ಆ್ಯಪ್ನಗರ

ವಾಹನ ಮಾಲೀಕರೇ ಹುಷಾರ್! ಈ ದಾಖಲೆ ನಿಮ್ಮ ಬಳಿ ಇಲ್ಲವಾದ್ರೆ ಪೆಟ್ರೋಲ್ ಬಂಕ್‌ನಲ್ಲೇ ದಂಡ

Fine For Vehicles Without A Valid PUC: ವಾಹನಗಳು ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಒಮ್ಮೆ ಪಿಯುಸಿ ಪರೀಕ್ಷೆ ಮಾಡಿಸಿದರೆ ಆ ಪ್ರಮಾಣ ಪತ್ರಕ್ಕೆ 6 ತಿಂಗಳ ಕಾಲಾವಧಿ ಇರುತ್ತದೆ. ಆದರೆ, ಬಹುತೇಕ ವಾಹನ ಮಾಲೀಕರು ತಮ್ಮ ವಾಹನದ ಪಿಯುಸಿ ಪರೀಕ್ಷೆ ಮಾಡಿಸಿರೋದೇ ಇಲ್ಲ. ವಾಹನ ಮಾರಾಟ, ಪರಭಾರೆ ಮಾಡುವ ವೇಳೆ ಪಿಯುಸಿ ಕಡ್ಡಾಯವಾದ ಕಾರಣ ಮಾಡಿಸುತ್ತಾರೆ. ಆದರೆ, ಅಂಥಾ ಪರಿಪಾಠಕ್ಕೆ ಇದೀಗ ಬ್ರೇಕ್ ಬೀಳುವ ಸುದ್ದಿ ಬಂದಿದೆ!

Authored byದಿಲೀಪ್ ಡಿ. ಆರ್. | Vijaya Karnataka Web 14 May 2024, 4:58 pm

ಹೈಲೈಟ್ಸ್‌:

  • ವಾಹನಗಳಿಗೆ ನೀಡಲಾಗುವ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ
  • ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಕೊಡುಗೆ
  • ವಾಹನಗಳು ನಿಗದಿತ ಪ್ರಮಾಣಕ್ಕಿಂತಾ ಹೆಚ್ಚಿನ ಇಂಗಾಲಾಮ್ಲ ಹೊರಸೂಸುತ್ತಿದ್ದರೆ ಪರೀಕ್ಷೆ ವೇಳೆ ಪತ್ತೆ ಹಚ್ಚಬಹುದು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web puc.
ವಾಹನ ಮಾಲೀಕರೇ ಹುಷಾರ್! ಈ ದಾಖಲೆ ನಿಮ್ಮ ಬಳಿ ಇಲ್ಲವಾದ್ರೆ ಪೆಟ್ರೋಲ್ ಬಂಕ್‌ನಲ್ಲೇ ದಂಡ
ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯ ಭಾರತದಲ್ಲಿ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ, ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸಿಎನ್‌ಜಿ, ಎಲ್‌ಎನ್‌ಜಿ, ಜೈವಿಕ ಇಂಧನ, ಎಥೆನಾಲ್ ಮಿಶ್ರಿತ ಇಂಧನ.. ಹೀಗೆ ಹಲವು ಮಾರ್ಗೋಪಾಯಗಳನ್ನು ಸೂಚಿಸುತ್ತಿರುವ ಜೊತೆಯಲ್ಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಯಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಇಲ್ಲದಿದ್ದರೆ ದಂಡ ವಿಧಿಸಲು ಮುಂದಾಗಿದೆ!
ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ತಪಾಸಣೆಗೆ ಅತ್ಯಾಧುನಿಕ ಸ್ವಯಂ ಚಾಲಿತ ವ್ಯವಸ್ಥೆಯೊಂದನ್ನು ಮಹಾರಾಷ್ಟ್ರದ ಪುಣೆಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಈ ತಂತ್ರಜ್ಞಾನದ ನೆರವಿನಿಂದ ಯಾವುದೇ ವಾಹನದ ಮಾಲಿನ್ಯ ಪ್ರಮಾಣ ಪತ್ರದ ಅವಧಿ ಮುಕ್ತಾಯವಾಗಿದ್ದರೆ ಕ್ಷಣಾರ್ಧದಲ್ಲೇ ಕಂಡು ಹಿಡಿಯಬಹುದಾಗಿದೆ.

ಪೆಟ್ರೋಲ್‌, ಡೀಸೆಲ್ ಕಾರಿಗಿಂತಲೂ ಇವಿ ಕಾರ್‌ನಿಂದ ‘ಕಣ ಮಾಲಿನ್ಯ’ ಹೆಚ್ಚು! ಅಮೆರಿಕದಲ್ಲಿ ಸಂಶೋಧನೆ


ಪ್ರಮಾಣ ಪತ್ರ ಇಲ್ಲವಾದ್ರೆ 10 ಸಾವಿರ ರೂ. ದಂಡ?

ವಾಹನಗಳಿಗೆ ನೀಡಲಾಗುವ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (ಪಿಯುಸಿ) ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಕೊಡುಗೆ ನೀಡುತ್ತದೆ. ವಾಹನಗಳು ನಿಗದಿತ ಪ್ರಮಾಣಕ್ಕಿಂತಾ ಹೆಚ್ಚಿನ ಇಂಗಾಲಾಮ್ಲ ಹೊರಸೂಸುತ್ತಿದ್ದರೆ ಈ ಪರೀಕ್ಷೆ ವೇಳೆ ಪತ್ತೆ ಹಚ್ಚಬಹುದು. ಈ ತಪಾಸಣೆ ವೇಳೆ ವಾಹನದಿಂದ ಹೊರಗೆ ಬರುವ ಹೊಗೆಯಲ್ಲಿ ಕಾರ್ಬನ್ ಮಾನಾಕ್ಸೈಡ್ ಹಾಗೂ ಹೈಡ್ರೋ ಕಾರ್ಬನ್ ಎಷ್ಟು ಪ್ರಮಾಣದಲ್ಲಿ ಇದೆ ಅನ್ನೋದು ಪತ್ತೆಯಾಗುತ್ತೆ.



ಪಿಯುಸಿ ಪತ್ತೆಗೆ ಸ್ವಯಂ ಚಾಲಿತ ಯಂತ್ರ! ಹೇಗೆ ಕಾರ್ಯ ನಿರ್ವಹಿಸುತ್ತೆ?

ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ವಾಹನ ಪಿಯುಸಿ ಪ್ರಮಾಣ ಪತ್ರ ಹೊಂದಿದೆಯೇ? ಇಲ್ಲವೇ? ಅವಧಿ ಮುಕ್ತಾಯವಾಗಿದೆಯೇ ಎಂದು ಪತ್ತೆ ಹಚ್ಚಲು ಮಹಾರಾಷ್ಟ್ರದ ಪುಣೆಯಲ್ಲಿ ಸ್ವಯಂಚಾಲಿತ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ. ಈ ವ್ಯವಸ್ಥೆಯ ಅಡಿ ಅತ್ಯಂತ ಸುಧಾರಿತ ಕ್ಯಾಮರಾಗಳು ಇರಲಿವೆ.

ಈ ಕ್ಯಾಮರಾಗಳು ವಾಹನಗಳ ನೋಂದಣಿ ಸಂಖ್ಯೆಯನ್ನು ಸೆರೆ ಹಿಡಿಯಲಿವೆ. ವಾಹನಗಳ ನೋಂದಣಿ ಸಂಖ್ಯೆ ಸ್ಕ್ಯಾನ್ ಆದ ಕೂಡಲೇ ಅದು ನೇರವಾಗಿ ಕೇಂದ್ರೀಯ ಮಾಹಿತಿ ಕೋಶವನ್ನು ಸಂಪರ್ಕಿಸಿ, ಸದರಿ ನೋಂದಣಿ ಸಂಖ್ಯೆಯ ವಾಹನದ ಪಿಯುಸಿ ಸ್ಥಿತಿಗತಿ ಏನು ಎಂದು ಪರಿಶೀಲಿಸುತ್ತದೆ. ಒಂದು ವೇಳೆ ಪಿಯುಸಿ ಇಲ್ಲವಾದರೆ ಕೂಡಲೇ ಗಮನಕ್ಕೆ ತರುತ್ತದೆ. ಈ ವೇಳೆ ವಾಹನ ಮಾಲೀಕರಿಗೆ ಸ್ಥಳದಲ್ಲೇ ದಂಡದ ನೋಟಿಸ್ ಕೊಡಬಹುದು. ವಾಹನ ಮಾಲೀಕರ ಮೊಬೈಲ್ ನಂಬರ್‌ಗೆ ನೋಟಿಸ್ ಕೊಡಬಹುದು.

ಕಾರುಗಳ ತೂಕ ಇಳಿಕೆ, ಇಂಗಾಲಾಮ್ಲ ಹೊರಸೂಸುವಿಕೆ ಕಡಿಮೆ ಮಾಡಲು ಕಂಪನಿಗಳ ಹೊಸ ಪ್ಲ್ಯಾನ್‌

ಈ ವ್ಯವಸ್ಥೆಯು ವಾಹನ ಮಾಲೀಕರು ಕಾಲ ಕಾಲಕ್ಕೆ ತಮ್ಮ ವಾಹನದ ಪಿಯುಸಿ ಪ್ರಮಾಣ ಪತ್ರ ಹೊಂದಲು ಹಾಗೂ ನಿಯಮಿತವಾಗಿ ತಪಾಸಣೆ ಮಾಡಲು ನೆರವಾಗುತ್ತದೆ. ಆದರೆ, ವಾಹನ ಮಾಲೀಕರಿಗೆ ದಂಡ ವಿಧಿಸುವ ಕುರಿತಾಗಿ ಸರ್ಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪುಣೆಯಲ್ಲಿ ಅಭಿವೃದ್ದಿಪಡಿಸಲಾಗಿರುವ ನೂತನ ವ್ಯವಸ್ಥೆಯನ್ನು ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಕೆ ಮಾಡಿದ ಬಳಿಕ ದಂಡದ ವ್ಯವಸ್ಥೆ ಕೂಡಾ ಜಾರಿಗೆ ಬರುವ ಸಾಧ್ಯತೆ ಇದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ