Please enable javascript.Heavy Rain In Karnataka,Karnataka Rain: ಮೇ 21 ಕ್ಕೆ ಭಾರೀ ಮಳೆ; ರಾಜ್ಯದ ಈ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ - karnataka rain heavy rain on may 21 meteorological department announced orange alert for these 6 districts of the state - Vijay Karnataka

Karnataka Rain: ಮೇ 21 ಕ್ಕೆ ಭಾರೀ ಮಳೆ; ರಾಜ್ಯದ ಈ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ

Edited by ಜಯಪ್ರಕಾಶ್‌ ಬಿರಾದಾರ್‌ | Vijaya Karnataka Web 20 May 2024, 11:47 pm
Subscribe

Heavy Rain In Karnataka : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆ ಮುಂದುವರೆದಿದೆ. ಮೇ 21 ಕ್ಕೂ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಸಂಬಂಧ ಆಯಾ ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಟ್‌ಗಳನ್ನು ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ರಾಜ್ಯದ್ಯಂತ ಮಂಗಳವಾರ (ಮೇ 21 ಕ್ಕೆ) ವ್ಯಾಪಕ ಮಳೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ.
  • ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ.
  • ಮೇ 22 ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌.
rain
ಮಳೆ (ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯದ್ಯಂತ ಮಂಗಳವಾರ (ಮೇ 21 ಕ್ಕೆ) ವ್ಯಾಪಕ ಮಳೆಯಾಗಲಿದ್ದು, ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ.
ಮೇ 21 ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಮೇ 22 ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಸಂಜೆ ಬಳಿಕ ಸುರಿದ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಬಳಿಕ ಜೋರು ಮಳೆಯಾಗಿದೆ. ದಿನವೀಡಿ ಮೋಡ ಮುಚ್ಚಿದ ವಾತಾವರಣವಿತ್ತು. ಸಂಜೆ 4 ಗಂಟೆಯ ಬಳಿಕ ಜೋರು ಮಳೆಯಾಗಿದ್ದು, ತಡ ರಾತ್ರಿವರೆಗೂ ಮಳೆ ಅಬ್ಬರಿಸಿತು.
ರೈತರಿಗೆ ಗುಡ್‌ ನ್ಯೂಸ್‌ : ಕೆಆರ್‌ಎಸ್‌ ಸೇರಿ ಕರ್ನಾಟಕದ ಪ್ರಮುಖ ಡ್ಯಾಂಗಳಿಗೆ ಒಳ ಹರಿವು ಆರಂಭ! ಮೇ ತಿಂಗಳಲ್ಲೇ ನೀರು ಬರಲು ಶುರು!

ದಾವಣಗೆರೆಯಲ್ಲಿ ಭರ್ಜರಿ ಮಳೆ

ದಾವಣಗೆರೆ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆ ಭರ್ಜರಿ ಮಳೆಯಾಗಿದೆ, ಹೊಲ, ಜಮೀನುಗಳಲ್ಲಿನೀರು ನಿಲ್ಲುವಷ್ಟು ಮಳೆಯಾಗಿದೆ. ಚನ್ನಗಿರಿ ತಾಲೂಕು ಹಿರೇಕೋಗಲೂರು ಗ್ರಾಮದ ಸುತ್ತಮುತ್ತ ಸೂಳೆಕೆರೆ, ತ್ಯಾವಣಿಗೆ, ನವಿಲೇಹಾಳು, ಕೆವಿ ಕ್ಯಾಂಪು, ಶ್ಯಾಗಲೆ, ಕಂದಗಲ್ಲು, ಗಿಡ್ಡನಹಳ್ಳಿ ಭಾಗದಲ್ಲಿಸಂಜೆ ಒಂದ ಗಂಟೆಗೂ ಹೆಚ್ಚು ಕಾಲ ಬಿರು ಮಳೆ ಸುರಿದಿದೆ. ಮಾಯಕೊಂಡ ಭಾಗದಲ್ಲೂವರ್ಷಧಾರೆಯಾಗಿದೆ. ಆನಗೋಡು ಹೋಬಳಿಯ ಹಲವು ಗ್ರಾಮಗಳಲ್ಲಿಮಳೆ ಸುರಿದಿದ್ದು ಮುಂಗಾರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಆಗಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಅರಿವು

ಕಳೆದ ಎರಡು ತಿಂಗಳಿಂದ ಉಗಮ ಸ್ಥಾನದಿಂದ ಹರಿವು ನಿಲ್ಲಿಸಿ ಆಟದ ಮೈದಾನದಂತೆ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯಲ್ಲಿ ನೀರ ಹರಿವು ಆರಂಭಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾದ ಪರಿಣಾಮ ನೇತ್ರಾವತಿ ನದಿಯ ಸಂಪರ್ಕ ಹಳ್ಳಗಳಲ್ಲಿಹರಿದು ಬಂದ ನೀರು ನದಿಯನ್ನು ಸೇರಿ ನದಿಯಲ್ಲಿಹರಿವು ಆರಂಭವಾಗಿದೆ. ಪ್ರಸ್ತುತ ದಿಡುಪೆಯಿಂದ ಹರಿವು ಆರಂಭವಾಗಿದ್ದು ಮುಂಡಾಜೆಯ ನಿಡಿಗಲ್‌ ಪ್ರದೇಶವನ್ನು ದಾಟಿದೆ. ನದಿಯಲ್ಲಿನೀರು ಹರಿದ ಕಾರಣ ಇಲ್ಲಿನ ಕೆರೆ, ಬಾವಿಗಳು ತುಂಬಿವೆ. ಅಡಕೆ ತೋಟಗಳಿಗೆ ಬೋರ್ಡೋ ಸಿಂಪಡಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಕೆರೆ,ಬಾವಿಗಳಲ್ಲಿನೀರು ತುಂಬಿರುವುದು ಕೃಷಿಕರ ಸಮಸ್ಯೆ ದೂರ ಮಾಡಿದೆ.

ದ.ಕ. ಜಿಲ್ಲೆಯಾದ್ಯಂತ ಮಳೆ ಬಿರುಸು

ದಕ್ಷಿಣ ಕನ್ನ‌ಡ ಜಿಲ್ಲೆಯಾದ್ಯಂತ ಸೋಮವಾರ ಮಧ್ಯಾಹ್ನ ಬಳಿಕ ಬಿರುಸಿನ ಮಳೆಯಾಗಿದೆ. ಮಳೆಯಿಂದಾಗಿ ನ್ಯೂಪಡ್ಪು ಸರಕಾರಿ ಶಾಲೆಯಲ್ಲಿ ಕಂಪೌಂಡ್ ಹಾಲ್ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಮಂಗಳೂರು ನಗರದಲ್ಲಿ ಸೋಮವಾರ ಸಂಜೆಯಿಂದ ಹನಿ ಮಳೆಯಾಗುತ್ತಿದ್ದರೆ ರಾತ್ರಿ 8 ಗಂಟೆಯ ಬಳಿಕ ಬಿರುಸಿನ ಮಳೆ ಆರಂಭವಾಯಿತು. ಹಲವೆಡೆ ಚರಂಡಿಯ ಹೂಳೆತ್ತದ ಕಾರಣ ನಗರದ ಪ್ರಧಾನ‌ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು.‌ ಇದರಿಂದ ಚರಂಡಿ ಮಣ್ಣು-ಕಲ್ಲುಗಳು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಸ್ತೆಯಲ್ಲಿ ನೀರು ನಿಂತ ಕಾರಣ ವಾಹನ‌ ಸವಾರರು ಪರದಾಡುವಂತಾಯಿತು.

ಮಿಂಚು ಗುಡುಗು ಸಹಿತ ಮಳೆಯಿಂದಾಗಿ ಹಲವೆಡೆ ದ್ವಿಚಕ್ರ ಸವಾರರು ಬಸ್ ತಂಗುದಾಣದಲ್ಲೇ ಕೆಲಕಾಲ ಆಶ್ರಯ ಪಡೆದುಕೊಂಡರು. ನಾನಾ ಕಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸುರತ್ಕಲ್, ಕಿನ್ನಿಗೋಳಿ ವ್ಯಾಪ್ತಿಯಲ್ಲಿ ರಾತ್ರಿ 7 ಗಂಟೆ ಬಳಿಕ ಮಿಂಚು-ಗುಡುಗು ಸಹಿತ ಮಳೆಯಾಗುತ್ತಿದೆ.
 ಜಯಪ್ರಕಾಶ್‌ ಬಿರಾದಾರ್‌
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ