Please enable javascript.ನಗರ ಸೌಂದರ್ಯೀಕರಣಕ್ಕೆ 84 ಕೋಟಿ ರೂ ಯೋಜನೆ - Nagara saundaryīkaraṇakke 84 kōṭi rū yōjane - Vijay Karnataka

ನಗರ ಸೌಂದರ್ಯೀಕರಣಕ್ಕೆ 84 ಕೋಟಿ ರೂ ಯೋಜನೆ

ವಿಕ ಸುದ್ದಿಲೋಕ 15 Apr 2015, 4:31 pm
Subscribe

ನಗರ ಸೌಂದರ್ಯೀಕರಣಕ್ಕಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ)ದಿಂದ ರೂಪಿಸಲಾದ 84.25 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಖಮರುಲ್ ಇಸ್ಲಾಂ ಅಧ್ಯಕ್ಷತೆಯಲ್ಲಿ ಜರುಗಿದ ಕಲಬುರಗಿ ನಗರ ಸೌಂದರ್ಯೀಕರಣ ಸಮಿತಿಯ ಪ್ರಥಮ ಸಭೆಯು ಮಂಗಳವಾರ ಸರ್ವಾನುಮತದಿಂದ ಅನುಮೋದಿಸಿತು.

nagara saundarykaraakke 84 ki r yjane
ನಗರ ಸೌಂದರ್ಯೀಕರಣಕ್ಕೆ 84 ಕೋಟಿ ರೂ ಯೋಜನೆ
ಕಲಬುರಗಿ: ನಗರ ಸೌಂದರ್ಯೀಕರಣಕ್ಕಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ)ದಿಂದ ರೂಪಿಸಲಾದ 84.25 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಖಮರುಲ್ ಇಸ್ಲಾಂ ಅಧ್ಯಕ್ಷತೆಯಲ್ಲಿ ಜರುಗಿದ ಕಲಬುರಗಿ ನಗರ ಸೌಂದರ್ಯೀಕರಣ ಸಮಿತಿಯ ಪ್ರಥಮ ಸಭೆಯು ಮಂಗಳವಾರ ಸರ್ವಾನುಮತದಿಂದ ಅನುಮೋದಿಸಿತು.

ಮುಖ್ಯ ರಸ್ತೆ ಅಗಲೀಕರಣಕ್ಕೆ 12 ಕೋಟಿ

ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ ಪಟೇಲ್ ಚೌಕದಿಂದ ಜಗತ್ ವೃತ್ತದವರೆಗಿನ ರಸ್ತೆ ಅಗಲೀಕರಣ ಮತ್ತು ಪಾದಚಾರಿಗಳ ರಸ್ತೆ ನಿರ್ಮಿಸಲು 12 ಕೋಟಿ ರೂ., ಕಲಬುರಗಿ ನಗರದಲ್ಲಿರುವ ವಿವಿಧ ಉದ್ಯಾನಗಳಲ್ಲಿ ವಾಕಿಂಗ್ ಟ್ರ್ಯಾಕ್, ಲಾನ್ ಪ್ಲಾಂಟೇಶನ್ ಮತ್ತು ಜಿಮ್, ಆಟಿಕೆ ಸಾಮಾನುಗಳನ್ನು ಅಳವಡಿಸುವ ಸುಧಾರಣಾ ಕಾರ್ಯಗಳಿಗಾಗಿ 30 ಕೋಟಿ ರೂ., ನಗರದ ರೈಲ್ವೆ ಸ್ಟೇಶನ್‌ದಿಂದ ಸರ್ಕಾರಿ ಜಿಲ್ಲಾ ಆಸ್ಪತ್ರೆವರೆಗೆ ವ್ಹಾಯಾ ಐವಾನ್-ಇ-ಶಾಹಿ, ವಿ.ಜಿ. ಮಹಿಳಾ ಕಾಲೇಜು ಫುಟ್ ಪಾಥ್ ನಿರ್ಮಾಣಕ್ಕೆ 9.25 ಕೋಟಿ ರೂ., ಕಲಬುರಗಿ ನಗರದ ವರ್ತುಲ ರಸ್ತೆಯಲ್ಲಿ ಗ್ರಿಲ್‌ದೊಂದಿಗೆ ವಿಭಜಕ ನಿರ್ಮಾಣ, ಗಿಡಗಳ ನಾಟಿ ಮುಂತಾದ ಕಾರ್ಯಕ್ಕೆ 11.90 ಕೋಟಿ ರೂ., ಸಂತ್ರಾಸವಾಡಿ ಮಸೀದಿಯಿಂದ ರಿಂಗ್ ರೋಡವರೆಗಿನ ರಸ್ತೆ ಅಭಿವೃದ್ಧಿ ಮತ್ತು ಅಗಲೀಕರಣಕ್ಕೆ 6.75 ಕೋಟಿ ರೂ., ಆಳಂದ ರಸ್ತೆ, ಹುಮನಾಬಾದ ರಸ್ತೆ, ರಾಮಮಂದಿರ ಮತ್ತು ಸೇಡಂ ರಸ್ತೆಗಳಲ್ಲಿರುವ ಹಾಲಿ ಫುಟ್‌ಪಾಥಗಳಲ್ಲಿ ಗ್ರಿಲ್ ಅಳವಡಿಸುವ ಕಾರ್ಯಕ್ಕೆ 3.10 ಕೋಟ ರೂ., ಸಂತ್ರಾಸವಾಡಿ ಕ್ರಾಸಿನಿಂದ ರಿಂಗ್ ರೋಡವರೆಗಿನ ರಸ್ತೆ ವಯಾ ಎಂ.ಜಿ.ರೋಡ ರಸ್ತೆಯಲ್ಲಿ ಫುಟ್‌ಪಾಥ ನಿರ್ಮಿಸಲು 2.10 ಕೋಟಿ ರೂ., ರಾಷ್ಟ್ರಪತಿ ಚೌಕದಿಂದ ಎಂ.ಎಸ್.ಕೆ.ಮಿಲ್ ರಸ್ತೆಯಲ್ಲಿ ಫುಟ್‌ಪಾಥ ನಿರ್ಮಿಸಲು 2.60 ಕೋಟಿ ರೂ., ಡಾ.ಮುರಲೀಧರರಾವ ಹಾಸ್ಪಿಟಲ್ ಕ್ರಾಸಿನಿಂದ ಕೋರ್ಟ್ ರೋಡ ಕ್ರಾಸ್‌ವರೆಗಿನ ರಸ್ತೆಯಲ್ಲಿ ಫುಟ್‌ಪಾಥ ನಿರ್ಮಿಸಲು ಒಂದು ಕೋಟಿ ರೂ., ಪಾದಚಾರಿಗಳು ಜನತಾ ಬಜಾರ ಮತ್ತು ಚೌಕ್ ಪೊಲೀಸ್ ಠಾಣೆವರೆಗಿನ ರಸ್ತೆ ದಾಟಲು ಅನುವಾಗುವಂತೆ ಫುಟ್ ಓವರ್ ಬ್ರಿಜ್ ನಿರ್ಮಿಸಲು 1.40 ಕೋಟಿ ರೂ., ಜಗತ್ ವೃತ್ತದಿಂದ ಮರಗಮ್ಮ ಗುಡಿವರೆಗಿನ ರಸ್ತೆ ಫುಟ್‌ಪಾಥದಲ್ಲಿ ಸ್ಟೇನ್‌ಲೆಸ್ ಗ್ರಿಲ್ ಅಳವಡಿಸಲು 1.75 ಕೋಟಿ ರೂ., ಜನತಾ ಬಜಾರದಿಂದ ಲಾಲಗಿರಿ ಚೌಕವರೆಗೆ ಫುಟ್‌ಪಾಥ ನಿರ್ಮಿಸಲು 1.50 ಕೋಟಿ ರೂ., ನಗರದದ ವಿವಿಧ ಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲು 70 ಲಕ್ಷ ರೂ. ಮತ್ತು ವಿವಿಧ ಜಾತ್ರೆ ಮತ್ತು ಉತ್ಸವಗಳಲ್ಲಿ ಪುರುಷರಿಗಾಗಿ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣಕ್ಕೆ 20 ಲಕ್ಷ ರೂ. ಒದಗಿಸಲಾಗಿದೆ.

ಕಲಬುರಗಿ ನಗರ ಸೌಂದರ್ಯೀಕರಣ ಸಮಿತಿಯ ಎಲ್ಲ ಸದಸ್ಯರು ಪರಸ್ಪರ ಸಮನ್ವಯತೆಯಿಂದ ನಗರದ ಸೌಂದರ್ಯೀಕರಣದ ವಿವಿಧ ಕೆಲಸ ಕಾರ್ಯಗಳನ್ನು ಯೋಜನಾ ಬದ್ಧವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕು. ನಗರದ ಸೌಂದರ್ಯೀಕರಣ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ವಿದ್ಯುತ್ ಮತ್ತು ಬಿ.ಎಸ್.ಎನ್.ಎಲ್. ಕೇಬಲ್ ವೈರುಗಳನ್ನು ಸಕಾಲದಲ್ಲಿ ಸ್ಥಳಾಂತರಿಸಲು ಅಧಿಕಾರಿಗಳು ಸಹಕರಿಸಬೇಕು. ಅದೇರೀತಿ ಸ್ಥಳಾಂತರಿಸಬೇಕಾದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿ ತುರ್ತಾಗಿ ಅನುಮೋದನೆ ಪಡೆಯಬೇಕೆಂದು ಸಚಿವ ಡಾ. ಖಮರುಲ್ ಇಸ್ಲಾಂ ಸೂಚಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಪಾಧಿಕಾರದ ಆಯುಕ್ತರು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ರವಿಕಿರಣ ವಂಟಿ, ಸಮಿತಿಯ ಸದಸ್ಯರೆಲ್ಲರೂ ಈ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ