Please enable javascript.Kpcc Leaders Protest,ತೈಲ ಬೆಲೆ ಏರಿಕೆ ವಿರುದ್ಧ ಎತ್ತಿನ ಗಾಡಿ ಮೂಲಕ ಬೀದಿಗಿಳಿದ ಕಾಂಗ್ರೆಸ್‌..! - kpcc leaders protest against fuel rate hike - Vijay Karnataka

ತೈಲ ಬೆಲೆ ಏರಿಕೆ ವಿರುದ್ಧ ಎತ್ತಿನ ಗಾಡಿ ಮೂಲಕ ಬೀದಿಗಿಳಿದ ಕಾಂಗ್ರೆಸ್‌..!

Vijaya Karnataka Web 13 Sep 2021, 12:26 pm
Embed

ಬೆಂಗಳೂರು: ಇಂದಿನಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನವೇ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಮರ ಸಾರಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಕೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧಕ್ಕೆ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಯಿತು.

ಎತ್ತಿನ ಗಾಡಿಯಲ್ಲಿಯೇ ಕಾಂಗ್ರೆಸ್‌ ನಾಯಕರು ವಿಧಾನಸೌಧಕ್ಕೆ ತೆರಳಿದರು. ಬೆಲೆ ಏರಿಕೆಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗಟ್ಟಿ ಎಂಬ ಸಂದೇಶವನ್ನು ರವಾನಿಸುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮ ನಿವಾಸಗಳಿಂದ ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿಯೇ ಬಂದರು.

ಇನ್ನು, ವಿಧಾನಸೌಧದ ಒಳಗಡೆ ಎತ್ತಿನಗಾಡಿಯನ್ನು ಬಿಡಲು ಪೊಲೀಸರು ನಿರಾಕರಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನಸೌಧದ ಒಳಗಡೆ ಬಿಡುವಂತೆ ಒತ್ತಾಯಿಸಿದರು. ಎತ್ತಿನ ಗಾಡಿಯಲ್ಲಿ ವಿಧಾನಸೌಧದ ಒಳಗಡೆ ಹೋಗಬಾರದು ಎಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಕ್ಕುಚ್ಯತಿ ಮಂಡಿಸುವ ಎಚ್ಚರಿಕೆ ಕೊಟ್ಟರು. ಕೊನೆಗೆ ಎತ್ತಿನ ಗಾಡಿಯಲ್ಲಿ ವಿಧಾನಸೌಧ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಿದರು.