Please enable javascript.ಕಾರ‌್ಯದರ್ಶಿಗಳ ಜತೆ ಇಂದು ಮೋದಿ ಚರ್ಚೆ - ಕಾರ‌್ಯದರ್ಶಿಗಳ ಜತೆ ಇಂದು ಮೋದಿ ಚರ್ಚೆ - Vijay Karnataka

ಕಾರ‌್ಯದರ್ಶಿಗಳ ಜತೆ ಇಂದು ಮೋದಿ ಚರ್ಚೆ

Vijaya Karnataka Web 1 Nov 2014, 4:27 am
Subscribe

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಐದು ತಿಂಗಳ ತರುವಾಯ ನರೇಂದ್ರ ಮೋದಿ ಅವರು ಮತ್ತೊಮ್ಮೆ ಎಲ್ಲ ಸಚಿವಾಲಯಗಳ ಕಾರ‌್ಯದರ್ಶಿಗಳ ಜತೆ ಶನಿವಾರ ಚಹಾ ಔತಣಕೂಟ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾರ‌್ಯದರ್ಶಿಗಳ ಜತೆ ಇಂದು ಮೋದಿ ಚರ್ಚೆ
ಹೊಸದಿಲ್ಲಿ: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಐದು ತಿಂಗಳ ತರುವಾಯ ನರೇಂದ್ರ ಮೋದಿ ಅವರು ಮತ್ತೊಮ್ಮೆ ಎಲ್ಲ ಸಚಿವಾಲಯಗಳ ಕಾರ‌್ಯದರ್ಶಿಗಳ ಜತೆ ಶನಿವಾರ ಚಹಾ ಔತಣಕೂಟ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಚಹಾ ಔತಣಕೂಟದ ನಂತರ ಮೋದಿ ಅವರು ವಿವಿಧ ಸಚಿವಾಲಯಗಳ ಕಾರ‌್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದು, ಐದು ತಿಂಗಳಲ್ಲಿ ಇಲಾಖೆಗಳು ಕೈಗೊಂಡಿರುವ ಕಾರ್ಯಯೋಜನೆಗಳ ಕುರಿತು ಮೌಲ್ಯಮಾಪನ ನಡೆಸಲಿದ್ದಾರೆ ಎನ್ನಲಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತೂ ಚರ್ಚಿಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಪ್ರಧಾನಿಯಾಗಿ ಒಂಬತ್ತು ದಿನದ ತರುವಾಯ ಅಂದರೆ ಕಳೆದ ಜೂನ್ 4 ರಂದು ಮೋದಿ ಅವರು 79 ಕಾರ‌್ಯದರ್ಶಿಗಳ ಜತೆ ಸಭೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ