ಈಶ್ವರಪ್ಪ ಸಹಜವಾಗಿ ಅಡಿದ ಮಾತಿನ ಬಗ್ಗೆ ಇಷ್ಟೇಕೆ ಚರ್ಚೆ?: ಆಚಾರ್ ಪ್ರಶ್ನೆ!

ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಈಶ್ವರಪ್ಪ ಹೇಳಿಲ್ಲ. ಬಾಗಲಕೋಟೆಗೆ ಹೋದಾಗ ಸಹಜವಾಗಿ ಮುರುಗೇಶ್ ನಿರಾಣಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದಾರಷ್ಟೇ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.ಕೊಪ್ಪಳದಲ್ಲಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಿ ಮಾತನಾಡಿದ ಆಚಾರ್, ರಾಜ್ಯದಲ್ಲಿ ನಾಯಕತ್ವ ಬದಳಾವಣೆ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಇನ್ನು ಸಿದ್ದರಾಮಯ್ಯ ಅವರನ್ನು ಕುಡುಕ ಎಂದ ಈಶ್ವರಪ್ಪ ಹಾಗೂ ಈಶ್ವರಪ್ಪ ಅವರೇ ಕುಡುಕ ಎಂದ ಶಿವರಾಜ್ ತಂಗಡಗಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಆಚಾರ್, ಯಾರೇ ಆಗಲಿ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎಂದು ಅಭಿಪ್ರಾಯಪಟ್ಟರು.

ನೀವ್ಯಾಕೆ ಸಿಎಂ ಆಗಬಾರದು ಎಂಬ ಪ್ರಶ್ನೆಗೆ ಗೊಳ್ಳೆಂದು ನಕ್ಕು, ಹಣೆ ತೋರಿಸಿದ ಆರ್‌ ಅಶೋಕ್‌..!
ಒಮಿಕ್ರಾನ್ ಕೊರೊನಾ ರೂಪಾಂತರಿಯ ಸೋಂಕು ಪ್ರಕರಣ ರಾಜ್ಯದಲ್ಲಿ ಇನ್ನೂ ಪತ್ತೆಯಾಗಿಲ್ಲ. ಆದಾಗ್ಯೂ ಜಿಲ್ಲಾವಾರು ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಶೀಘ್ರದಲ್ಲೇ ಕೊಪ್ಪಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುವಂತೆ ತಾವು ಸೂಚಿಸಿರುವುದಾಗಿ ಆಚಾರ್ ಸ್ಪಷ್ಟಪಡಿಸಿದರು.

Vijaya Karnataka Web 1 Dec 2021, 4:17 pm
Loading ...