ಆ್ಯಪ್ನಗರ

ಬಿಜೆಪಿ ಅಪಹರಿಸಿಲ್ಲ ಎಂದು ಶ್ರೀಮಂತ ಪಾಟೀಲ್‌ ಪತ್ರ

ಅನಾರೋಗ್ಯಕ್ಕೆ ತುತ್ತಾಗಿ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಸ್ಪೀಕರ್‌ಗೆ ಪತ್ರ ಬರೆದಿದ್ದು, ತಾವು ಬಿಜೆಪಿಯಿಂದ ಅಪಹರಣಕ್ಕೆ ...

Vijaya Karnataka 20 Jul 2019, 5:00 am
ಬೆಂಗಳೂರು : ಅನಾರೋಗ್ಯಕ್ಕೆ ತುತ್ತಾಗಿ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಸ್ಪೀಕರ್‌ಗೆ ಪತ್ರ ಬರೆದಿದ್ದು, ತಾವು ಬಿಜೆಪಿಯಿಂದ ಅಪಹರಣಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Vijaya Karnataka Web SHRIMANT PATIL- congress


ಪಾಟೀಲ್‌ ಪತ್ರವನ್ನು ಸ್ಪೀಕರ್‌ ಅವರು ಸದನದ ಗಮನಕ್ಕೆ ತಂದರು. ''ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದ ರೆಸಾರ್ಟ್‌ನಿಂದ ಕಾರ್ಯ ನಿಮಿತ್ತ ಚೆನ್ನೈಗೆ ಹೋಗಿದ್ದೆ. ನಂತರ ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಮುಂಬಯಿನಲ್ಲಿರುವ ನಮ್ಮ ಫ್ಯಾಮಿಲಿ ಡಾಕ್ಟರಿಗೆ ಕರೆ ಮಾಡಿದೆ. ಅವರು ಮುಂಬಯಿಗೆ ಬರಲು ಸೂಚಿಸಿದ್ದರಿಂದ ಅಲ್ಲಿಗೆ ಹೋಗಿ ಚಿಕಿತ್ಸೆಗೆ ದಾಖಲಾದೆ. ಇದರಲ್ಲಿ ಬಿಜೆಪಿ ಪಾತ್ರವಿಲ್ಲ. ನನ್ನ ಪ್ರಯಾಣ ಪೂರ್ವ ನಿಯೋಜಿತವಾಗಿದ್ದರೆ ಮೊದಲೇ ಲೆಟರ್‌ಹೆಡ್‌ ಕೊಂಡು ಹೋಗುತ್ತಿದ್ದೆ. ಅದರಲ್ಲೇ ನಿಮಗೆ ಪತ್ರ ಬರೆಯುತ್ತಿದ್ದೆ ಎಂದು ಪಾಟೀಲ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಲಿ ಅಧಿವೇಶನಕ್ಕೆ ಗೈರು ಹಾಜರಾಗಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ,'' ಎಂದು ಸ್ಪೀಕರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ