ಆ್ಯಪ್ನಗರ

'ಸಮುದಾಯ, ಶಾಲೆ ಮಧ್ಯೆ ಸೌಹಾರ್ದ ಬೆಳೆಸಲು ಜಾಗೃತಿ'

ಸಮುದಾಯ ಮತ್ತು ಶಾಲೆಗಳ ನಡುವೆ ಸೌಹಾರ್ದ ಬೆಳೆಸಲು ತಾಲೂಕಾದ್ಯಂತ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅಕ್ಷ ರ ಫೌಂಡೇಶನ್‌ನ ಜಿಲ್ಲಾ ಸಂಚಾಲಕಿ ಎಂಜಲಿನಾ ಗ್ರೆಗರಿ ಹೇಳಿದರು.

ವಿಕ ಸುದ್ದಿಲೋಕ 24 Jun 2016, 9:00 am

ಕುಷ್ಟಗಿ; ಸಮುದಾಯ ಮತ್ತು ಶಾಲೆಗಳ ನಡುವೆ ಸೌಹಾರ್ದ ಬೆಳೆಸಲು ತಾಲೂಕಾದ್ಯಂತ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅಕ್ಷ ರ ಫೌಂಡೇಶನ್‌ನ ಜಿಲ್ಲಾ ಸಂಚಾಲಕಿ ಎಂಜಲಿನಾ ಗ್ರೆಗರಿ ಹೇಳಿದರು.

ಇಲ್ಲಿನ ಅಕ್ಷ ರ ಫೌಂಡೇಶನ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬುಧವಾರ ಮಾತನಾಡಿದರು. ಅಕ್ಷ ರ ಫೌಂಡೇಶನ್‌ ಕಳೆದ 3ವರ್ಷಗಳಿಂದ ತಾಲೂಕಿನಲ್ಲಿ ಶಿಕ್ಷ ಣದ ಪ್ರಗತಿಗಾಗಿ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸ್ಥಳೀಯ ಶಾಲೆಗಳು ಸಮುದಾಯದ ಒಂದು ಭಾಗವೇ ಆಗಿರುವುದರಿಂದ ಶಾಲೆ ಮತ್ತು ಸಮುದಾಯದ ನಡುವೆ ಉತ್ತಮ ಬಾಂಧವ್ಯ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲೂ 1-3-6-9 ಸಂಕೇತ ಒಳಗೊಂಡ ಗೋಡೆಬರಹ ಬರೆಯಿಸಲಾಗಿದೆ. ಸಂಕೇತ 1 ಇದು ಪ್ರತಿ ತಿಂಗಳೂ ಶಾಲೆಯ ಎಸ್ಡಿಎಂಸಿ ಸಭೆ ನಡೆಯಬೇಕು ಎನ್ನುವುದನ್ನು ಸೂಚಿಸುತ್ತದೆ. ಎಸ್ಡಿಎಂಸಿ ಸಭೆಯಲ್ಲಿ ಶಾಲೆಯ ಕಟ್ಟಡ, ಪೀಠೋಪಕರಣ ಮತ್ತು ಇತರೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದಿರುವುದು ಸರ್ವೆ ಮೂಲಕ ತಿಳಿದಿದೆ. ಇದಕ್ಕೆ ಬದಲಾಗಿ ಮಕ್ಕಳ ಶಿಕ್ಷ ಣದ ಬಗ್ಗೆ ಚರ್ಚೆ ನಡೆಯಬೇಕಿರುವ ಅಗತ್ಯ ಇದೆ. ಸಂಕೇತ 3 ಇದು, ಪ್ರತಿ 3ತಿಂಗಳಿಗೊಮ್ಮೆ ಶಾಲೆಗಳಲ್ಲಿ ಪಾಲಕರ ಸಭೆ ನಡೆಯಬೇಕು. ಪಾಲಕರು ಮಕ್ಕಳ ಶಿಕ್ಷ ಣದ ಪ್ರಗತಿಯ ಬಗ್ಗೆ ಶಿಕ್ಷ ಕರೊಂದಿಗೆ ಸಂವಾದ ನಡೆಸಬೇಕು ಎಂದು ಹೇಳುತ್ತದೆ. ಸಂಕೇತ 6 ಇದು ಪ್ರತಿ ಆರು ತಿಂಗಳಿಗೊಮ್ಮೆ ಸಮುದಾಯದತ್ತ ಶಾಲೆ ಕಾರ್ಯಕ್ರಮ ನಡೆಯಬೇಕು. ಕಾರ್ಯಕ್ರಮ ವೇಳೆ ಮಕ್ಕಳ ವೈಯಕ್ತಿಕ ಪ್ರಗತಿ ಬಗ್ಗೆ ಚರ್ಚೆಯಾಗಬೇಕು. ಸಂಕೇತ 9 ಇದು ಪ್ರತಿ ಮಗು ವರ್ಷದಲ್ಲಿ ಕನಿಷ್ಠ 9 ತಿಂಗಳು ಅಥವಾ 220 ದಿನ ಶಾಲೆಯಲ್ಲಿ ಇರುವಂತೆ ಪಾಲಕರು ಎಚ್ಚರವಹಿಸಬೇಕು ಎನ್ನುವುದನ್ನು ತಿಳಿಸುತ್ತದೆ.

ಈಗಾಗಲೇ ತಾಲೂಕಿನ 170 ಗ್ರಾಮಗಳಲ್ಲಿ ಗೋಡೆಬರಹ ಕಾರ್ಯಕ್ರಮ ಮುಗಿದಿದೆ. ಸಮುದಾಯದ ಸಹಭಾಗಿತ್ವದೊಂದಿಗೇ ಶಾಲೆಗಳು ನಡೆಯಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಉಮೇಶ ಮೇಳಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ