ಆ್ಯಪ್ನಗರ

ಯಾವ ಕೊರೊನಾ ಸುದ್ದಿ ನಿಜ..? ಯಾವುದು ಸುಳ್ಳು..? ಪೊಲೀಸ್‌ ಇಲಾಖೆಯಿಂದ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌

ಸದ್ಯ ಜಗತ್ತಿನಾದ್ಯಂತ ಕೊರೊನಾ ವೈರಸ್‌ನದ್ದೇ ಮಾತು. ಒಂದು ಕಡೆ ನೈಜ ಸುದ್ದಿಗಳು ಜನರಿಗೆ ಜಾಗೃತಿ ಮೂಡಿಸುತ್ತಿದ್ದರೆ. ಅಷ್ಟೇ ಪ್ರಮಾಣದಲ್ಲಿ ಇನ್ನೊಂದು ಕಡೆ ಸುಳ್ಳು ಸುದ್ದಿಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಈ ಕಾರಣದಿಂದ ರಾಜ್ಯ ಪೊಲೀಸ್‌ ಇಲಾಖೆ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ರೂಪಿಸಿದ್ದು, ಯಾವುದು ಸುಳ್ಳು..? ಯಾವುದು ನಿಜ..? ಎಂಬುದನ್ನು ತಿಳಿದುಕೊಳ್ಳಬಹುದು.

Vijaya Karnataka Web 9 Apr 2020, 5:41 pm
ಬೆಂಗಳೂರು: ಸದ್ಯ ಕೊರೊನಾ ವೈರಸ್‌ ಬಗ್ಗೆ ವ್ಯಾಪಕವಾಗಿ ಸುಳ್ಳು ಸುದ್ದಿ, ವದಂತಿಗಳು ಹರಡುತ್ತಿವೆ. ಇಂತಹ ಸುದ್ದಿಗಳಿಂದ ಜನರನ್ನು ಹಾದಿ ತಪ್ಪಿಸುವ ಕೆಲಸಗಳು ಆಗುತ್ತಿವೆ. ಆದ್ದರಿಂದ ರಾಜ್ಯ ಪೊಲೀಸ್‌ ಇಲಾಖೆ ಸ್ವತಃ ತಾನೇ ಫ್ಯಾಕ್ಟ್‌ ಚೆಕ್‌ಗೆ ಇಳಿದಿದ್ದು, ಸುಳ್ಳು ಸುದ್ದಿಗಳನ್ನು ಪಟ್ಟಿ ಮಾಡುವ ಕಾರ್ಯ ಮಾಡುತ್ತಿದೆ.
Vijaya Karnataka Web FACT CHEAK


ಇದಕ್ಕಾಗಿ ಹೊಸ ವೆಬ್‌ಸೈಟ್‌ನ್ನು ರಾಜ್ಯ ಪೊಲೀಸ್‌ ಇಲಾಖೆ ಪ್ರಾರಂಭಿಸಿದೆ. ಇದುವರೆಗೂ ಸಾಮಾಜಿಕ ತಾಣಗಳಲ್ಲಿ ಹರಿದಾಡಿ, ಬಳಿಕ ಟಿವಿ ವಾಹಿನಿಗಳಲ್ಲಿ ಚರ್ಚೆಯಾದ ಸುಳ್ಳು ಸುದ್ದಿ, ವದಂತಿಗಳನ್ನು ಇಲಾಖೆ ಪಟ್ಟಿ ಮಾಡಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಈ ಬಗ್ಗೆ ಪೊಲೀಸ್‌ ಮಹಾ ನಿರ್ದೇಶಕರು ಕೂಡ ಟ್ವೀಟ್‌ ಮಾಡಿದ್ದು, ಸುಳ್ಳು ಸುದ್ದಿಗೆ ಮರುಳಾಗಬೇಡಿ ಎಂದಿರುವ ಅವರು, ವಿವಾದಾತ್ಮಕ ವಿಡಿಯೋ, ಸುದ್ದಿ, ಫೋಟೋ, ಪೋಸ್ಟ್‌ ಮತ್ತು ಸಂದೇಶಗಳು ನಿಜವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯಲು http://factcheck.ksp.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.


ಇನ್ನು, ರಾಜ್ಯ ಪೊಲೀಸ್‌ ಇಲಾಖೆಯ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ನಲ್ಲಿ ಅನೇಕ ಸುಳ್ಳು ಸುದ್ದಿಗಳನ್ನು ಪಟ್ಟಿ ಮಾಡಲಾಗಿದ್ದು, ಅದರಲ್ಲಿ, ಪ್ರಮುಖವಾಗಿ ಏಪ್ರಿಲ್‌ 12ಕ್ಕೆ ಸಂಜೆ 5ಕ್ಕೆ ಮೋದಿ ಎದ್ದು ನಿಂತು ಗೌರವ ಸೂಚಿಸುವಂತೆ ಹೇಳಿರುವುದು, ಕೊರೊನಾ ವೈರಸ್‌ನ ಮೊದಲ ರೋಗಿ ಜೀರೋ ಬಾವಲಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರು, ಡಾ.ದೇವಿಶೆಟ್ಟಿ ಅವರ ಆಡಿಯೋ ಮೆಸೇಜ್‌, ಮೇ 4ರವರೆಗೆ ಲಾಕ್‌ಡೌನ್‌ ಮುಂದುವರೆಯಲಿದೆ ಎಂಬ ಸುಳ್ಳು ಸುದ್ದಿಗಳನ್ನು ಪೊಲೀಸ್‌ ಇಲಾಖೆ ಪಟ್ಟಿ ಮಾಡಿದೆ.

ಕೊರೊನಾ ನಿಯಂತ್ರಣಕ್ಕೆ ನ್ಯಾನೋ ವಾಚ್‌ ಕಂಡು ಹಿಡಿದ ಮೈಸೂರಿನ ಸ್ವಾತಿ ಹೆಗ್ಡೆ..!

ಇವುಗಳ ಜೊತೆಗೆ ಅನೇಕ ಅಂಶಗಳನ್ನು ವೆಬ್‌ಸೈಟ್‌ನಲ್ಲಿ ಕಾಣಬಹುದು. ನೀವು ಗಮನಿಸಿದ ಸುಳ್ಳು ಸುದ್ದಿಯನ್ನು ಕೂಡ ಪೊಲೀಸ್‌ ಇಲಾಖೆಗೆ ಸಲ್ಲಿಸಬಹುದಾಗಿದೆ. ಸದ್ಯಕ್ಕೆ ಇಂಗ್ಲಿಷ್‌ನಲ್ಲಿರುವ ವೆಬ್‌ಸೈಟ್‌ ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ರೂಪುಗೊಳ್ಳುವ ಸಾಧ್ಯತೆ ಇದೆ.

ಮಹಿಳೆಯರ ಮುಂದೆ ಕೊರೊನಾ ಪವರ್‌ ಕಡಿಮೆ, ಸೋಂಕು ಎದುರಿಸುವ ಶಕ್ತಿ ಸ್ತ್ರೀಯರಿಗೇ ಹೆಚ್ಚು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ