Please enable javascript.ಕಳಸಾ ಬಂಡೂರಿ: ಫೆ.27ರಂದು ರಾಜ್ಯ ಬಂದ್‌ - kalasa banduri state bandh - Vijay Karnataka

ಕಳಸಾ ಬಂಡೂರಿ: ಫೆ.27ರಂದು ರಾಜ್ಯ ಬಂದ್‌

Vijaya Karnataka Web 28 Jan 2017, 7:43 am
Subscribe

ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.27 ರಂದು ರಾಜ್ಯ ಬಂದ್‌ ನಡೆಯಲಿದೆ.

kalasa banduri state bandh
ಕಳಸಾ ಬಂಡೂರಿ: ಫೆ.27ರಂದು ರಾಜ್ಯ ಬಂದ್‌

ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.27 ರಂದು ರಾಜ್ಯ ಬಂದ್‌ ನಡೆಯಲಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಉತ್ತರ ಕರ್ನಾಟಕ ಜನರಿಗೆ ಮಹದಾಯಿ ನದಿಯಿಂದ ಕುಡಿಯಲು ನೀರೊದಗಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಬಂದ್‌ ಮಾಡಲಾಗುವುದು. ಈ ಹಿಂದೆ ಫೆ.18 ರಂದು ಬಂದ್‌ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಏರ್‌ ಶೋ ನಡೆಯಲಿದ್ದು, ಇದಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬಂದ್‌ ಮುಂದೂಡಲಾಗಿದೆ. ರಾಜ್ಯದ 2,500 ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ'' ಎಂದರು.

''ಕೇಂದ್ರ ಸರಕಾರ ರಾಜ್ಯದ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಮಹದಾಯಿ ವಿಚಾರದಲ್ಲಿ ಕೇಂದ್ರ ಸರಕಾರವೇ ತೀರ್ಮಾನ ಕೈಗೊಂಡು ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಪ್ರಧಾನಿ ಮೋದಿ ಇದಕ್ಕೆ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ತಕ್ಕಂತೆ ರಾಜ್ಯದಿಂದ ಆಯ್ಕೆಯಾದ ಸಂಸದರು ಮೌನ ವಹಿಸಿದ್ದಾರೆ. ಅವರುಗಳು ಸಂಸತ್ತಿನಲ್ಲಿ ಒಂದು ದಿನವೂ ಮಹದಾಯಿ ವಿಚಾರ ಕುರಿತು ಗಂಭೀರವಾಗಿ ಮಾತನಾಡಿಲ್ಲ. ಒಬ್ಬ ಸಂಸದನೂ ಸಭಾತ್ಯಾಗ ಮಾಡಿಲ್ಲ.'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ