ಸಿಟಿ ರವಿ ಇನ್ನೂ ಬಚ್ಚಾ ಇದ್ದಾನೆ, ರಾಷ್ಟ್ರಮಟ್ಟದ ನಾಯಕ ಅಗುವ ಭ್ರಮೆಯಲ್ಲಿದ್ದಾರೆ: ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ್‌

ಕೊಪ್ಪಳ: ಸಿ ಟಿ ರವಿ ಇನ್ನೂ ಬಚ್ಚಾ ಇದ್ದಾನೆ. ರಾಷ್ಟ್ರ ಮಟ್ಟದ ನಾಯಕರ ವಿರುದ್ದ ಮಾತನಾಡಿ ರಾಷ್ಟ್ರ ನಾಯಕನಾಗಲು ಹೊರಟಿದ್ದಾನೆ ಎಂದು ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.

ಅವರು ಕೊಪ್ಪಳದಲ್ಲಿ ಮಾತನಾಡಿ ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ ಹಿನ್ನಲೆಯಲ್ಲಿ ಶಾಸಕ ಹಿಟ್ನಾಳ್ ಸಿ ಟಿ ರವಿ ಗೆ ಕೌಂಟರ್ ಹೇಳಿಕೆ ನೀಡಿದರು.

ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ರಾಷ್ಟ್ರ ಮಟ್ಟದ ನಾಯಕನಾಗುತ್ತೇನೆಂಬ ಭಮ್ರೆಯಲ್ಲಿದ್ದಾರೆ. ಸಿದ್ದರಾಮೋತ್ಸವದಲ್ಲಿ ಲಕ್ಷ ಲಕ್ಷ ಜನ ಸೇರಿದ್ದರು. ಸಿ ಟಿ ರವಿಗೆ ಅನುಭವದ ಕೊರತೆ ಇದೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸದನದಲ್ಲಿ ಸಿದ್ದರಾಮಯ್ಯ ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ .‌ಸರಕಾರದ ಲೋಪದೋಷಗಳನ್ನು ಎತ್ತಿಹಿಡಿಯವ ಕೆಲಸ ಮಾಡುತ್ತಿದ್ದಾರೆ .‌ದೇಶದಲ್ಲಿಯೇ ಅತ್ಯುತ್ತಮ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಬೈದರೆ ರಾಷ್ಟ್ರ ಮಟ್ಟದಲ್ಲಿ ಬೆಳೆಯುತ್ತೇನೆ ಎನ್ನುವ ಭಮ್ರೆ ಇದೆ.‌ ಇದರಿಂದ ಅವರ ಕೀಳುಮಟ್ಟ ತೋರಿಸುತ್ತದೆ. ಅಭಿವೃದ್ಧಿ ಮಾಡುವ ಮೂಲಕ ನಾಯಕರ,ಜನರ ಮನಸ್ಸನ್ನು ಗೆಲ್ಲಬೇಕು. ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಹಿಟ್ನಾಳ್ ಹೇಳಿದರು.

Vijaya Karnataka Web 17 Sep 2022, 1:41 pm
Loading ...
ಮುಂದಿನ ವಿಡಿಯೋ