ಆ್ಯಪ್ನಗರ

Potholes In Karnataka : ಬಿಜೆಪಿ ಸರ್ಕಾರ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ! ಕಾಂಗ್ರೆಸ್ ಆರೋಪ

Congress Tweet On Potholes In Karnataka ಬಿಜೆಪಿ ಸರ್ಕಾರ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿದೆ.

Vijaya Karnataka Web 22 Nov 2022, 6:02 pm

ಹೈಲೈಟ್ಸ್‌:

  • ಬಿಜೆಪಿ ಸರ್ಕಾರ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ
  • ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ
  • ಮಹಾನಗರ ಪಾಲಿಕೆಗಳಲ್ಲಿ ಮೆಟ್ರೋಪಾಲಿಟನ್ ಯೋಜನಾ ಸಮಿತಿ ರಚಿಸುತ್ತೇವೆ ಎಂದಿತ್ತು ಬಿಜೆಪಿ. ಈಗ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web karnataka congress tweet on potholes in karnataka and bengaluru
Potholes In Karnataka : ಬಿಜೆಪಿ ಸರ್ಕಾರ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ! ಕಾಂಗ್ರೆಸ್ ಆರೋಪ
ಬೆಂಗಳೂರು: ಬಿಜೆಪಿ ಸರ್ಕಾರ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿಯ ಪ್ರಣಾಳಿಕೆಯ 40% ಅಂಶಗಳನ್ನು ಈಡೇರಿಸಿದ್ದರೂ ಕರ್ನಾಟಕವನ್ನು ನೋಡಿ ಸ್ವರ್ಗ ಲೋಕದ ಇಂದ್ರ ನಾಚಿಕೊಳ್ಳುತ್ತಿದ್ದ! ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಮೆಟ್ರೋಪಾಲಿಟನ್ ಯೋಜನಾ ಸಮಿತಿ ರಚಿಸುತ್ತೇವೆ ಎಂದಿತ್ತು ಬಿಜೆಪಿ. ಈಗ ಕಸ ಹಾಗೂ ರಸ್ತೆ ಗುಂಡಿಗಳನ್ನು ಮಹಾನಗರಗಳಿಗೆ ಕೊಡುಗೆಯಾಗಿ ನೀಡಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದೆ.

CM Bommai-ಫೆಬ್ರವರಿ ಅಂತ್ಯದೊಳಗೆ 7 ಲಕ್ಷ ಮನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ


ಇದರ ಜೊತೆ, ಶಾಲೆಯೊಂದರ ಮಕ್ಕಳು ರಸ್ತೆ ಗುಂಡಿ ಮುಚ್ಚುವ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಕಾಂಗ್ರೆಸ್ ‘ನಿಷ್ಪ್ರಯೋಜಕ ಸರ್ಕಾರದ ಬಂಡವಾಳ ಮಕ್ಕಳಿಗೂ ಅರ್ಥವಾಗಿ ರಸ್ತೆ ಗುಂಡಿಗಳನ್ನು ಮಕ್ಕಳೇ ಮುಚ್ಚುತ್ತಿದ್ದಾರೆ. ಮಕ್ಕಳು ಮಾಡುತ್ತಿರುವ ಈ ಕಾಮಗಾರಿಯನ್ನು ಸರ್ಕಾರವೇ ಮಾಡಿದ್ದಿದ್ದರೆ 40% ಕಮಿಷನ್ ಲೂಟಿ ಮಾಡಿ ಗುಂಡಿಗಳನ್ನು ಹಾಗೇ ಬಿಟ್ಟಿರುತ್ತಿತ್ತು! ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಈ ಮಕ್ಕಳನ್ನಾದರೂ ನೋಡಿ ಬುದ್ದಿ ಕಲಿಯಿರಿ! ಎಂದಿದೆ.


ರಸ್ತೆ ಗುಂಡಿಯಿಂದಾಗಿ ಸ್ಕೂಟರ್‌ ವೊಂದರ ಚಕ್ರ ಮುರಿದು ಹೋಗಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ರಸ್ತೆಗುಂಡಿಗಳಿಗೆ ಬಾಡಿ, ಗಾಡಿ ಎಲ್ಲವೂ ನಾಶವಾಗುತ್ತಿವೆ! ರಸ್ತೆಗುಂಡಿಯ ಪರಿಣಾಮ ಬೈಕಿನ ಚಕ್ರವೇ ಮುರಿದುಹೋಗಿದೆ, ಬಿಜೆಪಿಯವರು ನೊಂದ ಜನರ ಬಳಿ ನಿಂತು ದಮ್ಮು ತಾಕತ್ತಿನ ಮಾತಾಡುವ ಧೈರ್ಯ ತೋರಿಸುವರೇ? ದಿನದಿನವೂ ರಸ್ತೆಗುಂಡಿ ಅವಾಂತರ ಹೆಚ್ಚುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ? ಎಂದು ಪ್ರಶ್ನೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ