ಆ್ಯಪ್ನಗರ

ಅಧಿಕಾರಿಗಳ ಮೇಲಿನ ದಾಳಿಗೆ ಎದಿರೇಟು! ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಮತ್ತೆ ಇ.ಡಿ ಶಾಕ್

ED Raids in West Bengal: ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ಹಗರಣವೊಂದಕ್ಕೆ ಸಂಬಂಧಿಸಿದಂತೆ ತಪಾಸಣೆಗೆ ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಕೆಲವರು ಹಲ್ಲೆ ನಡೆಸಿ, ಅವರನ್ನು ದೋಚಿದ್ದರು. ಅದರ ಬೆನ್ನಲ್ಲೇ ಬಂಗಾಳದ ಟಿಎಂಸಿ ಅಧಿಕಾರಿಗಳ ಮೇಲಿನ ದಾಳಿಯನ್ನು ಇ.ಡಿ ತೀವ್ರಗೊಳಿಸಿದೆ.

Edited byಅಮಿತ್ ಎಂ.ಎಸ್ | Vijaya Karnataka 13 Jan 2024, 4:42 pm

ಹೈಲೈಟ್ಸ್‌:

  • ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್‌ನ ಮೂವರು ನಾಯಕರ ಮೇಲೆ ಇ.ಡಿ ದಾಳಿ
  • 2014- 2018ರ ನಡುವೆ ವಿವಿಧ ನಗರ ಸಂಸ್ಥೆಗಳಲ್ಲಿ ನಡೆದ ಪಾಲಿಕೆ ನೌಕರಿ ಹಗರಣ ಪ್ರಕರಣ
  • ಸುಜಿತ್ ಬೋಸ್, ತಪಸ್ ರಾಯ್ ಮತ್ತು ಸುಬೋದ್ ಚಕ್ರವರ್ತಿಗಳ ನಿವಾಸದಲ್ಲಿ ಪರಿಶೀಲನೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ED raids Sujit Bose
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ನೇಮಕಾತಿ ಹಗರಣ ಸಂಬಂಧ ಸಚಿವ ಸುಜಿತ್‌ ಬೋಸ್‌, ಟಿಎಂಸಿ ಶಾಸಕ ತಪಸ್‌ ರಾಯ್‌ ಹಾಗೂ ಮತ್ತೊಬ್ಬ ಪ್ರಮುಖ ಮುಖಂಡನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅರೆಸೇನಾ ಪಡೆಯ ಬಿಗಿ ಭದ್ರತೆ ನಡುವೆ ಉತ್ತರ 24 ಪಗರಣದ ಲೇಕ್‌ ಟೌನ್‌ನಲ್ಲಿರುವ ಸಚಿವ ಬೋಸ್‌ ನಿವಾಸ, ಬಿರತಿಯಲ್ಲಿರುವ ಟಿಎಂಸಿ ಮುಖಂಡ, ನಾರ್ತ್ ಡುಮ್‌ಡುಮ್ ಪಾಲಿಕೆಯ ಮಾಜಿ ಅಧ್ಯಕ್ಷ ಸುಬೋದ್‌ ಚಕ್ರವರ್ತಿ ನಿವಾಸ, ಟಿಎಂಸಿ ಶಾಸಕ ತಪಸ್‌ ರಾಯ್‌ ಅವರ ಕೋಲ್ಕೊತಾ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು, ಕಡತಗಳ ಪರಿಶೀಲನೆ ನಡೆಸಿದರು.
ಕೋಚಿಮುಲ್‌ ನೌಕರಿ 20ರಿಂದ 30 ಲಕ್ಷ ರೂಗೆ ಬಿಕರಿ; ನಂಜೇಗೌಡರೇ ನೇರ ಭಾಗಿ!: ಇಡಿ

''ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸಚಿವರು, ಶಾಸಕರು, ಟಿಎಂಸಿ ಮುಖಂಡರ ಮನೆಯಲ್ಲಿಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ,'' ಎಂದು ಇ.ಡಿ ವಕ್ತಾರರು ತಿಳಿಸಿದ್ದಾರೆ.

ಕಳೆದ ವಾರ ಪಡಿತರ ಅಕ್ರಮದ ಕುರಿತು ಟಿಎಂಸಿ ಮುಖಂಡ ಶೇಖ್‌ ಷಹಜಹಾನ್‌ ನಿವಾಸದ ಪರಿಶೀಲನೆಗೆ ತೆರಳಿದ್ದ ಇ.ಡಿ ಅಧಿಕಾರಿಗಳ ಮೇಲೆ ಜನರ ಗುಂಪೊಂದು ದಾಳಿ ನಡೆಸಿತ್ತು. ಸರಿಯಾಗಿ ಒಂದು ವಾರದ ಬಳಿಕ ಉತ್ತರ 24 ಪರಗಣ ಜಿಲ್ಲೆಯ ಹಲವು ಕಡೆ ಶುಕ್ರವಾರ ದಾಳಿ ನಡೆಸಲಾಗಿದೆ.

ಕಳೆದ ವಾರ ನಡೆದಿದ್ದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಅರೆಸೇನಾ ಪಡೆಯ ಹೆಚ್ಚುವರಿ ತುಕಡಿಗಳ ಭದ್ರತೆಯಲ್ಲಿ ಸಚಿವ, ಶಾಸಕರ ಮನೆ ಮೇಲೆ ಇ.ಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಹರ್ಯಾಣ ಕಾಂಗ್ರೆಸ್ ಶಾಸಕನ ಮನೆಯಲ್ಲಿ 5 ಕೋಟಿ ಹಣ, 300 ಬಂದೂಕು, 100 ಮದ್ಯದ ಬಾಟಲ್ ವಶ!

ಇಬ್ಬರ ಬಂಧನ

ಈ ನಡುವೆ ಕಳೆದ ಶುಕ್ರವಾರ ಉತ್ತರ 24 ಪರಗಣದ ಸಂದೇಶ್‌ಖಾಲಿಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ನಡೆದ ದಾಳಿಯ ಸಂಬಂಧ ಒಂದು ವಾರದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೆಹಬೂಬ್‌ ಮುಲ್ಲಾ, ಸುಕೋಮಲ್‌ ಸರ್ದಾರ್‌ ಎಂದು ಗುರುತಿಸಲಾಗಿದೆ. ದಾಳಿಯ ವಿಡಿಯೋ ದೃಶ್ಯಗಳನ್ನು ಆಧರಿಸಿ ಇಬ್ಬರು ದಾಳಿಕೋರರನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ರೇಡ್‌ಗೆ ತೆರಳಿದ್ದ ಇ.ಡಿ ತಂಡದ ಮೇಲೆಯೇ ನೂರಾರು ಜನರಿಂದ ದಾಳಿ!

ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಜ. 5ರಂದು ಶೇಖ್ ಮನೆ ಮೇಲೆ ಇ.ಡಿ ದಾಳಿ ನಡೆಸಿತ್ತು. ಒಂದು ವಾರ ಕಳೆದರೂ ಆತ ಈವರೆಗೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಮೂವರು ಇ.ಡಿ ಅಧಿಕಾರಿಗಳು ಗಾಯಗೊಂಡಿದ್ದರು. ಅವರ ಬಳಿ ಇದ್ದ ವಸ್ತುಗಳನ್ನು ಕಸಿಯಲಾಗಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ