Please enable javascript.ತೀವ್ರಗೊಂಡ ಕೂಡಂಕುಳಂ ಹೋರಾಟ: ಕೈಜೋಡಿಸಿದ ಕೇಜ್ರಿವಾಲ್‌ - ತೀವ್ರಗೊಂಡ ಕೂಡಂಕುಳಂ ಹೋರಾಟ: ಕೈಜೋಡಿಸಿದ ಕೇಜ್ರಿವಾಲ್‌ - Vijay Karnataka

ತೀವ್ರಗೊಂಡ ಕೂಡಂಕುಳಂ ಹೋರಾಟ: ಕೈಜೋಡಿಸಿದ ಕೇಜ್ರಿವಾಲ್‌

Vijaya Karnataka Web 12 Sep 2012, 12:35 pm
Subscribe

ಅಣು ಸ್ಥಾವರ ವಿರೋಧಿ ಹೋರಾಟ ತೀವ್ರಗೊಂಡಿದೆ. ಕೂಡಂಕುಳಂ ಅಣು ಸ್ಥಾವರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಐಎಸಿ ಪ್ರತಿಭಟನಾಕಾರರ ಜೊತೆಗೂಡಿದೆ.

ತೀವ್ರಗೊಂಡ ಕೂಡಂಕುಳಂ ಹೋರಾಟ: ಕೈಜೋಡಿಸಿದ ಕೇಜ್ರಿವಾಲ್‌
ಕೂಡಂಕುಳಂ(ತಮಿಳುನಾಡು): ಅಣು ಸ್ಥಾವರ ವಿರೋಧಿ ಹೋರಾಟ ತೀವ್ರಗೊಂಡಿದೆ. ಕೂಡಂಕುಳಂ ಅಣು ಸ್ಥಾವರ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಐಎಸಿ ಪ್ರತಿಭಟನಾಕಾರರ ಜೊತೆಗೂಡಿದೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿರುವ ಅರವಿಂದ್‌ ಕೇಜ್ರಿವಾಲ್‌, ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ಧಾರೆ. ಅನಗತ್ಯವಾಗಿ ಭದ್ರತಾಪಡೆಗಳನ್ನು ಬಳಸುತ್ತಿರುವ ರಾಜ್ಯ ಸರಕಾರ, ಜನರಲ್ಲಿ ಭೀತಿ ಹುಟ್ಟು ಹಾಕಲು ಯತ್ನಿಸುತ್ತಿದೆ ಎಂದು ಜಯಲಲಿತಾ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಭದ್ರತೆಗಾಗಿ ರಾಜ್ಯ ಸರಕಾರವನ್ನು ಕೋರುವುದು ಜನರ ಹಕ್ಕು. ಆದರೆ ಸರಕಾರ ಅವರನ್ನು ಅನಗತ್ಯವಾಗಿ ಹಿಂಸಿಸುತ್ತಿದೆ ಎಂದು ಕೇಜ್ರಿವಾಲ್‌ ದೂರಿದ್ಧಾರೆ.

ಸರಕಾರ-ಜನರ ನಡುವೆ ಮಾತುಕತೆಯ ಅಗತ್ಯವಿದೆ. ಜನರ ಸಮಸ್ಯೆಗಳನ್ನು ಸರಕಾರ ಆಲಿಸಬೇಕಿದೆ. ಇದೇವೇಳೆ, ಯೋಜನೆಯ ಕುರಿತು ಜನತೆಗೆ ಸರಕಾರ ಮನವರಿಕೆ ಮಾಡಿಕೊಡಬೇಕು. ಸೂಕ್ತ ರಕ್ಷಣೆಯ ಭರವಸೆ ನೀಡಬೇಕು. ಅದುಬಿಟ್ಟು, ಸರಕಾರ ಅಮಾಯಕ ಜನರ ಮೇಲೆ ಭದ್ರತಾಪಡೆಗಳನ್ನು ಛೂ ಬಿಟ್ಟಿದೆ ಎಂದು ಕೇಜ್ರಿವಾಲ್‌ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ