Please enable javascript.ಲೈಂಗಿಕ ಕಿರುಕುಳ, ಬೆದರಿಕೆ: ನಟಿ ಸನಾ ಖಾನ್, ಸ್ನೇಹಿತ ಸೆರೆ - ಲೈಂಗಿಕ ಕಿರುಕುಳ, ಬೆದರಿಕೆ: ನಟಿ ಸನಾ ಖಾನ್, ಸ್ನೇಹಿತ ಸೆರೆ - Vijay Karnataka

ಲೈಂಗಿಕ ಕಿರುಕುಳ, ಬೆದರಿಕೆ: ನಟಿ ಸನಾ ಖಾನ್, ಸ್ನೇಹಿತ ಸೆರೆ

Vijaya Karnataka Web 30 Oct 2014, 4:41 am
Subscribe

ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಒಡ್ಡಿರುವುದಾಗಿ ಮಹಿಳೆಯೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಸನಾ ಖಾನ್ ಮತ್ತು ಆಕೆಯ ಸ್ನೇಹಿತ ಇಸ್ಮಾಯಿಲ್‌ಖಾನ್ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳ, ಬೆದರಿಕೆ: ನಟಿ ಸನಾ ಖಾನ್, ಸ್ನೇಹಿತ ಸೆರೆ
ಮುಂಬಯಿ: ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಒಡ್ಡಿರುವುದಾಗಿ ಮಹಿಳೆಯೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಸನಾ ಖಾನ್ ಮತ್ತು ಆಕೆಯ ಸ್ನೇಹಿತ ಇಸ್ಮಾಯಿಲ್‌ಖಾನ್ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಪೂನಂ ಖನ್ನಾ ಎಂಬ ಮಹಿಳೆ ಇವರಿಬ್ಬರ ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 354 ಮತ್ತು 506ರಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಂಬೋಲಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಸನಾ ಮತ್ತು ಇಸ್ಮಾಯಿಲ್ ತನ್ನ ಕೈಗಳನ್ನು ತಿರುಚಿದ್ದು, ಅಸಭ್ಯವಾಗಿ ಸ್ಪರ್ಶಿಸಿದ್ದಾರೆ. ಇವರಿಬ್ಬರ ವಿರುದ್ಧ ಕಳೆದ ವಾರ ಪ್ರಕಟವಾಗಿರುವ ಪತ್ರಿಕಾ ವರದಿಗೆ ಸಂಬಂಧಿಸಿದಂತೆ ಅವರು ಈ ರೀತಿ ವರ್ತಿಸಿದ್ದಾರೆ ಎಂದು ಪೂನಂ ದೂರಿನಲ್ಲಿ ವಿವರಿಸಿದ್ದಾರೆ.

ಇವರ ವಿರುದ್ಧ ಪತ್ರಿಕೆಯಲ್ಲಿ ವರದಿ ಪ್ರಕಟವಾಗುವುದಕ್ಕೆ ತಾನೇ ಕಾರಣ. ಸುದ್ದಿಗಾರರಿಗೆ ಮಾಹಿತಿ ಸೋರಿಕೆ ಮಾಡಿರುವುದು ತಾನೇ ಎಂಬ ಸಂಶಯದಿಂದ ಕಿರುಕುಳ ನೀಡಿದ್ದಾರೆ ಎಂದು ಪೂನಂ ದೂರಿನಲ್ಲಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ