Please enable javascript.ದಾಸ ಸಾಹಿತ್ಯದ ಬಗ್ಗೆ ಅರಿವು ಅಗತ್ಯ: ವಿದ್ವಾನ್ ತಿರುಮಲೆ ಶ್ರೀನಿವಾಸ್ - dasa literature - Vijay Karnataka

ದಾಸ ಸಾಹಿತ್ಯದ ಬಗ್ಗೆ ಅರಿವು ಅಗತ್ಯ: ವಿದ್ವಾನ್ ತಿರುಮಲೆ ಶ್ರೀನಿವಾಸ್

ವಿಕ ಸುದ್ದಿಲೋಕ 9 Feb 2016, 3:38 pm
Subscribe

ಮುಳಬಾಗಲು: ಯುವಜನಾಂಗಕ್ಕೆ ದಾಸ ಸಾಹಿತ್ಯದ ಕುರಿತು ಅರಿವು ಮೂಡಿಸಬೇಕು. ಕನ್ನಡಿಗರಿಂದ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಂಡು ಪ್ರೋತ್ಸಾಹಿಸಬೇಕೆಂದು ಕರ್ನಾಟಕ ಕಲಾ ಶ್ರೀ ವಿದ್ವಾನ್ ತಿರುಮಲೆ ಶ್ರೀನಿವಾಸ್ ತಿಳಿಸಿದರು.

dasa literature
ದಾಸ ಸಾಹಿತ್ಯದ ಬಗ್ಗೆ ಅರಿವು ಅಗತ್ಯ: ವಿದ್ವಾನ್ ತಿರುಮಲೆ ಶ್ರೀನಿವಾಸ್
ಮುಳಬಾಗಲು: ಯುವಜನಾಂಗಕ್ಕೆ ದಾಸ ಸಾಹಿತ್ಯದ ಕುರಿತು ಅರಿವು ಮೂಡಿಸಬೇಕು. ಕನ್ನಡಿಗರಿಂದ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಂಡು ಪ್ರೋತ್ಸಾಹಿಸಬೇಕೆಂದು ಕರ್ನಾಟಕ ಕಲಾ ಶ್ರೀ ವಿದ್ವಾನ್ ತಿರುಮಲೆ ಶ್ರೀನಿವಾಸ್ ತಿಳಿಸಿದರು.

ನಗರದ ಹರಿದಾಸ ಪೀಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 43ನೇ ಪುರಂದರ ದಾಸರ ಆರಾಧನೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಗೋಷ್ಠಿಗಾಯನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಯುವ ಜನಾಂಗಕ್ಕೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯ ಮೌಲ್ಯಗಳು ಮತ್ತು ಧರ್ಮದ ಸಾರವನ್ನು ತಿಳಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಲು ಸಜ್ಜುಗೊಳಿಸಬೇಕು ಎಂದರು.

ವಿದ್ವಾನ್ ಅನೂರು ದತ್ತಾತ್ರೇಯ ಮಾತನಾಡಿ, ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ ಶ್ರೀಪಾದರಾಜರು ಹುಟ್ಟಿದ ಸ್ಥಳದಲ್ಲಿ ಪುರಂದರದಾಸರ ಆರಾ ಧನೆ ರಾಜ್ಯ ಮಟ್ಟದಲ್ಲಿ ಅದ್ಧೂರಿಯಿಂದ ಆಚರಿಸುತ್ತಿರುವ ಬಗ್ಗೆ ಶ್ಲಾಸಿದರು. ರಾಜ್ಯದ ನಾನಾ ಕಡೆಗಳಿಂದ ಹಿರಿಯ ಮತ್ತು ಕಿರಿಯ ಕಲಾವಿದರು ಒಂದೆಡೆ ಸೇರಿ ಸಂಗೀತ ಕಾರ್ಯಕ್ರಮ ನಡೆಸಿ, ಕನ್ನಡ ಬಾಷೆ ಪರಿಮಳ ಪಸರಿಸುವಂತೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ವಿದ್ವಾನ್ ಎಂ.ವಾಸುದೇವರಾವ್ ಮಾತನಾಡಿದರು. ಡಾ.ದೊಡ್ಡಭದ್ರೇ ಗೌಡ ಅಧ್ಯಕ್ಷತೆ ವಹಿಸಿದ್ದರು.

ಹರಿದಾಸ ಪೀಠದ ಪ್ರಧಾನ ಕಾರ್ಯದರ್ಶಿ ಎನ್.ರಾಜರಾವ್ ಮಾತನಾಡಿ, 43 ವರ್ಷಗಳಿಂದ ಪುರಂದರದಾಸ ಆರಾಧನೆಯನ್ನು ಎಲ್ಲಾ ವರ್ಗಗಳ ಜನರ ಸಹಕಾರ ದಿಂದ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ ಯುವ ಕಲಾವಿದರಿಗೆ ಈ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.

ರಾಜ್ಯ ನಾನಾ ಭಾಗಗಳಿಂದ ಬಂದಿದ್ದ ಮಹಿಳೆಯರು ಶ್ರೀಪುರಂದರದಾಸರ ನವರತ್ನ ಮಾಲಿಕೆ - ಗೋಷ್ಠಿಗಾಯನ ನಡೆಸಿಕೊಟ್ಟರು. ಆರಾಧನಾ ಸಮಿತಿ ಅಧ್ಯಕ್ಷ ಸರ್ವೋತ್ತಮ ದಾಸರು, ಪ್ರಧಾನ ಕಾರ್ಯದರ್ಶಿ ಎನ್.ರಾಜಾರಾವ್, ಜಯರಾಮರಾವ್, ಡಾ.ಬಿ.ಕೆ.ಚಂದ್ರಮೌಳಿ ಇದ್ದರು.

ಬೆಂಗಳೂರಿನ ಸಿರಿಸಿಂಚನ ತಂಡದಿಂದ ಪ್ರಕೃತಿ ಆಧಾರಿತ ಹರಿದಾಸ ಕೃತಿಗಳು, ಯುವ ಕಲಾವಿದೆ ಶ್ರೀಲಕ್ಷ್ಮೀ ಅವರಿಂದ ನೃತ್ಯ, ಬೆಂಗಳೂರು ಸಮ ನ್ವಯ ಕಲಾ ತಂಡದಿಂದ ದಾಸಾಂಜಲಿ, ತಾಳವಾದ್ಯ ಗುರುಕೃಪ ಸಂಗೀತಕುಟೀರ ತಂಡದಿಂದ ಕಥಾ ಕೀರ್ತನೆ ಕಾರ್ಯಕ್ರಮಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ