Please enable javascript.18 ಕೋಟಿ ಸುರಿದರೂ ರಸ್ತೆ ಕಾಮಗಾರಿ ಮಾತ್ರ ಕಳಪೆ ! - 18 ಕೋಟಿ ಸುರಿದರೂ ರಸ್ತೆ ಕಾಮಗಾರಿ ಮಾತ್ರ ಕಳಪೆ ! - Vijay Karnataka

18 ಕೋಟಿ ಸುರಿದರೂ ರಸ್ತೆ ಕಾಮಗಾರಿ ಮಾತ್ರ ಕಳಪೆ !

ವಿಕ ಸುದ್ದಿಲೋಕ 25 Jun 2014, 3:59 am
Subscribe

ಅದು 29 ಕಿ.ಮೀ. ಉದ್ದದ ಬದಿಯಡ್ಕ-ಕುಂಬಳೆ -ಮುಳ್ಳೇರಿಯ ರಸ್ತೆ. ನಾಗರಿಕರ-ಜನಸಂಘಟನೆಗಳ ಹೋರಾಟದಿಂದ ಕೊನೆಗೂ ಡಾಮರೀಕರಣ ಕಂಡು ಹೊಸ ರೂಪ ಪಡೆಯಿತು. ಆದರೆ ಡಾಮರೀಕಣ ನಡೆದು ತಿಂಗಳು ಕಳೆದಿಲ್ಲ, ಅದಾಗಲೇ ಡಾಮರು ಎದ್ದು ಹೊಂಡಾ ಗುಂಡಿ ನಿರ್ಮಾಣವಾಗಿದೆ. ರಸ್ತೆಗೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ, 7 ಮೀಟರ್ ಅಗಲವಾಗಬೇಕಿದ್ದ ರಸ್ತೆ 5ಮೀಟರ್ ಮಾತ್ರ ಅಗಲವಾಗಿದೆ. ಮೇಲ್ನೋಟಕ್ಕೆ ಕೋಟ್ಯಂತರ ವೆಚ್ಚದ ರಸ್ತೆ ಕಂಟ್ರಾಕ್ಟುದಾರನ ಕಳಪೆ ಕಾಮಗಾರಿಯನ್ನು ಸಾರಿ ಹೇಳುತ್ತಿದೆ. ಇದರಿಂದ ನಾಗರಿಕರು-ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮತ್ತೆ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದೆ.

18
18 ಕೋಟಿ ಸುರಿದರೂ ರಸ್ತೆ ಕಾಮಗಾರಿ ಮಾತ್ರ ಕಳಪೆ !
- ರಮೇಶ್ ಅಗಲ್ಪಾಡಿ ಬದಿಯಡ್ಕ

ಅದು 29 ಕಿ.ಮೀ. ಉದ್ದದ ಬದಿಯಡ್ಕ-ಕುಂಬಳೆ -ಮುಳ್ಳೇರಿಯ ರಸ್ತೆ. ನಾಗರಿಕರ-ಜನಸಂಘಟನೆಗಳ ಹೋರಾಟದಿಂದ ಕೊನೆಗೂ ಡಾಮರೀಕರಣ ಕಂಡು ಹೊಸ ರೂಪ ಪಡೆಯಿತು. ಆದರೆ ಡಾಮರೀಕಣ ನಡೆದು ತಿಂಗಳು ಕಳೆದಿಲ್ಲ, ಅದಾಗಲೇ ಡಾಮರು ಎದ್ದು ಹೊಂಡಾ ಗುಂಡಿ ನಿರ್ಮಾಣವಾಗಿದೆ. ರಸ್ತೆಗೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ, 7 ಮೀಟರ್ ಅಗಲವಾಗಬೇಕಿದ್ದ ರಸ್ತೆ 5ಮೀಟರ್ ಮಾತ್ರ ಅಗಲವಾಗಿದೆ. ಮೇಲ್ನೋಟಕ್ಕೆ ಕೋಟ್ಯಂತರ ವೆಚ್ಚದ ರಸ್ತೆ ಕಂಟ್ರಾಕ್ಟುದಾರನ ಕಳಪೆ ಕಾಮಗಾರಿಯನ್ನು ಸಾರಿ ಹೇಳುತ್ತಿದೆ. ಇದರಿಂದ ನಾಗರಿಕರು-ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮತ್ತೆ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದೆ.

29ಕಿಮೀ ಈ ರಸ್ತೆ 7 ಮೀಟರ್ ಅಗಲದಲ್ಲಿ ಸುಮಾರು 18.5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲು ಟೆಂಡರ್ ಮಂಜೂರು ಮಾಡಲಾಗಿತ್ತು. ಅದೇ ರೀತಿ ಕಾಮಗಾರಿ ನಡೆಯಬೇಕಿತ್ತು. ಆದರೆ ಕಂಟ್ರಾಕ್ಟುದಾರ ಕಾಮಗಾರಿ ಪ್ರಾರಂಭಿಸಲು ಮೀನ-ಮೇಷ ಎಣಿಸುತ್ತಿದ್ದ. ಇದನ್ನರಿತ ನಾಗರಿಕರು ಮತ್ತು ವ್ಯಾಪಾರಿ ಏಕೋಪನ ಸಮಿತಿಯು ತೀವ್ರ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ಬಿಸಿ ಅರಿತ ಕಂಟ್ರಾಕ್ಟುದಾರ ಕೊನೆಗೂ ಅವಸರದಲ್ಲಿ ಅಲ್ಲಲ್ಲಿ ಅರ್ಧಂಬರ್ದ ಕಾಮಗಾರಿ ನಡೆಸಿದ.

ಕುಂಟುನೆಪ ಹೇಳುವ ಗುತ್ತಿಗೆದಾರ !

ಟೆಂಡರ್‌ನ ಪ್ರಕಾರ 29 ಕಿ.ಮೀ.ನ ರಸ್ತೆ 7 ಮೀಟರ್ ಅಗಲವಾಗಿ ನಡೆಯಬೇಕಿತ್ತು. ಆದರೆ 5 ಮೀಟರ್ ಮಾತ್ರ ಅಗಲಗೊಳಿಸಿ ಕಂಟ್ರಾಕ್ಟುದಾರ ಕೈತೊಳೆದುಕೊಂಡ. ಈ ಬಗ್ಗೆ ಸಂಬಂಧಪಟ್ಟವರು ಕಂಟ್ರಾಕ್ಟುದಾರರು ಕೇಳಿದಾಗ 18.5 ಕೋಟಿ ಮೊತ್ತಕ್ಕೆ 7 ಮೀಟರ್ ಅಗಲಗೊಳಿಸಲು ಸಾಧ್ಯವಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ.

ಅರ್ಧಂಬರ್ಧ ಕಾಮಗಾರಿ

ದಿಯಡ್ಕ-ಕುಂಬಳೆ ರಸ್ತೆಯಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ. ಮಾತ್ರವಲ್ಲದೆ ಡಾಮರೀಕರಣ ನಡೆಸಿದ ಮೇಲೆ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡದ ಕಾರಣ ಮಳೆನೀರು ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಕಳಪೆ ಕಾಮಗಾರಿಯಿಂದ ಡಾಮರೀಕರಣವು ಎದ್ದುಹೋಗಲು ಪ್ರಾರಂಭಿಸಿದ್ದು, ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಸಾಬೀತಾಗಿದೆ. ಇದೆ ರೀತಿಯಲ್ಲಿ ಮಳೆನೀರು ರಸ್ತೆಯಲ್ಲಿ ಹರಿದು ಹೋದರೆ ಕೋಟಿಗಟ್ಟಲೆ ರೂಪಾಯಿಯಲ್ಲಿ ನಿರ್ಮಿಸಿದ ಈ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಡಬಹುದು. ಈ ರಸ್ತೆಯಲ್ಲಿ ನಿತ್ಯ ಸುಮಾರು 40ಕ್ಕೂ ಅಧಿಕ ಬಸ್ಸುಗಳು ನೂರಾರು ಬಾರಿ ಸಂಚರಿಸುತ್ತಿವೆ. ಅದೇ ರೀತಿ ಸಾವಿರಾರು ಖಾಸಗಿ ಹಾಗೂ ಇತರ ವಾಹನಗಳು ಸಂಚರಿಸುತ್ತಿವೆ.

ಅಧಿಕಾರಿಗಳ ಬೇಜವಾಬ್ದಾರಿ

18.5 ಕೋಟಿ ಮೊತ್ತದ ಕಾಮಗಾರಿ ಸರಿಯಾಗಿ ನಡೆಸುವಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯು ಎದ್ದು ಕಾಣುತ್ತಿದೆ. ಈ ರಸ್ತೆ ಕಾಮಗಾರಿ ನಡೆಯುವಾಗ ಅಧಿಕಾರಿಗಳು ಮುತುವರ್ಜಿವಹಿಸಿಲ್ಲ. ಅಧಿಕತರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಿಕ್ಷಣೆ ಮಾಡದ ಕಾರಣ ಈ ರೀತಿ ಆಗಿದೆ. ಗುತ್ತಿಗೆದಾರ ಈ ರಸ್ತೆಯ ಕಾಮಗಾರಿ ಆರಂಭಿಸಬೇಕಾದರೆ ಎರಡು ರಸ್ತೆಯಲ್ಲಿ ಸಂಚಾರ ಬಂದ್ ಮಾಡಿ ಹರತಾಳ ನಡೆಸಿದ್ದಾರೆ.

ಬದಿಯಡ್ಕ ಸಮೀಪದ ಪೆರಡಾಲ ಸೇತುವೆ ಪಕ್ಕದಲ್ಲಿ ಡಾಮರು ಸಂಪೂರ್ಣ ಎದ್ದುಹೋಗಿ ಹೊಂಡನಿರ್ಮಾಣವಾಗಿದೆ. ಮುಖ್ಯವಾಗಿ ಗೋಳಿಯಡ್ಕ ಕಾನತ್ತಿಲ, ಕನ್ಯಪ್ಪಾಡಿ ಮುಂತಾದ ಪ್ರದೇಶಗಳಲ್ಲಿ ಕಾಮಗಾರಿ ಕಳಪೆಯಾಗಿದೆ. ರಸ್ತೆಯಲ್ಲಿಯೇ ಮಳೆನೀರುಕೂಡ ಹರಿಯುತ್ತಿದೆ.

ಈ ಬಗ್ಗೆ ಕಂಟ್ರಾಕ್ಟುದಾರರನ್ನು ಕೇಳಿದರೆ, ಮಳೆಗಾಲ ಕಡಿಮೆಯಾದ ಕೂಡಲೇ ಮೆಕ್ಕಡಾಂ ಡಾಮರೀಕರಣ ಅರಂಭಿಸುವುದಾಗಿ ತಿಳಿಸುತ್ತಾರೆ. ಆದರೆ ಕಾಮಗಾರಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದಾಗಿ ಕಾದು ನೋಡಬೇಕಾಗಿದೆ. ರಸ್ತೆಯ ಮೇಲೆ ಮಳೆನೀರು ಹರಿಯುತ್ತಿದೆ ಇದನ್ನು ಪರಿಹರಿಸಲು ಲೋಕೋಪಯೋಗಿ ಇಲಾಖೆ ಕೂಡಲೇ ಕ್ರಮತೆಗೆದುಕೊಳ್ಳಲು ಮುಂದಾಗಬೇಕು. ಇಲ್ಲದಿದ್ದರೆ ಕೋಟ್ಯಂತರ ರೂಪಾಯಿ ನೀರಿನಲ್ಲಿ ಕೊಚ್ಚಿಹೋಗಬಹುದು.

* ಕಳೆದ 2 ವರ್ಷದಿಂದ ಸಂಪೂರ್ಣ ಕೆಟ್ಟುಹೋಗಿದ್ದ ಈ ರಸ್ತೆ ಇತ್ತೀಚೆಗೆ ಡಾಮರೀಕರಣಗೊಂಡು ಎಲ್ಲರಿಗೂ ಖುಷಿ ಕೊಟ್ಟಿತು. ಆದರೆ ಮತ್ತೆ ತಿಂಗಳು ಕಳೆಯುವಷ್ಟರಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಬಿದ್ದು ಶೋಚನೀಯ ಸ್ಥಿತಿ ತಲುಪಿದೆ. ಚರಂಡಿ ಇಲ್ಲದ ಕಾರಣ ನೀರು ರಸ್ತೆಯಲ್ಲೇ ಹೋಗುತ್ತಿದೆ. ಇನ್ನಾದರೂ ಅಧಿಕಾರಿಗಳು ಗಮನಹರಿಸದಿದ್ದಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಈ ರಸ್ತೆ ಮಳೆ ನೀರಿಗೆ ಮತ್ತಷ್ಟು ಹದಗೆಡಬಹುದು. - ಶ್ಯಾಮ್ ಪ್ರಸಾದ್ ಸರಳಿ, ನಿತ್ಯ ಪ್ರಯಾಣಿಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ