ಆ್ಯಪ್ನಗರ

ಭ್ರಷ್ಟಾಚಾರಕ್ಕೆ ಬ್ರೇಕ್‌: ಒಂದೇ ಹೆಸರಿನಲ್ಲಿ 400 ಕಂಪನಿ: 1.75 ಲಕ್ಷ ಕೋಟಿ ಹಣ ಬ್ಯಾಂಕ್‌ಗೆ ಜಮೆ

ಆರ್ಥಿಕ ಸುಧಾರಣೆಗಳ ಕ್ರಮಗಳಿಂದ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಏಜೆನ್ಸೀಸ್ 15 Aug 2017, 11:26 am
ಹೊಸದಿಲ್ಲಿ: ನೋಟು ಅಮಾನ್ಯೀಕರಣ, ಜಿಎಸ್‌ಟಿ ಸೇರಿದಂತೆ ಹಲವಾರು ಆರ್ಥಿಕ ಸುಧಾರಣೆಗಳನ್ನು ಕೈಗೊಂಡಿರುವುದರಿಂದ ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಿದೆ. ಹವಾಲಾ ವ್ಯವಹಾರದಲ್ಲಿ ತೊಡಗಿದ್ದ ಹಲವಾರು ಕಂಪನಿಗಳು ಬಂದ್‌ ಆಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web rs 1 75 lakh crore under scrutiny post note ban pm modi
ಭ್ರಷ್ಟಾಚಾರಕ್ಕೆ ಬ್ರೇಕ್‌: ಒಂದೇ ಹೆಸರಿನಲ್ಲಿ 400 ಕಂಪನಿ: 1.75 ಲಕ್ಷ ಕೋಟಿ ಹಣ ಬ್ಯಾಂಕ್‌ಗೆ ಜಮೆ


70ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನರೇಂದ್ರ ಮೋದಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಮನವರಿಕೆ ಮಾಡಿಕೊಟ್ಟರು.

ನೋಟು ಅಮಾನ್ಯೀಕರಣ ನಿರ್ಧಾರ ನಂತರ ಬ್ಯಾಂಕ್‌ಗಳಿಗೆ ಹಣ ಹರಿದುಬರುತ್ತಿದೆ. 1.75 ಲಕ್ಷ ಕೋಟಿ ರೂಪಾಯಿ ಜಮೆಯಾಗಿದೆ. 18 ಲಕ್ಷ ಮಂದಿಯ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಈ ಪೈಕಿ 4.5 ಲಕ್ಷ ಮಂದಿ ತಮ್ಮ ತಪ್ಪು ತಿದ್ದಿಕೊಳ್ಳಲು ಮುಂದೆ ಬಂದಿದ್ದಾರೆ. ಕೃಷ್ಣನ ಲೆಕ್ಕದಲ್ಲಿದ್ದ ಹಣವೆಲ್ಲವೂ ಈಗ ಬ್ಯಾಂಕ್‌ಗೆ ಜಮೆಯಾಗಿದೆ ಎಂದು ಮೋದಿ ತಿಳಿಸಿದರು.

ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಅಕ್ರಮ ವ್ಯವಹಾರ ನಿಂತಿದೆ. ಒಂದೇ ಹೆಸರಿನಲ್ಲಿ 400 ಕಂಪನಿಗಳು ಇದ್ದವು. ಇಂಥ ಹಲವಾರು ಅಕ್ರಮಗಳು ಬಯಲಿಗೆ ಬಂದಿವೆ ಎಂದು ಮೋದಿ ಸ್ಪಷ್ಟಪಡಿಸಿದರು.

ತೆರಿಗೆ ಕಟ್ಟುವವರ ಸಂಖ್ಯೆ ಈ ವರ್ಷ ಗಣನೀಯವಾಗಿ ಏರಿಕೆಯಾಗಿದೆ. ಭವಿಷ್ಯದಲ್ಲಿ ಪಾರದರ್ಶಕ ವಹಿವಾಟು ಜಾರಿಗೆ ಬರಲಿದೆ ಎಂದು ಪ್ರಧಾನಿ ವಿವರಿಸಿದರು.

Rs 1.75 lakh crore under scrutiny post note ban: PM Modi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ