರು ಸೇವಿಸಿ ಗ್ರಾಮಸ್ಥರು ಮೂಳೆ ಸಂಬಂಧಿ ಕಾಯಿಲೆಗೆ ತುತ್ತಾಗಿರುವ ಘಟನೆ ಈ ಹಿಂದೆ ನಡೆದಿದೆ. ಹನುಮನಹಳ್ಳಿ ಗ್ರಾಮವು ಮೂರು ರಸ್ತೆಗಳ ಕೇಂದ್ರ ಸ್ಥಾನವಾಗಿದೆ. ಸುಕ್ಷೇತ್ರ ಉಕ್ಕಡಗಾತ್ರಿಗೆ ಸಂಚರಿಸುವ ಸಾರಿಗೆ ಹಾಗೂ ಖಾಸಗಿ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇದಲ್ಲದೇ ರಾಣೇಬೆನ್ನೂರು ನಗರಕ್ಕೆ ಮುದೇನೂರು, ಮಾಕನೂರು ಕುಮಾರಪಟ್ಟಣದ ಮೂಲಕ ಹರಿಹರ ನಗರ ತಲುಪಲು ಈ ಗ್ರಾಮ ಸಂಪರ್ಕ ಸೇತುವೆಯಾಗಿದೆ.

ಇಷ್ಟೆಲ್ಲ ಪ್ರಮುಖ ಸ್ಥಳವಾದ ಹನುಮನಹಳ್ಳಿಯಲ್ಲಿ ಸಮರ್ಪಕ ಶುದ್ಧ ನೀರಿನ ಘಟಕವನ್ನು ಆರಂಭಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ.

ಗ್ರಾಮದಲ್ಲಿರುವ ಮಧ್ಯಮ ವರ್ಗದ ಜನರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಮುದೇನೂರು ಗ್ರಾಮಕ್ಕೆ ತೆರಳಿ ಶುದ್ಧ ನೀರು ಬಳಕೆ ಮಾಡಿಕೊಳ್ಳುತ್ತಾರೆ.

ಹನುಮನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಆರಂಭವಾದರೆ ಪಕ್ಕದಲ್ಲಿರುವ ಕೃಷ್ಣಾಪುರ ಮತ್ತು ಮಲಕನಹಳ್ಳಿ ಗ್ರಾಮದ ಜನರಿಗೂ ಅನುಕೂಲವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ