Please enable javascript.ಬಸ್‌ ನಿಲ್ದಾಣBus Stand,ಬಸ್‌ ನಿಲ್ದಾಣಕ್ಕೆ ತೆರಳಲು ಆದೇಶಿಸಿ - order to go to bus stand - Vijay Karnataka

ಬಸ್‌ ನಿಲ್ದಾಣಕ್ಕೆ ತೆರಳಲು ಆದೇಶಿಸಿ

Vijaya Karnataka 26 Jun 2019, 5:00 am
Subscribe

ಜಿಲ್ಲಾಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ನೂತನ ಬಸ್‌ ನಿಲ್ದಾಣಕ್ಕೆ ಎಲ್ಲ ಖಾಸಗಿ ಬಸ್‌ಗಳು ತೆರಳುವಂತೆ ಆದೇಶ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಆಗ್ರಹಿಸಿದ್ದಾರೆ.

order to go to bus stand
ಬಸ್‌ ನಿಲ್ದಾಣಕ್ಕೆ ತೆರಳಲು ಆದೇಶಿಸಿ
ಮಡಿಕೇರಿ

ಜಿಲ್ಲಾಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ನೂತನ ಬಸ್‌ ನಿಲ್ದಾಣಕ್ಕೆ ಎಲ್ಲ ಖಾಸಗಿ ಬಸ್‌ಗಳು ತೆರಳುವಂತೆ ಆದೇಶ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಆಗ್ರಹಿಸಿದ್ದಾರೆ.

ವಿಕದಲ್ಲಿ ಮಂಗಳವಾರ ಪ್ರಕಟಗೊಂಡ ಇನ್ನೂ ಬಳಕೆಗೆ ಬಾರದ ಖಾಸಗಿ ಬಸ್‌ ನಿಲ್ದಾಣ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, ''ನೂತನ ಬಸ್‌ ನಿಲ್ದಾಣ ತಲೆ ಎತ್ತಿರುವ ಸ್ಥಳ ಕೃಷಿ ವಿಶ್ವವಿದ್ಯಾಲಯದಲ್ಲಿ ನಾನು ಕೃಷಿ ವಿವಿಯ ನಿರ್ದೇಶಕಿಯಾಗಿದ್ದ ಸಂದರ್ಭ ಮಂಜೂರು ಮಾಡಿಸಿದ ಜಾಗ. ಹಳೆ ಬಸ್‌ ನಿಲ್ದಾಣದ ತುಂಬಾ ಕಿಷ್ಕಿಂಧೆಯಿಂದ ಕೂಡಿತ್ತು. ಇದರಿಂದ ನಗರದಿಂದ ಕೊಂಚ ದೂರ ಇರುವ ಸ್ಥಳದಲ್ಲಿ ಬಸ್‌ ನಿಲ್ದಾಣ ಮಾಡುವ ಯೋಜನೆ ಮಾಡಲಾಗಿತ್ತು. ಆದರೆ, ಇದೀಗ ಉದ್ಘಾಟನೆಯಾಗಿ ವರ್ಷ ಕಳೆದರೂ ನೂತನ ಬಸ್‌ ನಿಲ್ದಾಣ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದಕ್ಕೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ,'' ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.

''ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಈ ಅಧಿಕಾರವನ್ನು ಬಳಸಿಕೊಂಡು ನೂತನ ಬಸ್‌ ನಿಲ್ದಾಣವನ್ನು ಸಾರ್ವಜನಿಕರಿಗೆ ಒದಗಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಮುಂದಾಗಬೇಕು. ಮಡಿಕೇರಿ ನಗರ ಬೆಳೆಯುತ್ತಿದೆ. ನೂತನ ಬಸ್‌ ನಿಲ್ದಾಣ ನೂತನ ಜಿಲ್ಲಾ ಪಂಚಾಯಿತಿ ಕಚೇರಿ, ಕೋರ್ಟ್‌ ಸಮೀಪವಿದೆ. ನಗರದಲ್ಲಿ ಈಗ ಸಂಚರಿಸುತ್ತಿರುವ ಖಾಸಗಿ ಬಸ್‌ಗಳಿಗೆ ನೂತನ ಬಸ್‌ ನಿಲ್ದಾಣಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಆದೇಶ ನೀಡಲಿ. ಯಾರೇ ಈ ಆದೇಶಕ್ಕೆ ವಿರೋಧ ಪಡಿಸಿದರೂ ಜಿಲ್ಲಾಧಿಕಾರಿ ಸೂಕ್ತ ಕ್ರಮ ವಹಿಸಬೇಕಿದೆ. ಇನ್ನು ಇದೇ ಸ್ಥಿತಿ ಮುಂದುವರಿದರೆ ಕಾಂಗ್ರೆಸ್‌ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಇದು ಕಾಂಗ್ರೆಸ್‌ ಕೊಡುಗೆ. ಕಾಂಗ್ರೆಸ್‌ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡುತ್ತದೆ. ಜಿಲ್ಲಾಧಿಕಾರಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಖಾಸಗಿ ಬಸ್‌ ನಿಲ್ದಾಣದ ವಿಚಾರವನ್ನು ಜಿಲ್ಲಾಧಿಕಾರಿ ಶೀಘ್ರವಾಗಿ ಬಗೆಹರಿಸಬೇಕು. ಖಾಸಗಿ ಬಸ್‌ಗಳು ನೂತನ ಬಸ್‌ ನಿಲ್ದಾಣಕ್ಕೆ ತೆರಳುವಂತೆ ಆದೇಶ ಮಾಡಬೇಕು,'' ಎಂದು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ