ಆ್ಯಪ್ನಗರ

ಚಟುವಟಿಕೆ ಆಧಾರಿತ ವಿಜ್ಞಾನ ಕಲಿಕಾ ಕಾರ್ಯಾಗಾರ-ಓಕೆ

ತಾಲೂಕಿನ ಚಳಗೇರಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಶಾಲೆಯ ವಿಜ್ಞಾನ ಸಂಘದಿಂದ ಚಟುವಟಿಕೆ ಆಧರಿತ ವಿಜ್ಞಾನ ಕಲಿಕಾ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ವಿಕ ಸುದ್ದಿಲೋಕ 22 Jun 2016, 9:00 am

ಕುಷ್ಟಗಿ; ತಾಲೂಕಿನ ಚಳಗೇರಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಶಾಲೆಯ ವಿಜ್ಞಾನ ಸಂಘದಿಂದ ಚಟುವಟಿಕೆ ಆಧರಿತ ವಿಜ್ಞಾನ ಕಲಿಕಾ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ 5ರಿಂದ 7ನೇ ತರಗತಿ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಮಿಶ್ರಣದಲ್ಲಿ ಬೇರ್ಪಡಿಸುವಿಕೆ ವಿಧಾನಗಳು, ಸೂಕ್ಷ ್ಮದರ್ಶಕ ಯಂತ್ರದ ಸಹಾಯದಿಂದ ಪ್ರಾಣಿ ಜೀವಕೋಶ ಮತ್ತು ಸಸ್ಯ ಜೀವಕೋಶದ ರಚನೆಯ ವಿನ್ಯಾಸಗಳ ವೀಕ್ಷ ಣೆ ನಡೆಯಿತು. ಆಮ್ಲಗಳು, ಪ್ರತ್ಯಾಮ್ಲಗಳು ಹಾಗೂ ಲವಣಗಳ ಕುರಿತು ಮೂಲವಸ್ತು ಸಂಯುಕ್ತ ವಸ್ತು ಮತ್ತು ಮಿಶ್ರಣಗಳ ಬಗ್ಗೆ ಮಕ್ಕಳಿಂದ ಚಟುವಟಿಕೆ ನಡೆಸಲಾಯಿತು.

ಶಾಲೆಯ ವಿಜ್ಞಾನ ಶಿಕ್ಷ ಕ ಮಲ್ಲಪ್ಪ ಕುದರಿ ಮಾತನಾಡಿ, ವಿಜ್ಞಾನ ವಿಷಯವನ್ನು ಬಾಯಿಮಾತಿನಲ್ಲೇ ಬೋಧಿಸಿದರೆ ಪರಿಣಾಮಕಾರಿಯಾಗಲಾರದು. ಚಟುವಟಿಕೆ ಆಧರಿತ ಕಲಿಕಾ ವಿಧಾನದಿಂದ ಮಕ್ಕಳು ಅತಿ ಸುಲಭವಾಗ ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಎಂದರು.

ಮಕ್ಕಳೊಂದಿಗೆ ಶಿಕ್ಷ ಕರಾದ ಉಮಾದೇವಿ ಕೋಟಿ, ಈಶಪ್ಪ ಕಂದಕೂರು, ವೆಂಕಟೇಶ ಭಾಗ್ಯದ ಇತರರು ಪ್ರಯೋಗಗಳನ್ನು ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ