ಆ್ಯಪ್ನಗರ

ಮದ್ಯ ನಿಷೇಧ ಮತದಾನದಲ್ಲಿ ನಿರ್ಧಾರ

ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿರುವ ಕಛ್‌ಚಬ್ಲಿ ಗ್ರಾಮದಲ್ಲಿ ಮದ್ಯ ನಿಷೇಧ ಜಾರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಮಂಗಳವಾರ ಮತದಾನ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಏಜೆನ್ಸೀಸ್ 29 Mar 2016, 11:40 am
ಜೈಪುರ: ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿರುವ ಕಛ್‌ಚಬ್ಲಿ ಗ್ರಾಮದಲ್ಲಿ ಮದ್ಯ ನಿಷೇಧ ಜಾರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಮಂಗಳವಾರ ಮತದಾನ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
Vijaya Karnataka Web rajasthan village votes to decide on liquor ban
ಮದ್ಯ ನಿಷೇಧ ಮತದಾನದಲ್ಲಿ ನಿರ್ಧಾರ


ಈ ಗ್ರಾಮದಲ್ಲಿ ಈಗ ಒಂದೇ ಒಂದು ಪರವಾನಗಿ ಪಡೆದಿರುವ ಮದ್ಯದಂಗಡಿ ಇದೆ. 'ನಾನು ಒಂದೂವರೆ ತಿಂಗಳ ಹಿಂದೆ ಇಲ್ಲಿ ಸೇವೆಗೆ ನಿಯೋಜನೆಗೊಂಡೆ.ಇರುವ ಮದ್ಯದಂಗಡಿಯನ್ನು ಮುಚ್ಚುವಂತೆ ಹಲವರು ಮನವಿ ಸಲ್ಲಿಸಿದರು.

ಆದರೆ ಎಕ್ಸೈಸ್ ಕಾಯಿದೆಯಡಿ ಇದಕ್ಕೆ ಅನುಮತಿ ಇದೆ ಎಂದು ಅವರಿಗೆ ತಿಳಿಸಿದೆ. ಹಾಗೇನಾದರೂ ಬಂದ್ ಮಾಡಬೇಕಿದ್ದರೂ ಗ್ರಾಮದ ಶೇ 20ರಷ್ಟು ಮಂದಿ ಲಿಖಿತ ಮನವಿ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿದಿದೆ,'ಎಂದು ಜಿಲ್ಲಾ ಆಯುಕ್ತರಾದ ಅರ್ಚನಾ ಸಿಂಗ್ ಹೇಳಿದ್ದಾರೆ.

ಆದರೆ ಗ್ರಾಮದಲ್ಲಿ ಮದ್ಯ ನಿಷೇಧಕ್ಕೆ ಕನಿಷ್ಠ ಬಹುಮತ ಸಾಲದು. ನೋಂದಣಿಗೊಂಡಿರುವ ಮತದಾರರಲ್ಲಿ ಶೇ 51ರಷ್ಟು ಮಂದಿ ನಿಷೇಧದ ಪರ ಮತ ಚಲಾಯಿಸಬೇಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನಿಖಲ್ ದೆ.

ಆದರೆ ಈ ಗ್ರಾಮದಲ್ಲಿ ಮದ್ಯ ದೊರೆಯದಿದ್ದರೆ ಗ್ರಾಮಸ್ಥರು ಹತ್ತಿರದ ಪ್ರದೇಶಗಳಿಗೆ ತೆರಳಿ ಕುಡಿಯುವುದನ್ನು ತಪ್ಪಿಸಲಾಗದು. ಈವರೆಗೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಗಮನಕ್ಕೆ ಬಂದಿಲ್ಲ ಎಂದು ಆಯುಕ್ತರು ಹೇಳುತ್ತಾರೆ. ಒಂದು ವೇಳೆ ಮದ್ಯ ನಿಷೇಧದ ಪರ ಅಗತ್ಯ ಮತಗಳು ಚಲಾವಣೆಗೊಂಡರೆ ಏ.1ರಿಂದ ಇಲ್ಲಿ ಮದ್ಯ ಮಾರಾಟ ನಿಷೇಧ ಜಾರಿಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ