Please enable javascript.ವಿಷು ವಿಶೇಷ ಸ್ಪರ್ಧೆಗೆ ಆಹ್ವಾನ - vishu compiteetion - Vijay Karnataka

ವಿಷು ವಿಶೇಷ ಸ್ಪರ್ಧೆಗೆ ಆಹ್ವಾನ

ವಿಕ ಸುದ್ದಿಲೋಕ 2 Mar 2017, 3:03 pm
Subscribe

'ಹವ್ಯಕ'ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ ಹವ್ಯಕರ ಆಡು ಭಾಷೆ 'ಹವ್ಯಕ ಭಾಷೆ', ಅಥವಾ ಹವಿಗನ್ನಡ...

vishu compiteetion
ವಿಷು ವಿಶೇಷ ಸ್ಪರ್ಧೆಗೆ ಆಹ್ವಾನ

ಕುಂಬಳೆ: 'ಹವ್ಯಕ'ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ.

ಹವ್ಯಕರ ಆಡು ಭಾಷೆ 'ಹವ್ಯಕ ಭಾಷೆ', ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.

ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ *kಣಣಠಿ://sಠಿಠಿಚಿಟಿಟಿಚಿ.ಛಿsp/* ಎಂಬ ಹವ್ಯಕ ವೆಬ್‌ಸೈಟ್‌ ಕಳೆದ ಒಂಬತ್ತು ವರ್ಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಔಠಿಠಿಚಿಟಿಟಿಚಿ.ಛಿsp *kಣಣಠಿ://sಠಿಠಿಚಿಟಿಟಿಚಿ.ಛಿsp/* ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಎಂಬ ಹೆಸರಿನಲ್ಲಿ ನೋಂದಾವಣೆಗೊಂಡು ಮಾನ್ಯತೆ ಪಡೆದ ಸಂಸ್ಥೆಯಾಗಿದೆ.

ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ಕಡೆಗಿನ ಕೊಡುಗೆ ಮತ್ತು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳ ಮೂಲಕ ಪ್ರತಿಷ್ಠಾನ ಸಮಾಜಮುಖಿಯಾಗಿ ಕಾರ‍್ಯ ನಿರ್ವಹಿಸುತ್ತಿದೆ.

ಕಳೆದ ಐದು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವಿ ಗನ್ನಡದಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ.

ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವ ಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ 'ವಿಷು ವಿಶೇಷ ಸ್ಪರ್ಧೆ-2017' ಆಯೋಜಿಸಿದೆ.

ವಿಷು ವಿಶೇಷ ಸ್ಪರ್ಧೆ-2017 ವಿವರ:

ಪ್ರಬಂಧ: ವಿಷಯ-'ಪ್ರಸ್ತುತ ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ಹಿರಿತನದ ನಿರ್ವಹಣೆ'. 750 ಶಬ್ದಗಳಿಗೆ ಸೀಮಿತ.

ಕಥೆ: ವ್ಯಾಪ್ತಿ-ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ). 1000 ಶಬ್ದಗಳಿಗೆ ಸೀಮಿತ.

ಕವಿತೆ: ವಿಷಯ-ಗೋವು ಮತ್ತು ನಾವು. 30 ಸಾಲುಗಳಿಗೆ ಮಿತಿ.

ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.

ನಗೆಬರಹ: ಸದಭಿರುಚಿಯ ಲಘು ಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ) 500 ಶಬ್ದಗಳಿಗೆ ಮಿತಿ.

ನಿಯಮಗಳು: ಎಲ್ಲ್ಲ ಬರಹಗಳೂ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಯಲ್ಲಿರಬೇಕು. ಹವ್ಯಕ ಪರಂಪರೆ, ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ. ಸ್ಪರ್ಧೆಗೆ ಬರುವ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು. ಸ್ಪರ್ಧೆಗೆ ಬಂದ ಎಲ್ಲ ಬರಹಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ್ದೇ ಆಗಿರುತ್ತದೆ.

ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.

ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳಿರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.

ವಿಷು ವಿಶೇಷ ಸ್ಪರ್ಧೆ-2016ರಲ್ಲಿ ಭಾಗವಹಿಸಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದವರು ಈ ಬಾರಿ ಸ್ಪರ್ಧೆಯ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ.

ಬಹುಮಾನ ವಿಜೇತರ ವಿವರಗಳನ್ನು ವಿಷುವಿನಂದು ಏ. 14ರಂದು *kಣಣಠಿ://sಠಿಠಿಚಿಟಿಟಿಚಿ.ಛಿsp/* ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ ಎ4 ಹಾಳೆಯಲ್ಲಿಯೇ ಬರೆದಿರಬೇಕು. ಭಾಗವಹಿಸಲು ಕೊನೆಯ ದಿನಾಂಕ ಮಾ. 15.

ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರೆದು ಬರಹದ ಜತೆಗೆ ಕಳುಹಿಸಿಕೊಡಬೇಕು.

ಅಂಚೆ ವಿಳಾಸ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ,

ಅ/ಔ ಶ್ರೀಕರ ಅಸೋಸಿಯೇಟ್ಸ್‌

ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ

ಗಾಂಧಿ ನಗರ, ಸುಳ್ಯ-574239

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ