Please enable javascript.ಕುಡಿವ ನೀರಿನ ಅಭಾವ: ಕ್ರಮಕ್ಕೆ ಆಗ್ರಹ - ಕುಡಿವ ನೀರಿನ ಅಭಾವ: ಕ್ರಮಕ್ಕೆ ಆಗ್ರಹ - Vijay Karnataka

ಕುಡಿವ ನೀರಿನ ಅಭಾವ: ಕ್ರಮಕ್ಕೆ ಆಗ್ರಹ

ವಿಕ ಸುದ್ದಿಲೋಕ 14 Nov 2016, 9:00 am
Subscribe

ತಾಲೂಕಿನ ಮೆಣಸಗೇರಾ ಗ್ರಾಮ ಮತ್ತು ಮೆಣಸಗೇರಾ ತಾಂಡಾಗಳಲ್ಲಿ ಕುಡಿವ ನೀರಿನ ಅಭಾವ ತಲೆದೋರಿದ್ದು ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕುಡಿವ ನೀರಿನ ಅಭಾವ: ಕ್ರಮಕ್ಕೆ ಆಗ್ರಹ

ಕುಷ್ಟಗಿ: ತಾಲೂಕಿನ ಮೆಣಸಗೇರಾ ಗ್ರಾಮ ಮತ್ತು ಮೆಣಸಗೇರಾ ತಾಂಡಾಗಳಲ್ಲಿ ಕುಡಿವ ನೀರಿನ ಅಭಾವ ತಲೆದೋರಿದ್ದು ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಕಳೆದ 4-5 ವರ್ಷಗಳಿಂದಲೂ ಕುಡಿವ ನೀರಿನ ಸಮಸ್ಯೆ ಮುಂದುವರಿದಿದೆ. ಗ್ರಾಮಕ್ಕೆ ಹೊಂದಿಕೊಂಡು ಇರುವ ಕೆರೆಗೆ ನೀರು ಬಾರದಿರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ತಾಂಡಾ ಮತ್ತು ಗ್ರಾಮ ವ್ಯಾಪ್ತಿಯಲ್ಲಿ 8-10 ಕೊಳವೆಬಾವಿಗಳನ್ನು ಕೊರೆಸಿದರೂ ಸೆಲೆ ದೊರೆತಿಲ್ಲ. ಕ್ಯಾದಿಗುಪ್ಪಾ ರಸ್ತೆ ಬದಿಯ ಕೊಳವೆಬಾವಿಯಲ್ಲಿ ಸ್ವಲ್ಪ ಸೆಲೆ ಇದ್ದು ಎರಡೂ ಕಡೆ ಇಲ್ಲಿಂದಲೇ ಕುಡಿವ ನೀರು ಸರಬರಾಜಾಗುತ್ತದೆ. ನೀರನ್ನು ಮೇಲ್ತೊಟ್ಟಿಗೆ ಏರಿಸದೇ ಕರೆಂಟ್‌ ಇದ್ದಾಗ ನೇರವಾಗಿ ನಲ್ಲಿಗಳಿಗೆ ಬಿಡಲಾಗುತ್ತಿದೆ. ಕರೆಂಟ್‌ ಕೈಕೊಟ್ಟರೆ ನೀರಿನ ತೀವ್ರ ಸಮಸ್ಯೆ ಎದುರಾಗುತ್ತದೆ. ಸಮರ್ಪಕ ನೀರು ಬಾರದ್ದಕ್ಕೆ ಸ್ಥಳೀಯರು ಸಮೀಪದ ತೋಟಗಳಿಂದ ನೀರು ತರುವುದು ಸಾಮಾನ್ಯವಾಗಿದೆ. ಗ್ರಾಮ ಮತ್ತು ತಾಂಡಾಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ 4 ವರ್ಷಗಳ ಹಿಂದೆ ಎನ್‌ಆರ್‌ಡಬ್ಲ್ಯುಪಿ ಯೋಜನೆಯಡಿ ಅಂದಾಜು 10ಲಕ್ಷ ರೂ.ಗಳಲ್ಲಿ ಮೇಲ್ತೊಟ್ಟಿ ನಿರ್ಮಿಸಲಾಗಿದೆ. ತೊಟ್ಟಿ ನಿರ್ಮಾಣ ನಂತರ ಒಂದು ಸಲವೂ ನೀರು ಏರಿಸದ್ದಕ್ಕೆ ನಿರುಪಯುಕ್ತವಾಗಿದೆ. ಗ್ರಾಮದಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ತಾಲೂಕು ಆಡಳಿತ ಒದಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

...........

ಪ್ರತಿ ವರ್ಷ ಬೇಸಿಗೆ ಬಂದರೆ ಕುಡಿವ ನೀರಿನ ಸಮಸ್ಯೆ ತೀವ್ರವಾಗುತ್ತದೆ. ಸಮಸ್ಯೆ ನಿರಂತರವಾಗಿದ್ದು ಪರಿಹಾರ ದೊರೆಯುತ್ತಿಲ್ಲ. ಚುನಾವಣೆ ಬಂದಾಗೊಮ್ಮೆ ಜನಪ್ರತಿನಿಧಿಗಳು ಇತ್ತ ಸುಳಿಯುತ್ತಾರೆ. ಉಳಿದ ದಿನಗಳಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಯಾರೂ ಗಮನಹರಿಸುವುದಿಲ್ಲ.

-ಪರಶುರಾಮ ತಳವಾರ, ಹೊಳಿಯಪ್ಪ ಇಂಗಳಗಿ ಮೆಣಸಗೇರಾ ನಿವಾಸಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ