ಆ್ಯಪ್ನಗರ

ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ: ಗ್ರಾಹಕರು ತಿಳಿದುಕೊಳ್ಳಬೇಕಾದ ಹೊಸ ನಿಯಮ!

ಗೃಹಜ್ಯೋತಿ ಯೋಜನೆಯ ಲಾಭ ಪಡೆಯುವವರು ತಿಳಿದುಕೊಳ್ಳಲೇಬೇಕಾದ ವಿಚಾರವಿದು. ಜ. 18ರಂದು ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆಯ ನಿಯಮಗಳಲ್ಲಿನ ಒಂದು ನಿಯಮವನ್ನು ಅಲ್ಪ ಬದಲಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ, 200 ಯೂನಿಟ್ ನೊಳಗೆ ಯಾರು ವಿದ್ಯುತ್ ಬಳಸುತ್ತಿದ್ದರೋ ಅವರಿಗೆ ಶೇ. 10ರಷ್ಟು ಹೆಚ್ಚುವರಿ ಯೂನಿಟ್ ಗಳನ್ನು ಉಚಿತವಾಗಿ ಬಳಸಲು ಕೊಡುತ್ತಿದ್ದ ರಾಜ್ಯ ಸರ್ಕಾರ, ಇನ್ನು ಮುಂದೆ ಈ ನಿಯಮವನ್ನು ಬದಲಿಸಿ ಹೆಚ್ಚುವರಿಯಾಗಿ 10 ಯೂನಿಟ್ ಗಳನ್ನು ಮಾತ್ರ ಉಚಿತವಾಗಿ ನೀಡಲಿದೆ.

Authored byಚೇತನ್ ಓ.ಆರ್. | Edited byಚೇತನ್ ಓ.ಆರ್. | Vijaya Karnataka Web 19 Jan 2024, 12:01 am

ಹೈಲೈಟ್ಸ್‌:

  • ಗೃಹಜ್ಯೋತಿಯ ನಿಯಮದಲ್ಲಿ ಅಲ್ಪ ಬದಲಾವಣೆ.
  • 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ಶೇ. 10ರಷ್ಟು ಯೂನಿಟ್ ಇನ್ನು ಮುಂದೆ ಬಂದ್.
  • ಶೇ. 10ರಷ್ಟು ಯೂನಿಟ್ ಬದಲು 10 ಯೂನಿಟ್ ವಿದ್ಯುತ್ ಮಾತ್ರ ನೀಡಲು ನಿರ್ಧಾರ.
  • ಜ. 18ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟದ ಸಭೆಯಲ್ಲಿ ತೀರ್ಮಾನ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಗೃಹಜ್ಯೋತಿ ಬಿಲ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಜ್ಯೋತಿ ಯೋಜನೆ ಮಹತ್ವದ್ದಾಗಿದೆ. ಈ ಯೋಜನೆಯಲ್ಲಿ 200 ಯೂನಿಟ್‌ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈವರೆಗಿನ ನಿಯಮದಂತೆ ಗ್ರಾಹಕರು ತಾವು ಬಳಕೆ ಮಾಡಿದ 200 ಮೀಟರ್‌ ಒಳಗಿನ ವಿದ್ಯುತ್ ಯೂನಿಟ್‌ಗೆ ಹೆಚ್ಚುವರಿಯಾಗಿ 10% ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದರೆ ಇದೀಗ ಬದಲಾವಣೆಯನ್ನು ತರಲಾಗಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರ ಪ್ರಕಾರ ಈವರೆಗೆ ನೀಡಲಾಗುತ್ತಿದ್ದ ಶೇ 10% ಬದಲಾಗಿ 10 ಯೂನಿಟ್‌ ವಿದ್ಯುತ್ ರಿಯಾಯಿತಿ ನೀಡಲು ನಿರ್ಧಾರ ಮಾಡಲಾಗಿದೆ. ಇದರಿಂದ ಅತಿ ಕಡಿಮೆ ವಿದ್ಯುತ್ ಬಳಕೆದಾರನಿಗೆ ಹೆಚ್ಚು ಲಾಭ, 200 ಯೂನಿಟ್ ಹತ್ತಿರದವರೆಗೂ ವಿದ್ಯುತ್ ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಈ ಹೊಸ ನಿಯಮದಿಂದ ಯೂನಿಟ್ ಗಳ ಲೆಕ್ಕಾಚಾರದಲ್ಲಿ ಉಚಿತವಾಗಿ ಸಿಗುವ ಯೂನಿಟ್ ಗಳಲ್ಲಿ ಕೊಂಚ ಇಳಿಕೆಯಾಗಲಿದೆ.


ಉದಾಹರಣೆಗೆ ಓರ್ವ ಗ್ರಾಹಕ ಸರಾಸರಿಯಾಗಿ 43 ಯೂನಿಟ್‌ ವಿದ್ಯುತ್ ಬಳಕೆ ಮಾಡಿದರೆ ಈವರೆಗಿನ ನಿಯಮಾವಳಿ ಪ್ರಕಾರ ಅದಕ್ಕೆ 10% ಹೆಚ್ಚುವರಿಯಾಗಿ ರಿಯಾಯಿತಿಯನ್ನು ನೀಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು. ಅಂದರೆ, ಆತನು 4.8 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ಬಳಸಬಹುದಿತ್ತು. ಆದರೆ ಇದೀಗ ಶೇ. 10ಕ್ಕೆ ಬದಲಾಗಿ 10 ಯೂನಿಟ್‌ ಮಾಡಲಾಗಿದೆ. ಅಂದರೆ, 43 ಯೂನಿಟ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಇನ್ನು ಮುಂದೆ 53 ಯೂನಿಟ್ ಸಿಗಲಿದೆ.

ಆದರೆ, ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟ ಆಗಲಿದೆ. ಉದಾಹರಣೆ ಓರ್ವ ಗ್ರಾಹಕ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಪ್ರಕಾರ 10% ಸೇರಿಸಿ ಉಚಿತ ಕೊಡುವುದರಿಂದ 165 ಯೂನಿಟ್‌ ವಿದ್ಯುತ್ ಬಳಕೆಗೆ ಅವಕಾಶ ಇತ್ತು. ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್‌ ನೀಡುತ್ತಿರುವುದರಿಂದ 160 ಯೂನಿಟ್ ಬಳಕೆ ಮಾಡಬಹುದುದಾಗಿದೆ. 5 ಯೂನಿಟ್‌ ಹೆಚ್ಚುವರಿಯಾಗಿ ಬಳಸುವ ಅವಕಾಶ ತಪ್ಪಲಿದೆ. ಹೆಚ್ಚು ಯೂನಿಟ್ ಗಳನ್ನು ಬಳಸುವವರಿಂದ ಕೆಲವು ಯೂನಿಟ್ ಗಳನ್ನು ಕಡಿತಗೊಳಿಸಿ, ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಪ್ಪಿಸಲು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಗುಡ್‌ ನ್ಯೂಸ್‌: ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ! ಯಾವ ಎಸ್ಕಾಂನಲ್ಲಿ ಎಷ್ಟು ದರ ಕಡಿಮೆ ಆಗಿದೆ? ಇಲ್ಲಿದೆ ಮಾಹಿತಿ
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿದೆ. ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡೇ ಚುನಾವಣೆಗೆ ಹೋಗಬೇಕು ಎಂಬ ಸೂಚನೆಯನ್ನೂ ನೀಡಿದೆ. ಅಲ್ಲದೆ ಗ್ಯಾರಂಟಿಗಳ ಸಮರ್ಪಕವಾದ ಜಾರಿಗೆ ಸಮಿತಿಯನ್ನು ರಚನೆ ಮಾಡಲು ನಿರ್ಧಾರ ಮಾಡಲಾಗಿದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ