Please enable javascript.ಕಂದಾಯ ಇಲಾಖೆ 5 ಅಧಿಕಾರಿಗಳ ವಿಚಾರಣೆ - ಕಂದಾಯ ಇಲಾಖೆ 5 ಅಧಿಕಾರಿಗಳ ವಿಚಾರಣೆ - Vijay Karnataka

ಕಂದಾಯ ಇಲಾಖೆ 5 ಅಧಿಕಾರಿಗಳ ವಿಚಾರಣೆ

ವಿಕ ಸುದ್ದಿಲೋಕ 4 Feb 2016, 8:14 am
Subscribe

ತಾಲೂಕಿನ ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ರೈಲು ಹಳಿ ನಿರ್ಮಾಣ ಕಾಮಗಾರಿಗೆ ಭೂ ಸ್ವಾಧಿನ ಪ್ರಕ್ರಿಯೆ ವೇಳೆ ಕಾನೂನುಬಾಹಿರವಾಗಿ ಕೆಲ ಭೂ ದಾಖಲೆಗಳನ್ನು ತಿದ್ದುಪಡಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಐವರು ಅಧಿಕಾರಿಗಳನ್ನು ನಗರ ಠಾಣೆ ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.

 5
ಕಂದಾಯ ಇಲಾಖೆ 5 ಅಧಿಕಾರಿಗಳ ವಿಚಾರಣೆ
ಗಂಗಾವತಿ; ತಾಲೂಕಿನ ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ರೈಲು ಹಳಿ ನಿರ್ಮಾಣ ಕಾಮಗಾರಿಗೆ ಭೂ ಸ್ವಾಧಿನ ಪ್ರಕ್ರಿಯೆ ವೇಳೆ ಕಾನೂನುಬಾಹಿರವಾಗಿ ಕೆಲ ಭೂ ದಾಖಲೆಗಳನ್ನು ತಿದ್ದುಪಡಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಐವರು ಅಧಿಕಾರಿಗಳನ್ನು ನಗರ ಠಾಣೆ ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.

ಮೂಲ ದಾಖಲೆಗಳಿಲ್ಲದೆ ಪೋಡಿ, ನಕ್ಷೆ ತಯಾರಿ ಸೇರಿ ಇತರ ಅಕ್ರಮ ಎಸಗಿರುವ ಕುರಿತು ಭೂಮಾಪನ ಇಲಾಖೆ ಅಧಿಕಾರಿ ಎಂ.ರವಿಕುಮಾರ್ ಅವರು, 2014,ಡಿಸೆಂಬರ್ 7ರಂದು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಠಾಣೆ ಪಿಐ ಈ.ಕಾಳಿಕೃಷ್ಣ ಅವರು, ಆರೋಪಿತರಾದ ಗಂಗಾವತಿ ತಹಸಿಲ್ ಕಚೇರಿ ಸಿಬ್ಬಂದಿ ಬಸವರಾಜ ಬಡಿಗೇರ್, ಕೆ.ಎಚ್.ರಮೇಶ, ಪ್ರವೀಣಕುಮಾರ, ಮಂಜುನಾಥ ವೈ.ಹಾಗೂ ಸಂತೋಷಕುಮಾರ ಅವರ ವಿಚಾರಣೆ ನಡೆಸಿದರು. ಗಿಣಿಗೇರಾ-ಮಹೆಬೂಬ್‌ನಗರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಭೂಸ್ವಾಧೀನ ನಡೆದಿದೆ.

ಪ್ರಕರಣದ ಹಿನ್ನೆಲೆ:

ಹೋಬಳಿಯ ಸರ್ವೆ ನಂ. 80 (19 ಎಕರೆ .29 ಗುಂಟೆ)ಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಆಧರಿಸಿ, ಕೊಪ್ಪಳ ಉಪ ವಿಭಾಗಾಧಿಕಾರಿಯಾಗಿದ್ದ ಪಿ.ಎಸ್.ಮಂಜುನಾಥ, ಗಂಗಾವತಿ ತಹಸೀಲ್ದಾರ್ ಎಂ.ಗಂಗಪ್ಪ, ಲಿಂಗಸುಗೂರಿನ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಯಲಬುರ್ಗಾ ತಾಲೂಕಿನ ಭೂ ಮಾಪನಾಧಿಕಾರಿ ಬಸವರಾಜ, ಗಂಗಾವತಿ ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಕಾರಟಗಿ ಗ್ರಾಮ ಲೆಕ್ಕಾಧಿಕಾರಿ ಗುರುರಾಜ, ಸರ್ವೇಯರ್ ಸೋಮಶೇಖರ್, ನಾಗರಾಜ, ಶಿವಮೊಗ್ಗ ಜಿಲ್ಲೆ ಗುಬ್ಬಿ ತಾಲೂಕಿನ ಸರ್ವೇಯರ್ ರಮೇಶ ಅವರ ವಿರುದ್ಧ 2014, ನವೆಂಬರ್ 25ರಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

8 ಮಂದಿಗೆ ಜಾಮೀನು: ಭೂ ದಾಖಲೆಗಳನ್ನು ಕಾನೂನುಬಾಹಿರವಾಗಿ ತಿದ್ದುಪಡಿ ಮಾಡಿದ ಪ್ರಕರಣಕ್ಕೆ ಸಂಬಧಿಸಿದಂತೆ ಎಸಿ ಪಿ.ಎಸ್.ಮಂಜುನಾಥ, ರಮೇಶ, ನಾಗರಾಜ, ಗುರುರಾಜ, ಸೋಮಶೇಖರ್, ಪ್ರಕಾಶ ನಾಯಕ, ಬಸವರಾಜ, ಶ್ರೀನಿವಾಸ ಮೂರ್ತಿ ಅವರಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ, 2015 ಡಿಸೆಂಬರ್ 10 ರಂದು ಜಾಮೀನು ನೀಡಿದೆ. ಜಾಮೀನು ಪ್ರತಿಯಲ್ಲಿ ಮತ್ತೊಬ್ಬ ಆರೋಪಿತ ತಹಸೀಲ್ದಾರ್ ಎಂ.ಗಂಗಪ್ಪ ಅವರ ಹೆಸರಿಲ್ಲ.

ರೈಲು ಹಳಿ ನಿರ್ಮಾಣ ಯೋಜನೆ ಕಾಮಗಾರಿಗೆ ಭೂ ಸ್ವಾಧಿನ ವೇಳೆ ಕಾರಟಗಿ ಸರ್ವೆ ನಂ.319, ಬೇವಿನಾಳ ಸ.ನಂ 47/1, 201, ಮೈಲಾಪುರ ಸ.ನಂ. 19/2, 19, ಹುಳ್ಕಿಹಾಳ ಸ.ನಂ.87/4, ನವಲಿ ಸ.ನಂ. 22/4 ಅಕ್ರಮ ಎಸಗಿರುವ ಕುರಿತು ಕಾರಟಗಿ ಪಟ್ಟಣದ ಗವಿಸಿದ್ದಪ್ಪ ಸಾಲೋಣಿ ಅವರು ಗಂಗಾವತಿಯ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಒಂಬತ್ತು ಅಧಿಕಾರಿಗಳು ಸೇರಿ 11 ಮಂದಿ ವಿರುದ್ಧ ದಾಖಲಾದ ದೂರಿನ ವಿಚಾರಣೆ ಚುರುಕುಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ