ಆ್ಯಪ್ನಗರ

ಕೋವಿಡ್‌ ಪಾಸಿಟಿವಿಟಿ ದರ ಮೂರು ಪಟ್ಟು ಏರಿಕೆ! ದಿಲ್ಲಿಯಲ್ಲಿ ಹರಡುತ್ತಲೇ ಇದೆ ಸೋಂಕು!

ವಿದಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಆತಂಕದ ನಡುವೆಯೇ ದಿಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಒಂದೇ ವಾರದಲ್ಲಿ ಪಾಸಿಟಿವಿಟಿ ಪ್ರಮಾಣವು ಮೂರು ಪಟ್ಟು ಏರಿಕೆ ಕಂಡಿದೆ. ಏ.11 ರಿಂದ 18ರ ಅವಧಿಯಲ್ಲಿ ಸೋಂಕಿತರ ಪ್ರಮಾಣವು ಗಣನೀಯ ಹೆಚ್ಚಳವಾಗಿದೆ ಎಂಬುದನ್ನು ದಿಲ್ಲಿ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ.

Vijaya Karnataka Web 19 Apr 2022, 11:09 pm

ಹೈಲೈಟ್ಸ್‌:

  • ದಿಲ್ಲಿಯಲ್ಲಿ ಹರಡುತ್ತಲೇ ಇದೆ ಸೋಂಕು
  • ದಿಲ್ಲಿ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ
  • ಬುಧವಾರ ನಡೆಯಲಿದೆ ನಿರ್ಣಾಯಕ ಸಭೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web corona
ಹೊಸದಿಲ್ಲಿ: ವಿದಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಆತಂಕದ ನಡುವೆಯೇ ದಿಲ್ಲಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಒಂದೇ ವಾರದಲ್ಲಿ ಪಾಸಿಟಿವಿಟಿ ಪ್ರಮಾಣವು ಮೂರು ಪಟ್ಟು ಏರಿಕೆ ಕಂಡಿದೆ. ಏ.11 ರಿಂದ 18ರ ಅವಧಿಯಲ್ಲಿ ಸೋಂಕಿತರ ಪ್ರಮಾಣವು ಗಣನೀಯ ಹೆಚ್ಚಳವಾಗಿದೆ ಎಂಬುದನ್ನು ದಿಲ್ಲಿ ಆರೋಗ್ಯ ಸಚಿವಾಲಯವೇ ದೃಢಪಡಿಸಿದೆ.
ದಿಲ್ಲಿಯಲ್ಲಿ ಒಂದೇ ವಾರದಲ್ಲಿ 2,606 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 67,360 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ.4.79ರಷ್ಟಿದೆ. ವರದಿಯಾಗಿದೆ. ಏ.11ರಂದು ದಿಲ್ಲಿಯ ಎನ್‌ಸಿಆರ್‌ ಪ್ರದೇಶದಲ್ಲಿ 5,079 ಮಂದಿ ರೋಗಲಕ್ಷಣವುಳ್ಳವರಿಗೆ ನಡೆಸಲಾದ ತಪಾಸಣೆಯಲ್ಲಿ 137 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು.

ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಓಮಿಕ್ರಾನ್‌ ಹಾಗೂ ಮಾರ್ಪಾಡುಗೊಂಡಿರುವ 'ಎಕ್ಸ್‌ಇ' (ಬಿಎ.2) ತಳಿಯು ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಕೊರೊನಾ ಪ್ರಸರಣ ಮತ್ತಷ್ಟು ತೀವ್ರಗೊಂಡು ಹೊಸ ಕೊರೊನಾ ಅಲೆ ಏಳುವ ಆತಂಕವು ಜನರಲ್ಲಿ ಮನೆ ಮಾಡುತ್ತಿದೆ. ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿದರೆ ಹೊಸ ಅಲೆ ಬರುವುದು ಖಂಡಿತ ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ. ಸದ್ಯ ಎಲ್ಲರ ಗಮನವು ಬುಧವಾರ ನಡೆಯುವ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಅಧಿಕಾರಿಗಳ ಮಹತ್ವದ ಸಭೆ ಮೇಲೆ ನೆಟ್ಟಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದು ಪುನಃ ಕಡ್ಡಾಯಗೊಳಿಸಲಾಗುವ ಸಾಧ್ಯತೆಯಿದೆ.

ಒಂದೇ ದಿನದಲ್ಲಿ ಶೇ.90ರಷ್ಟು ಹೆಚ್ಚಿದ ಕೋವಿಡ್‌ ಕೇಸ್‌! ಬರಲಿದೆಯೇ 4ನೇ ಅಲೆ?

ಪಾಸಿಟಿವಿಟಿ ಪ್ರಮಾಣ ಹೆಚ್ಚಳ
ಏ.1: ಶೇ.0.
ಏ.11 : ಶೇ.2.70
ಏ.15 : ಶೇ.3.95
ಏ.16 : ಶೇ.5.33
ಏ.18 : ಶೇ.7.72

ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಪೋಷಕರು ಪ್ರವಾಸ ಕೈಗೊಳ್ಳುವುದು ಹೆಚ್ಚುತ್ತಿದೆ. ನಗರಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಪರಿಣಾಮ ಹೊಸ ರೂಪಾಂತರಿಯಿಂದ ಸೋಂಕಿತರ ಸಂಖ್ಯೆ ಬೇಗ ಏರಿಕೆ ಕಾಣುತ್ತಿದೆ. ಇದನ್ನೇ 4ನೇ ಅಲೆ ಎನ್ನಲು ಸಾಧ್ಯವಿಲ್ಲ.
- ಡಾ. ಚಂದ್ರಕಾಂತ್‌ ಲಹರಿಯಾ, ಸಾಂಕ್ರಾಮಿಕ ರೋಗ ತಜ್ಞ

ಓಮಿಕ್ರಾನ್‌ನ ರೂಪಾಂತರಿತ ತಳಿ ಬಿಎ.2 ಅಥವಾ 'ಎಕ್ಸ್‌ಇ' ದೇಶದಲ್ಲಿ ಹೊಸ ಅಲೆ ಎಬ್ಬಿಸುವುದು ಕಷ್ಟಸಾಧ್ಯ. ಹಾಗಾಗಬೇಕಿದ್ದಲ್ಲಿ ಇನ್ನೂ 6-9 ತಿಂಗಳು ಕಾಲಾವಕಾಶ ಬೇಕಾಗುತ್ತದೆ.
- ಅಮಿತಾ ಗುಪ್ತಾ, ಸಾಂಕ್ರಾಮಿಕ ರೋಗ ತಜ್ಞೆ

'ಕೋವಿಡ್‌-19 ಪಾಸಿಟಿವ್', ಆಸ್ಪತ್ರೆಗೆ ದಾಖಲಾದ ಮಿಚೆಲ್‌ ಮಾರ್ಷ್‌!

ಶಾಂಘೈನಲ್ಲಿ ಮತ್ತೆ 7 ಬಲಿ
ಕೊರೊನಾ ಸೋಂಕಿನಿಂದಾಗಿ ಚೀನಾದ ಶಾಂಘೈ ನಗರದಲ್ಲಿ ಮಂಗಳವಾರ ಏಳು ಸೋಂಕಿತರು ಬಲಿಯಾಗಿದ್ದಾರೆ. ನಗರದಲ್ಲಿ ಸೋಮವಾರ ಸೋಂಕಿತರೊಬ್ಬರು ಮೃತಪಟ್ಟಿದ್ದರು. ಈ ಮೂಲಕ ಚೀನಾದಲ್ಲಿ 21,400 ಹೊಸ ಸೋಂಕಿತರು ವರದಿಯಾಗಿದ್ದು, 4,648 ಮಂದಿ ಒಟ್ಟಾರೆಯಾಗಿ ಕೊರೊನಾ ಹೊಸ ಅಲೆಗೆ ಬಲಿಯಾಗಿದ್ದಾರೆ. ಚೀನಾದಲ್ಲಿಸದ್ಯ ಕೊರೊನಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 30,384ಕ್ಕೂ ಹೆಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ