ಆ್ಯಪ್ನಗರ

ಮಧು ಬಂಗಾರಪ್ಪ ಒಪ್ಪಿಸಲು ಹರಸಾಹಸ

ಕಾಂಗ್ರೆಸ್‌ ಕೈ ಚೆಲ್ಲಿದ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರನ್ನು ಮೈತ್ರಿ ಕೂಟದ ಅಭ್ಯರ್ಥಿಯಾಗಿಸಲು ಉಭಯ ಪಕ್ಷಗಳ ನಾಯಕರು ಹರಸಾಹಸ ಮಾಡಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 16 Oct 2018, 7:36 am
ಬೆಂಗಳೂರು: ಕಾಂಗ್ರೆಸ್‌ ಕೈ ಚೆಲ್ಲಿದ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಮಧು ಬಂಗಾರಪ್ಪ ಅವರನ್ನು ಮೈತ್ರಿ ಕೂಟದ ಅಭ್ಯರ್ಥಿಯಾಗಿಸಲು ಉಭಯ ಪಕ್ಷಗಳ ನಾಯಕರು ಹರಸಾಹಸ ಮಾಡಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web madu


ಚುನಾವಣೆಯ ಉಸಾಬರಿಯೇ ಬೇಡವೆಂದು ವಿದೇಶಕ್ಕೆ ತೆರಳಿದ್ದ ಮಧು ಅವರನ್ನು ಸಂಪರ್ಕಿಸಲು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಯತ್ನ ನಡೆದಿತ್ತು. ಖುದ್ದು ಸಿಎಂ ಕುಮಾರಸ್ವಾಮಿ ಕರೆ ಮಾಡಿ ಮನವೊಲಿಸಿದ ಬಳಿಕ ಅವರು ವಿದೇಶ ಪ್ರವಾಸದಿಂದ ಭಾನುವಾರ ತಡರಾತ್ರಿ ಬೆಂಗಳೂರಿಗೆ ಮರಳಿದ್ದಾರೆ. ಇತ್ತ ಮಂಗಳೂರು ಪ್ರವಾಸದಿಂದ ಮರಳಿದ ಸಿಎಂ ಕುಮಾರಸ್ವಾಮಿ ಅವರು, ಮಧು ಬಂಗಾರಪ್ಪ ಅವರಿಗಾಗಿ ನಿದ್ದೆ ಬಿಟ್ಟು ಕಾದು ಕುಳಿತಿದ್ದರು. ಸಚಿವ ಡಿ.ಕೆ.ಶಿವಕುಮಾರ್‌ ಮೂಲಕವೂ ಮಧು ಅವರನ್ನು ಸಿಎಂ ಮನವೊಲಿಸಲಾಗಿದೆ ಎನ್ನಲಾಗಿದೆ.

ಮಧು ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ತಮ್ಮ ಮನೆಗೆ ಕರೆಸಿಕೊಂಡ ಸಿಎಂ, ಮಧು ಭಾವ ಶಿವರಾಜ್‌ಕುಮಾರ್‌ ಮತ್ತಿತರ ಸಮ್ಮುಖದಲ್ಲಿ ಮನವೊಲಿಸಲಾಗಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಭವಿಷ್ಯ ಕಂಡುಕೊಂಡ ಚಲುವರಾಯಸ್ವಾಮಿ, ಸಿ.ಎಸ್‌.ಪುಟ್ಟರಾಜು ಹಾಗೂ ದೇವೇಗೌಡರ ಉದಾಹರಣೆಗಳನ್ನೂ ನೀಡಲಾಗಿದೆ. ಕಾಂಗ್ರೆಸ್‌ ನಾಯಕರೂ ಸಾಥ್‌ ನೀಡುತ್ತಿರುವುದನ್ನು ಖಚಿತಪಡಿಸಿ ಮಧು ಅವರಲ್ಲಿ ವಿಶ್ವಾಸ ತುಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಡರಾತ್ರಿ 2.30ಕ್ಕೆ ಪದ್ಮನಾಭನಗರದಲ್ಲಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಿವಾಸಕ್ಕೆ ಮಧು ಬಂಗಾರಪ್ಪ ಅವರನ್ನು ಖುದ್ದು ಸಿಎಂ ಕುಮಾರಸ್ವಾಮಿ ಕರೆದೊಯ್ದರು. ಅಲ್ಲಿ ಮತ್ತಷ್ಟು ಮನವರಿಕೆ ಮಾಡಿ ಮುಂಜಾನೆ 4 ಗಂಟೆ ಹೊತ್ತಿಗೆ ದೇವೇಗೌಡರು ಮಧು ಅವರಿಗೆ 'ಬಿ' ಫಾರಂ ನೀಡಿದ್ದಾರೆ ಎಂದು ಹೇಳಲಾಗಿದೆ.

ಇಂದು ನಾಮಪತ್ರ

ಮಧು ಬಂಗಾರಪ್ಪ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ಕಡೆಯಿಂದ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ