Please enable javascript.Andhra Pradesh Rains,ತಿರುಪತಿಯಲ್ಲಿ ಕುಂಭದ್ರೋಣ ಮಳೆ: ತಿರುಮಲ ಘಾಟ್‌ ರಸ್ತೆ ಬಂದ್ - andhra pradesh rain tirupati tirumala waterlogged - Vijay Karnataka

ತಿರುಪತಿಯಲ್ಲಿ ಕುಂಭದ್ರೋಣ ಮಳೆ: ತಿರುಮಲ ಘಾಟ್‌ ರಸ್ತೆ ಬಂದ್

Vijaya Karnataka Web 12 Nov 2021, 3:44 pm
Embed

ಚೆನ್ನೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪ್ರಭಾವ ಆಂಧ್ರ ಪ್ರದೇಶದ ಮೇಲೂ ಬೀರಿದ್ದು, ದೇವಸ್ಥಾನ ನಗರಿ ತಿರುಪತಿ ಹಾಗೂ ನೆಲ್ಲೂರು ನಗರದಲ್ಲಿ ವಿಪರೀತ ಮಳೆಯಾಗಿದೆ.

ಆಂಧ್ರ ಪ್ರದೇಶದದ ಕರಾವಳಿ ಹಾಗೂ ರಾಯಲಸೀಮಾ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುತ್ತ ಮುತ್ತಲ ಜಿಲ್ಲೆಗಳಲ್ಲೂ ಮಳೆ ಆರ್ಭಟ ಜೋರಾಗಿಯೇ ಇದೆ. ತಿರುಪತಿ ದೇಗುಲ ಹಾಗೂ ಸುತ್ತಮುತ್ತ ಕೂಡ ವರಣನ ಅಬ್ಬರ ಜೋರಾಗಿದ್ದು, ತಿರುಪತಿ ಭಾಗಶಃ ಮುಳುಗಿದ ಹಾಗೆ ಭಾಸವಾಗುತ್ತಿದೆ.

ತಿರುಮಲ ಬೆಟ್ಟದಿಂದ ಪ್ರವಾಹದ ನೀರು ರಭಸದಿಂದು ಹರಿದು ಬರುವವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಭಾರೀ ಮಳೆಯಿಂದಾಗಿ ತಿರುಮಲ ಬೆಟ್ಟ ಘಾಟಿ ರಸ್ತೆ ಬಂದ್ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ಸಾರಲಾಗಿದೆ.