ಆ್ಯಪ್ನಗರ

‘ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕ್ರೂರಿಗಳು’ : ಸಿದ್ದರಾಮಯ್ಯ ವಾಗ್ದಾಳಿ

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಹರಿಹಾಯ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. ಹಿಟ್ಲರ್‌ ಕೂಡಾ ಕ್ರೂರಿಯಾಗಿದ್ದ ಅಂದ ಸಿದ್ದರಾಮಯ್ಯ ಮೋದಿ ಹಾಗೂ ಶಾ ಕೂಡಾ ಕ್ರೂರಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Vijaya Karnataka Web 8 Jan 2020, 4:27 pm
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕ್ರೂರಿಗಳಾಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಸಿದ್ದರಾಮಯ್ಯ ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ಕುರಿತಾಗಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
Vijaya Karnataka Web congress leader siddaramaiah slams at pm modi on caa and nrc
‘ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕ್ರೂರಿಗಳು’ : ಸಿದ್ದರಾಮಯ್ಯ ವಾಗ್ದಾಳಿ


ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮೊದಲು ಕ್ರೂರಿಯಾಗಿರಲಿಲ್ಲ ನಂತರದಲ್ಲಿ ಕ್ರೂರಿಯಾಗಿ ಮಾರ್ಪಟ್ಟ. ಹಾಗೆಯೇ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕ್ರೂರಿಗಳಾಗುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿಎಎ ಜಾರಿ ವಿಚಾರದಲ್ಲಿ ಮೋದಿ ಅಮಿತ್ ಶಾ ಸುಳ್ಳುಹೇಳುತ್ತಿದ್ದಾರೆ. ಆದರೆ ಈ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಗಲಭೆ ಸಂದರ್ಭದಲ್ಲಿ ಮುಸ್ಲಿಮರ ಜೊತೆಗೆ ಹಿಂದೂಗಳು ಪ್ರಾಣ ತೆತ್ತಿದ್ದಾರೆ.

ಜೆಎನ್‌ಯು ಅಂಗಳದಲ್ಲಿ ದೀಪಿಕಾ : ಟ್ವಿಟ್ಟರ್‌ನಲ್ಲಿ ಕಾವೇರಿದ ಪರ - ವಿರೋಧ ಚರ್ಚೆ

ಈ ಕಾಯಿದೆ ಜಾರಿಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆ ಅಲ್ಲ ಬದಲಾಗಿ ದಲಿತರು, ಅವಿದ್ಯಾವಂತರು ಹಾಗೂ ಆದಿವಾಸಿಗಳಿಗೂ ಸಮಸ್ಯೆ ಉಂಟಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರು ಜಾತಿ ಧರ್ಮವನ್ನು ಮೀರಿ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಜೆನ್‌ಯು ಮೇಲೆ ನಡೆದ ದಾಳಿಯನ್ನು ಖಂಡಿಸಿದ ಸಿದ್ದರಾಮಯ್ಯ, ಇದೊಂದು ಸರಕಾರಿ ಪ್ರಾಯೋಜಿತ ದಾಳಿಯಾಗಿದೆ. ಇದುವರೆಗೂ ದಾಳಿಕೋರರ ಮೇಲೆ ಯಾವುದೇ ಕ್ರಮವಾಗಿಲ್ಲ. ಬದಲಾಗಿ ಏಟುತಿಂದು ಗಾಯಗೊಂಡಿರುವ ವಿದ್ಯಾರ್ಥಿ ನಾಯಕಿ ಮೇಲೆ ಎಫ್‌ಐಆರ್‌ ಮಾಡಲಾಗಿದೆ ಎಂದು ದೆಹಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಎನ್‌ಯುನಲ್ಲಿ ಕಾಂಗ್ರೆಸ್ 'ಸತ್ಯ ಶೋಧನಾ' ತಂಡ..! ಹಿಂಸಾಚಾರ ನಡೆದ ಸ್ಥಳಗಳಿಗೆ ಭೇಟಿ

ನನ್ನ ಜನ್ಮದಿನ ನನಗೇ ಗೊತ್ತಿಲ್ಲ

ಸಿಎಎ ಹಾಗೂ ಎನ್‌ಆರ್‌ಸಿ ಜಾರಿಯ ವೇಳೆ ಜನರಲ್ಲಿ ದಾಖಲೆಯನ್ನು ಕೇಳುತ್ತಾರೆ. ಆದರೆ ನನ್ನ ಹುಟ್ಟಿದ ದಿನ ಯಾವುದು ಎಂಬುವುದು ನನಗೇ ಗೊತ್ತಿಲ್ಲ. ಶಾಲೆಗೆ ಸೇರುವಾಗ ಮೇಷ್ಟ್ರು ಅಂದಾಜಿಗೆ ಹಾಕಿದ ಹುಟ್ಟಿದ ದಿನವೇ ದಾಖಲೆಯಲ್ಲಿರುವುದು ಎಂದ ಅವರು ಸಾಮಾನ್ಯ ಜನರು ಅವಿದ್ಯಾವಂತರು ಹೇಗೆ ದಾಖಲೆಗಳನ್ನು ನೀಡುತ್ತಾರೆ ಎಂದು ಪ್ರಶ್ನಿಸಿದರು.

ಜೊತೆಗೆ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರು ಬಾಲಿವುಡ್ ಸಿನಿಮಾ ನಟಿ ದೀಪಿಕಾ ಪಡುಕೋಣೆ ಸಿನಿಮಾವನ್ನು ಬಹಿಷ್ಕಾರ ಮಾಡಲು ಕರೆ ಕೊಟ್ಟಿರುವವರ ಮಾತನ್ನು ಯಾರು ಕೇಳಲ್ಲ ಎಂದ್ರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ