Please enable javascript.ಸಿಇಟಿ, ನೀಟ್‌ ಪರೀಕ್ಷೆ ತರಬೇತಿ - ಸಿಇಟಿ, ನೀಟ್‌ ಪರೀಕ್ಷೆ ತರಬೇತಿ - Vijay Karnataka

ಸಿಇಟಿ, ನೀಟ್‌ ಪರೀಕ್ಷೆ ತರಬೇತಿ

ವಿಕ ಸುದ್ದಿಲೋಕ 19 Apr 2017, 9:00 am
Subscribe

ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆ ಪೂರೈಸಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷ ಣ ಪ್ರವೇಶಕ್ಕಾಗಿ ಬರೆಯಬೇಕಿರುವ ಸಿಇಟಿ ಮತ್ತು ನೀಟ್‌ ಪರೀಕ್ಷೆಯ ತರಬೇತಿಯನ್ನು ಹೈ.ಕ.ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಇಲ್ಲಿನ ಜೂನಿಯರ್‌ ಕಾಲೇಜಿನಲ್ಲಿ ಸೋಮವಾರ ಆರಂಭಿಸಲಾಯಿತು.

ಸಿಇಟಿ, ನೀಟ್‌ ಪರೀಕ್ಷೆ ತರಬೇತಿ

ಕುಷ್ಟಗಿ: ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆ ಪೂರೈಸಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷ ಣ ಪ್ರವೇಶಕ್ಕಾಗಿ ಬರೆಯಬೇಕಿರುವ ಸಿಇಟಿ ಮತ್ತು ನೀಟ್‌ ಪರೀಕ್ಷೆಯ ತರಬೇತಿಯನ್ನು ಹೈ.ಕ.ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ಇಲ್ಲಿನ ಜೂನಿಯರ್‌ ಕಾಲೇಜಿನಲ್ಲಿ ಸೋಮವಾರ ಆರಂಭಿಸಲಾಯಿತು.

371ಜೆ ಕಾಯಿದೆಗೆ ಒಳಪಡುವ ಹೈ.ಕ.ಪ್ರದೇಶದ ಸರಕಾರಿ ಕಾಲೇಜುಗಳಲ್ಲಿ ಪಿಯುಸಿ ಓದಿರುವ ವಿದ್ಯಾರ್ಥಿಗಳಿಗಾಗಿ ಸಿಇಟಿ ತರಬೇತಿ ಸೌಕರ್ಯ ನೀಡಲಾಗಿದೆ. ಉಪಗ್ರಹ ಆಧರಿತ ತರಬೇತಿ ಏ.17ರಿಂದ ಮೇ 5ವರೆಗೆ ನಡೆಯಲಿದೆ. ಬೆಳಗ್ಗೆ 10ರಿಂದ 11.30ವರೆಗೆ ಜೀವಶಾಸ್ತ್ರ, 11ರಿಂದ 1ವರೆಗೆ ಭೌತಶಾಸ್ತ್ರ, 1.30ರಿಂದ 3ವರೆಗೆ ರಸಾಯನಶಾಸ್ತ್ರ, 3ರಿಂದ 4.30ವರೆಗೆ ಗಣಿತ ವಿಷಯಗಳ ಮೇಲೆ ಉಪಗ್ರಹ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. ಪ್ರತಿ ವಿಷಯದ ತರಬೇತಿ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಸಮಸ್ಯೆಗಳಿಗೆ ಪರಿಹಾರ ನೀಡಲು ಸ್ಥಳೀಯವಾಗಿ ಪ್ರಭು ಡಾಣಿ, ಉದಯ, ಜಗದೀಶ ಮತ್ತು ಏಜಾಜ್‌ಬಾಬಾ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಜಿ.ನೀರಗೇರಿ, ಪಿಯುಸಿ ಪರೀಕ್ಷೆಗೆ ಮೊದಲೇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಸಿಇಟಿ ಪರೀಕ್ಷೆಗೆ ದಾಖಲಾಗಿರುವ ವಿದ್ಯಾರ್ಥಿಗಳು ತರಬೇತಿಗೆ ಬರುತ್ತಾರೆ. ತರಬೇತಿ ನಂತರ ಸ್ಟಡಿ ಮೆಟಿರಿಯಲ್‌ ನೀಡಲಾಗುತ್ತಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ