Please enable javascript.ಧರ್ಮ, ಆರಾಧನಾಲಯಗಳಿಗೆ ಪಕ್ಷ ವಿರೋಧಿಯಲ್ಲ: ಸಿಪಿಎಂ - ಧರ್ಮ, ಆರಾಧನಾಲಯಗಳಿಗೆ ಪಕ್ಷ ವಿರೋಧಿಯಲ್ಲ: ಸಿಪಿಎಂ - Vijay Karnataka

ಧರ್ಮ, ಆರಾಧನಾಲಯಗಳಿಗೆ ಪಕ್ಷ ವಿರೋಧಿಯಲ್ಲ: ಸಿಪಿಎಂ

ವಿಕ ಸುದ್ದಿಲೋಕ 4 Jan 2014, 7:33 pm
Subscribe

ವಾಮ ಸಂಘಟನೆಗಳು ಧರ್ಮ, ಆರಾಧನಾಲಯಗಳಿಗೆ ಎಂದೂ ವಿರೋಧಿಯಲ್ಲ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಕೋಡಿಯೇರಿ ಬಾಲಕೃಷ್ಣನ್ ಹೇಳಿದರು.

ಧರ್ಮ, ಆರಾಧನಾಲಯಗಳಿಗೆ ಪಕ್ಷ ವಿರೋಧಿಯಲ್ಲ: ಸಿಪಿಎಂ
ಕಾಸರಗೋಡು: ವಾಮ ಸಂಘಟನೆಗಳು ಧರ್ಮ, ಆರಾಧನಾಲಯಗಳಿಗೆ ಎಂದೂ ವಿರೋಧಿಯಲ್ಲ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಕೋಡಿಯೇರಿ ಬಾಲಕೃಷ್ಣನ್ ಹೇಳಿದರು. ಅವರು ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾಗೂ ಇಎಂಎಸ್ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾಕರು ಮತ್ತು ವಾಮ ಸಂಘಟನೆಗಳು ಎಂಬ ವಿಷಯದಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ವಾಮ ಸಂಘಟನೆಗಳು ಧರ್ಮ ಸಂಘಟನೆ, ಆರಾಧನಾಲಯಗಳಿಗೆ ವಿರುದ್ಧ ಎಂಬುದಾಗಿ ಕೆಲವು ನಿಕ್ಷೇಪ್ತ ಮತಪಂಡಿತರು ಪ್ರಚಾರ ಮಾಡಿರುವುದು ಸರಿಯಲ್ಲ. ಕಮ್ಯೂನಿಸ್ಟ್ ಪಕ್ಷ ಆಡಳಿತ ನಡೆಸುವ ಯಾವ ರಾಜ್ಯದಲ್ಲೂ ಮತಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಮಸೀದಿ ಹಾಗೂ ದೇವಾಲಯಗಳಿಗೆ ತೆರಳುವ ಬಡಜನರ ಸಮಸ್ಯೆಗಳನ್ನು ಬಗೆಹರಿಸುವುಲ್ಲಿ ಕಮ್ಯೂನಿಸ್ಟ್ ಪಕ್ಷ ಪ್ರಯತ್ನಿಸಿದೆ ಎಂದರು.

ಈ ಹಿಂದೆ ಮಲಬಾರಿನಲ್ಲಿ ಮಸೀದಿಗಳ ನಿರ್ಮಾಣಕ್ಕಾಗಿ ಮದರಾಸು ಸರಕಾರದ ಪ್ರತ್ಯೇಕ ಅನುಮತಿ ಬೇಕಾಗಿತ್ತು. ಆ ನಿಯಮವನ್ನು ತೆಗೆದು ಹಾಕಿರುವುದು ಇ.ಎಂ.ಎಸ್. ಮುಖ್ಯಮಂತ್ರಿಯಾಗಿದ್ದಾಗ. ಮುಸ್ಲಿ ಅಲ್ಪಸಂಖ್ಯಾತರ ಉನ್ನತ್ತಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿರುವುದು ಎಡರಂಗ ಆಡಳಿದಲ್ಲಿರುವಾಗ ಎಂಬುದನ್ನು ಮರೆಯುವಂತಿಲ್ಲ. ಮಲಬಾರಿನ ಮುಸ್ಲಿಂ ಕುಟುಂಬಗಳಿಗೆ ಭೂ ಪರಿಷ್ಕರಣೆಯ ಪ್ರಯೋಜನ ಲಭಿಸಿರುವುದು, ಮುಸ್ಲಿಂ ಪಂಗಡದ ವಿದ್ಯಾಭ್ಯಾಸವನ್ನು ಗುರಿಯಾಗಿರಿಸಿಕೊಂಡು ಇಎಂಎಸ್ ಸರಕಾರ ಕಲ್ಲಿಕೋಟೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ್ದು, ಅವರ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಲಪ್ಪುರ ಜಿಲ್ಲೆಯನ್ನು ರಚಿಸಿರುವುದು ಇಎಂಎಸ್ ಸರಕಾರದ ಅವಧಿಯಲ್ಲಿಯಾಗಿರುತ್ತದೆ. ಮುಸ್ಲೀಂ ಹೆಣ್ಮುಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ ಜಾರಿಗೊಳಿಸಿರುವುದು ಎಡರಂಗ ಸರಕಾರದ ಅವಯಲ್ಲಿಯಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ. ಕರುಣಾಕರನ್ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಕೆ.ಟಿ.ಹಂಸ, ಶಾಸಕ ಕೆ.ಟಿ.ಜಲೀಲ್, ಎ.ಪಿ.ಅಹಮ್ಮದ್ ಮಲಪ್ಪುರಂ, ಸಾಹಿತಿ ಸಾರಾ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ