Please enable javascript.ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ ವಿಮುಖ: ಕಾಂಗ್ರೆಸ್‌ - congress vote - Vijay Karnataka

ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ ವಿಮುಖ: ಕಾಂಗ್ರೆಸ್‌

ವಿಕ ಸುದ್ದಿಲೋಕ 4 Jun 2016, 2:35 pm
Subscribe

ವಿಕ ಸುದ್ದಿಲೋಕ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಂ ಲೀಗ್‌ ಅಲ್ಲದ ಮುಸ್ಲಿಂ ಮತಗಳು ಅನ್ಯ ಪಕ್ಷಗಳತ್ತ ವಿಮುಖಗೊಂಡಿರುವುದಾಗಿ ಕಾಂಗ್ರೆಸ್‌ ...

congress vote
ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತ ವಿಮುಖ: ಕಾಂಗ್ರೆಸ್‌

ಕಾಸರಗೋಡು: ಜಿಲ್ಲೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಂ ಲೀಗ್‌ ಅಲ್ಲದ ಮುಸ್ಲಿಂ ಮತಗಳು ಅನ್ಯ ಪಕ್ಷಗಳತ್ತ ವಿಮುಖಗೊಂಡಿರುವುದಾಗಿ ಕಾಂಗ್ರೆಸ್‌ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ.

ಇದು ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ನಿರ್ಣಾಯಕವಾಗಿತ್ತು. ಮುಸ್ಲಿಮರಲ್ಲಿನ ಎ.ಪಿ. ವಿಭಾಗಗಳ ಮತಗಳು ನಷ್ಟವಾಗಿರುವುದು, ಮತ ಅಲ್ಪಸಂಖ್ಯಾತರಲ್ಲಿ ಒಂದು ಭಾಗದ ಮತಗಳು ಎಡಪಕ್ಷ ದತ್ತ ಚಾಚಿರುವುದಾಗಿ ಕಾಂಗ್ರೆಸ್‌ ನೇತೃತ್ವದ ಸಭೆ ಮೌಲ್ಯಮಾಪನ ನಡೆಸಿದೆ.

ವಿಧಾನಸಭೆ ಚುನಾವಣೆ ಬಳಿಕ ಅವಲೋಕನ ನಡೆಸುವುದಕ್ಕಾಗಿ ಡಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಧಾನಸಭೆ ಕ್ಷೇತ್ರಗಳ ಪ್ರತಿನಿಧಿಗಳು ಮೌಲ್ಯಮಾಪನ ನಡೆಸಿದರು. ಜಿಲ್ಲೆಯ ಮತ ಅಲ್ಪಸಂಖ್ಯಾತ ವಲಯದಲ್ಲಿ ಎ.ಪಿ. ವಿಭಾಗದ ಮತಗಳು ಎಡರಂಗದತ್ತ ತಿರುಗಿದ್ದು, ಯುಡಿಎಫ್‌ ವಿರುದ್ಧ ಯೋಜಿತ ನಿಲುವು ತಾಳಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಈ ಮತಗಳನ್ನು ಯುಡಿಎಫ್‌ ಕಳೆದುಕೊಂಡಿದೆ.

ಮತ ಅಲ್ಪಸಂಖ್ಯಾತರ ರಕ್ಷ ಣೆ ತಮ್ಮಿಂದ ಮಾತ್ರ ಸಾಧ್ಯ ಎಂಬುದಾಗಿ ಎಡರಂಗ ನಡೆಸಿದ ವ್ಯಾಪಕ ಪ್ರಚಾರದಿಂದಾಗಿ ಆ ವರ್ಗದಲ್ಲಿ ಗೊಂದಲ ಉಂಟಾಗಿತ್ತು. ಮಂಜೇಶ್ವರದಲ್ಲಿ ಎ.ಪಿ. ವಿಭಾಗದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಮತಗಳು ಎಡರಂಗಕ್ಕೆ ಲಭಿಸಿರುವುದಾಗಿ ಮಂಜೇಶ್ವರ ವಿಧಾನಸಭೆ ಕ್ಷೇತ್ರ ಪ್ರತಿನಿಧಿಗಳು ವರದಿ ನೀಡಿದರು. ಯುಡಿಎಫ್‌ ಅಭ್ಯರ್ಥಿಯ ಸಹೋದರ ಎದುರು ಭಾಗದಲ್ಲಿ ಕಾಣಿಸಿಕೊಂಡಿರುವುದು ಯುಡಿಎಫ್‌ನ ದುರ್ಬಲತೆಗೆ ಕಾರಣವಾಗಿದೆ. ಸಿಪಿಎಂ, ಕಾಂಗ್ರೆಸ್‌ಗಳಲ್ಲಿನ ಹಿಂದೂ ವಿಭಾಗದ ಭಾರಿ ಮತಗಳು ಬಿಜೆಪಿ ಪಾಲಾಗಿದೆ.

ಕಾಸರಗೋಡು ಕ್ಷೇತ್ರದಲ್ಲಿ ಬಿಜೆಪಿಯು ರವೀಶ ತಂತ್ರಿ ಅವರನ್ನು ಕಣಕ್ಕಿಳಿಸುವ ಮೂಲಕ ಕೋಮು ಭಾವನೆಯ ಆಧಾರದಲ್ಲಿ ಮತ ಗಳಿಸುವ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಗೆಲುವು ತಮ್ಮದೇ ಎಂಬ ನಂಬಿಕೆ ಬಿಜೆಪಿಗಿದ್ದ ಕೊನೆಯ ಹಂತದ ತನಕ ಸ್ಪಷ್ಟಗೊಂಡಿತ್ತು. ಆದರೆ ಬಹುತದಲ್ಲಿ ಕಡಿಮೆಯಾಗಿರುವುದು ಯುಡಿಎಫ್‌ಗೆ ತಿರುಗೇಟು ಆಗಿದೆ. ಇಲ್ಲಿಯು ಎ.ಪಿ. ವಿಭಾಗದ ಮತಗಳು ಎಡರಂಗಕ್ಕೆ ಬಿದ್ದಿದೆ. ಆದರೂ ಕಾಸರಗೋಡಿನ ಗೆಲುವು ಅಭಿಮಾನ ತಂದಿದೆ.

ಉದುಮ ಕ್ಷೇತ್ರದಲ್ಲಿ ವ್ಯಾಪಕ ಭಾಷಾ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ನಷ್ಟವಾಗಿದೆ. ಬಿಜೆಪಿಯ ಮತಗಳು ಎಡರಂಗಕ್ಕೆ ಬಿದ್ದಿವೆ. ಆದರೂ ಎಡರಂಗದ ಬಹುಮತ ಕಡಿಮೆಯಾಗಿರುವುದು ಕಾಂಗ್ರೆಸ್‌ನ ಸಾಧನೆಯಾಗಿದೆ. ಕಾಞಂಗಾಡು ಅಭ್ಯರ್ಥಿ ಘೋಷಣೆ ವಿಳಂಬವೇ ಕಾಂಗ್ರೆಸ್‌ಗೆ ತಿರುಗೇಟು ಆಗಿದೆ. ಮತಗಳ ಗಳಿಕೆಯಲ್ಲಿ ಕಡಿಮೆಯಾಗಿರುವುದು ಗೌರವದಿಂದ ಕಾಣುವಂತಹ ವಿಷಯ ಎಂಬುದಾಗಿ ಚರ್ಚಿಸಲಾಯಿತು. ತೃಕ್ಕರೀಪುರ ಕ್ಷೇತ್ರದಲ್ಲೂ ಎ.ಪಿ. ವಿಭಾಗದ ಮತಗಳ ಸ್ವಾಧೀನ ಎದ್ದು ಕಂಡಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿಪಿಎಂ ನಡೆಸುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತೀಕ್ಷ್ಣವಾಗಿ ಖಂಡಿಸಲಾಯಿತು. ಅಕ್ರಮಗಳನ್ನು ತಡೆಯಲು ಸಿಪಿಎಂ ಕಾರ್ಯಕರ್ತರಿಗೆ ನಿರ್ದೇಶ ನೀಡಬೇಕು. ಪೊಲೀಸರಿಂದ ಕಾಂಗ್ರೆಸ್‌ ಕಾರ್ಯಕರ್ತರಿಗೆ ನ್ಯಾಯ ದೊರಕುವುದಿಲ್ಲ ಎಂದು ಸಭೆ ಆರೋಪಿಸಿತು.

ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಕುಟುಂಬ ಬಜೆಟ್‌ನ್ನು ಬುಡಮೇಲುಗೊಳಿಸಿದೆ. ಇದರ ವಿರುದ್ಧ ಬೇಕಾದ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ. ಡಿಸಿಸಿ ಅಧ್ಯಕ್ಷ ಸಿ.ಕೆ. ಶ್ರೀಧರನ್‌ ಅಧ್ಯಕ್ಷ ತೆ ವಹಿಸಿದ್ದರು. ಕಾಂಗ್ರೆಸ್‌ ವಿಧಾನಸಭೆ ಅಭ್ಯರ್ಥಿಗಳಾದ ಕೆ. ಸುಧಾಕರನ್‌, ಧನ್ಯ ಸುರೇಶ್‌, ಕೆ.ಪಿ. ಕುಂಞಿಕಣ್ಣನ್‌, ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್‌, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ಗಂಗಾಧರನ್‌ ನಾಯರ್‌, ಪಿ.ಎ. ಅಶ್ರಫಾಲಿ, ಕೆ. ವೆಳ್ತಂಬು, ಎಂ.ಸಿ. ಜೋಸ್‌, ಶಾಂತಮ್ಮ ಫಿಲಿಪ್‌, ಡಿಸಿಸಿ ಪದಾಧಿಕಾರಿಗಳು, ವಿವಿಧ ವಿಧಾನಸಭೆ ಕ್ಷೇತ್ರಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ