ಆ್ಯಪ್ನಗರ

ಕರಾವಳಿಯಲ್ಲಿ ಗುರುವಾರ ಆರೆಂಜ್‌‌, ಶುಕ್ರವಾರ ರೆಡ್‌ ಅಲರ್ಟ್‌; ಭಾರಿ ಮಳೆ ಸಾಧ್ಯತೆ

ಗುರುವಾರ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದಿರುವ ಹವಾಮಾನ ಇಲಾಖೆ ಬೆಂಗಳೂರಿಗೆ ಯಲ್ಲೋ ಅಲರ್ಟ್‌ ಘೋಷಿಸಿದೆ.

Vijaya Karnataka 9 Sep 2020, 8:28 pm
ಬೆಂಗಳೂರು: ನೈಋುತ್ಯ ಮುಂಗಾರು ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿರುವ ಬೆನ್ನಲ್ಲೇ, ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಆರೆಂಜ್‌ ಅಲರ್ಟ್‌ ಹಾಗೂ ಶುಕ್ರವಾರ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.
Vijaya Karnataka Web rain
ಸಾಂದರ್ಭಿಕ ಚಿತ್ರ


ರಾಜ್ಯದ ಕರಾವಳಿ ತೀರದುದ್ದಕ್ಕೂ 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಬಿರುಗಾಳಿಯ ವಾತಾವರಣ ಇರಲಿದೆ. ಜೊತೆಗೆ ಮಂಗಳೂರಿನಿಂದ ಕಾರವಾರದವರೆಗೂ 2.3-2.6 ಮೀ. ಎತ್ತರದವರೆಗೆ ಅಲೆಗಳು ಏಳಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗುರುವಾರ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣೆಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಹೆಸರಘಟ್ಟದಲ್ಲಿ ಅತಿ ಹೆಚ್ಚು ಮಳೆ

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಹೊರವಲಯದ ಹೆಸರಘಟ್ಟದಲ್ಲಿ 150 ಮಿ.ಮೀ.ನಷ್ಟು ಅತಿ ಹೆಚ್ಚು ಮಳೆ ದಾಖಲಾಗಿದೆ. ಗುಬ್ಬಿ, ಕೊರಟಗೆರೆ, ಕೆಐಎಎಲ್ ‌(ದೇವನಹಳ್ಳಿ) ತಲಾ 100, ಹೊಸದುರ್ಗ 90, ಸಂತೇಬೆನ್ನೂರು, ದಾವಣಗೆರೆ, ಬುಕ್ಕಾಪಟ್ಟಣ ತಲಾ 80, ಚಿಕ್ಕೋಡಿ, ಸೋವಾರಪೇಟೆ, ಬಂಗಾರಪೇಟೆ, ದೊಡ್ಡಬಳ್ಳಾಪುರ, ದಾವಣಗೆರೆ ತಲಾ 70, ಹೊಸಕೋಟೆ, ಹಿರಿಯೂರು ತಲಾ 60, ಭರಮಸಾಗರ, ಚಳ್ಳಕೆರೆ ತಲಾ 50, ಯಲಹಂಕ ಐಎಎಫ್‌, ರಾಮಗಿರಿ ತಲಾ 40, ಭದ್ರಾವತಿ, ಮುದಗಲ್‌, ನೆಲಮಂಗಲ, ಚನ್ನಗಿರಿ, ಪಾವಗಡದಲ್ಲಿ ತಲಾ 30 ಮಿ.ಮೀ. ಮಳೆಯಾಗಿದೆ.

ಬುಧವಾರವೂ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಸಂಜೆಯಿಂದ ಒಂದೇ ಸಮನೆ ಎಡೆಬಿಡದೆ ವರ್ಷಧಾರೆ ಸುರಿಯುತ್ತಿದೆ.

ಮಳೆ ಪ್ರಮಾಣ(ಮಿ.ಮೀ.)
ಗರಿಷ್ಠ: ಹೆಸರಘಟ್ಟ - 150
ಕನಿಷ್ಠ: ಸಂಡೂರು - 10

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ