ಆ್ಯಪ್ನಗರ

ಲಡಾಖ್ ಘರ್ಷಣೆ: ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಹರಿಹಾಯ್ದ ರಾಹುಲ್!

ಭಾರತ-ಚೀನಾ ಸೈನಿಕರ ನಡುವಿನ ಲಡಾಖ್ ಗಡಿ ಘರ್ಷಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾದ ದುಷ್ಟ ಯೋಜನೆ ಅರಿಯಬೇಕಾಗಿದ್ದ ಮೋದಿ ಸರ್ಕಾರ ಗಢ ನಿದ್ರೆಯಲ್ಲಿತ್ತು ಎಂದು ರಾಹುಲ್ ಕಿಡಿಕಾರಿದ್ದಾರೆ.

Vijaya Karnataka Web 19 Jun 2020, 4:24 pm
ನವದೆಹಲಿ: ಭಾರತ-ಚೀನಾ ಸೈನಿಕರ ನಡುವಿನ ಲಡಾಖ್ ಗಡಿ ಘರ್ಷಣೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಗಲ್ವಾನ್ ಘರ್ಷಣೆ ಚೀನಾದ ಪೂರ್ವನಿಯೋಜಿತ ಕೃತ್ಯ ಎಂದಿರುವ ರಾಹುಲ್ ಗಾಂಧಿ, ಸರ್ಕಾರ ಗಾಢ ನಿದ್ರೆಯಲ್ಲಿದ್ದ ಪರಿಣಾಮವಾಗಿ ನಮ್ಮ 20 ವೀರ ಯೋಧರನ್ನು ಕಳೆದುಕೊಳ್ಳಬೇಕಾಗಿ ಬಂತು ಎಂದು ಹರಿಹಾಯ್ದಿದ್ದಾರೆ.

ಇಂದು(ಶುಕ್ರವಾರ) ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದ್ದು, ಅದಕ್ಕೂ ಮುಂಚೆಯೇ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಗಡಿಗೆ ನಿಶ್ಯಸ್ತ್ರ ಸೈನಿಕರನ್ನು ಕಳುಹಿಸಿದ್ದು ಏಕೆ? ಇದಕ್ಕೆಲ್ಲಾ ಜವಾಬ್ದಾರಿ ಯಾರು?: ರಾಹುಲ್‌ ಪ್ರಶ್ನೆ


ಗಡಿಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳ ಕುರಿತು ಸರ್ಕಾರ ಕಣ್ಮುಚ್ಚಿ ಕುಳಿತ ಪರಿಣಾಮವಗಿಯೇ ಈ ಅನಾಹುತ ಸಂಭವಿಸಿದೆ ಎಂದು ರಾಹುಲ್ ಮೋದಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ದಾಳಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಚೀನಾ ಅದರಂತೆ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಆದರೆ ಈ ಕುರಿತು ಗಾಢ ನಿದ್ರೆಯಲ್ಲಿದ್ದ ಸರ್ಕಾರ ಏನೂ ಆಗುವುದಿಲ್ಲ ಎಂಬ ಸುಳ್ಳು ಭರವಸೆಯನ್ನು ದೇಶಕ್ಕೆ ನೀಡಿತು ಎಂದು ರಾಹುಲ್ ಕಿಡಿಕಾರಿದ್ದಾರೆ.

ವಿಡಿಯೋ: ಗಡಿಗೆ ನಿಶ್ಯಸ್ತ್ರ ಸೈನಿಕರನ್ನು ಕಳುಹಿಸಿದ್ದು ಯಾಕೆ..?: ಕೇಂದ್ರಕ್ಕೆ ರಾಹುಲ್‌ ಪ್ರಶ್ನೆ

ಒಟ್ಟಿನಲ್ಲಿ ಲಡಾಖ್ ಗಡಿ ಘರ್ಷಣೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ರಾಹುಲ್ ಅವರ ಈ ಹೇಳಿಕೆಗೆ ಬಿಜೆಪಿ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ