Please enable javascript.‘ಗ್ರಾಮಗಳಿಗೆ ರಸ್ತೆ ನಿರ್ಮಿಸುವುದೇ ನನ್ನ ಸಂಕಲ್ಪ’ - ‘ಗ್ರಾಮಗಳಿಗೆ ರಸ್ತೆ ನಿರ್ಮಿಸುವುದೇ ನನ್ನ ಸಂಕಲ್ಪ’ - Vijay Karnataka

‘ಗ್ರಾಮಗಳಿಗೆ ರಸ್ತೆ ನಿರ್ಮಿಸುವುದೇ ನನ್ನ ಸಂಕಲ್ಪ’

ವಿಕ ಸುದ್ದಿಲೋಕ 6 Jul 2014, 6:31 pm
Subscribe

ರಸ್ತೆಗಳ ಅಭಿವೃದ್ಧಿಗೆ ಎಚ್‌ಕೆಎಡಿಬಿ ಅನುದಾನದಡಿ 30 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಆದರೆ ಮುಂದಿನ 6ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ತಮ್ಮ ಸಂಕಲ್ಪವಾಗಿದೆ ಎಂದು ಶಾಸಕ ಡಾ.ಉಮೇಶ ಜಾಧವ ಹೇಳಿದರು.

‘ಗ್ರಾಮಗಳಿಗೆ ರಸ್ತೆ ನಿರ್ಮಿಸುವುದೇ ನನ್ನ ಸಂಕಲ್ಪ’
ಚಿಂಚೋಳಿ: ರಸ್ತೆಗಳ ಅಭಿವೃದ್ಧಿಗೆ ಎಚ್‌ಕೆಎಡಿಬಿ ಅನುದಾನದಡಿ 30 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಆದರೆ ಮುಂದಿನ 6ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ತಮ್ಮ ಸಂಕಲ್ಪವಾಗಿದೆ ಎಂದು ಶಾಸಕ ಡಾ.ಉಮೇಶ ಜಾಧವ ಹೇಳಿದರು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ 10ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿ, ಚಿಂಚೋಳಿ- ಗುಲ್ಬರ್ಗ ಮುಖ್ಯ ರಸ್ತೆಯ ಗುಣಮಟ್ಟವನ್ನು ಹೆಚ್ಚಿಸಲು ಇದೀಗ 8 ಕೋಟಿ ಹಣ ಮಂಜೂರಿಯಾಗಿದ್ದು, ಗುಣಮಟ್ಟದ ರಸ್ತೆ ಕೈಗೊಳ್ಳುವಂತೆ ಅಧಿಕಾರಿಗಳನ್ನು ಸೂಚಿಸಲಾಗಿದೆ. ಮುಂದೆ ಪ್ರತಿ ಗ್ರಾಮೀಣ ಪ್ರದೇಶಕ್ಕೆ ಈಶಾನ್ಯ ಸಾರಿಗೆ ಸಂಚಾರಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಸಾರಿಗೆ ಇಲಾಖೆ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಪ್ರಸಕ್ತ ವರ್ಷದಲ್ಲಿ 1ಕೋಟಿಗೂ ಅಧಿಕ ಆದಾಯವಾಗಿದೆ. ಆದರೆ ಬಸ್‌ಗಳ ಕೊರತೆ ಇರುವುದರಿಂದ 20 ನೂತನ ಬಸ್‌ಗಳ ಬೇಡಿಕೆಯನ್ನು ಸರಕಾರದ ಮುಂದೆ ಇಡಲಾಗಿತ್ತು. ಸದ್ಯ 10 ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು, 3 ತಿಂಗಳೊಳಗಾಗಿ ಇನ್ನೂ ಹತ್ತು ಬಸ್ಸುಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.

ಹತ್ತು ಬಸ್‌ಗಳಲ್ಲಿ 5 ತಡೆರಹಿತ ಸಂಚಾರ ಮಿಕ್ಕ ಐದು ಸಾಮಾನ್ಯ ಸಂಚಾರಕ್ಕಾಗಿ ಉಪಯೋಗಿಸಲಾಗುವುದು. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೂತನ ಬಸ್ ನಿಲ್ದಾಣಕ್ಕಾಗಿ 1. 60 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಭವ್ಯ ನಿಲ್ದಾಣ ನಿರ್ಮಿಸಲು ಹಣದ ಕೊರತೆ ಉಂಟಾಗುವ ಸಾಧ್ಯತೆಯಿದ್ದು, ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಗುಲ್ಬರ್ಗವಿಭಾಗೀಯ ಅಧಿಕಾರಿ ಎಂ. ಮುಲ್ಲಾ ಮಾತನಾಡಿ, ಚಿಂಚೋಳಿ ಘಟಕದಲ್ಲಿ ಒಟ್ಟು 80 ಬಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 66 ಬಸ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಉಳಿದ ಬಸ್‌ಗಳು ಬೆಂಗಳೂರು, ಹೈದ್ರಾಬಾದ, ಮುಂಬೈ, ಧಾರವಾಡ, ಬೆಳಗಾವಿ ಇತರೆ ಪ್ರದೇಶಗಳಿಗೆ ಹೋಗುತ್ತಿದ್ದು, ಪ್ರತಿ ದಿನ 6.38 ಲಕ್ಷ ಆದಾಯ ಬರುತ್ತಿದೆ. ಜೂನ್ ಅಂತ್ಯದವರೆಗೆ ಒಟ್ಟು 581 ಲಕ್ಷ ರೂ. ಗಳಿಕೆಯಾಗಿದೆ. ಇದರಲ್ಲಿ 41 ಲಕ್ಷ ಸಾರಿಗೆ ಇಲಾಖೆಗೆ ಲಾಭ ನೀಡಿರುವುದು ಘಟಕದ ಸಾಧನೆಯಾಗಿದೆ ಎಂದು ಸ್ಮರಿಸಿದರು.

ಗುಲ್ಬರ್ಗ ವಿಭಾಗೀಯ ನಿಯಂತ್ರಣ ಅಧಿಕಾರಿ ಎ.ಎಚ್.ನಾಗೇಶ, ಘಟಕದ ವ್ಯವಸ್ಥಾಪಕ ಧೂಳಪ್ಪಆಲೂರೆ, ಜಿಪಂ ಸದಸ್ಯ ದೀಪಕನಾಗ ಪುಣ್ಯಶೆಟ್ಟಿ, ತಾಪಂ ಅಧ್ಯಕ್ಷೆ ಮಾಣಿಕಮ್ಮ ಗೊಸುಲ್, ಪಪಂ ಅಧ್ಯಕ್ಷೆ ಇಂದುಮತಿ ಸ್ವಾಮಿ, ಜಗದೇಶಸಿಂಗ್ ಠಾಕೂರ್, ಜಾನುನಾಯಕ, ಅಬ್ದುಲ್ ಬಾಶೀದ್, ಲಕ್ಷ್ಮಣ ಆವಂಟಿ, ಗೌತಮ್ ಪಾಟೀಲ್, ಅಜೀತ ಪಾಟೀಲ್, ತುಕಾರಾಮ್, ನರಶೀಮ್ಲು, ಶಾಮರಾವ, ರಾಮಶೆಟ್ಟಿ ರಾಠೋಡ್, ನಾಗೇಶ ಗುಣಾಜಿ, ಸುಧಾಕಾರ ಪಾಟೀಲ್, ರಾಜು ನವಲೆ, ಅಲ್ಲಾವುದ್ದಿನ್ ಅನ್ಸಾರಿ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ