Please enable javascript.ಉತ್ಸಾಹ,‘ಪ್ರತಿಭಾ ಪುರಸ್ಕಾರದಿಂದ ಮಕ್ಕಳಲ್ಲಿ ಉತ್ಸಾಹ’ - 'pratibha puraskaram children envy' - Vijay Karnataka

‘ಪ್ರತಿಭಾ ಪುರಸ್ಕಾರದಿಂದ ಮಕ್ಕಳಲ್ಲಿ ಉತ್ಸಾಹ’

Vijaya Karnataka 10 Jul 2018, 5:00 am
Subscribe

ಆಯಾ ಸಮಾಜ, ಸಂಸ್ಥೆಗಳು ಹೆಚ್ಚು ಅಂಕ ಪಡೆದ ಮಕ್ಕಳಿಗೆ ನೀಡುವ ಪುರಸ್ಕಾರ, ಸನ್ಮಾನದಿಂದ ಅವರಲ್ಲಿ ಮತ್ತಷ್ಟು ಓದುವ ಆಸಕ್ತಿ ಹೆಚ್ಚಿಸುತ್ತದೆ ಎಂದು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡ ಹೇಳಿದರು.

KPL-KPL08KNK02
ಕನಕಗಿರಿ : ಆಯಾ ಸಮಾಜ, ಸಂಸ್ಥೆಗಳು ಹೆಚ್ಚು ಅಂಕ ಪಡೆದ ಮಕ್ಕಳಿಗೆ ನೀಡುವ ಪುರಸ್ಕಾರ, ಸನ್ಮಾನದಿಂದ ಅವರಲ್ಲಿ ಮತ್ತಷ್ಟು ಓದುವ ಆಸಕ್ತಿ ಹೆಚ್ಚಿಸುತ್ತದೆ ಎಂದು ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡ ಹೇಳಿದರು.

ಸಮೀಪದ ಮುಸಲಾಪುರ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಜೀವನ ನಡೆಸಬೇಕು. ಸಮಾಜದ ಏಳಿಗೆಗೆ ಎಲ್ಲರೂ ಒಗ್ಗೂಡಿ ದುಡಿಯಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಕೆಲಸವನ್ನು ಪಾಲಕರ ಮಾಡಬೇಕು ಎಂದರು.

ಶಾಸಕ ಬಸವರಾಜ ದಡೇಸುಗೂರು ಮಾತನಾಡಿ, ಸಮಾಜದ ಅಭಿವೃದ್ಧಿಗೆ ತಾವು ಸಿದ್ದರಿದ್ದು, ಸರಕಾರದಿಂದ ಸಿಗುವ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವುದಾಗಿ ಹೇಳಿದರು. ಸಂಸದ ಕರಡಿ ಸಂಗಣ್ಣ, ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ, ಶರಣಪ್ಪ ನಾಗೋಜಿ, ನಾಗರಾಜ ಬಿಲ್ಗಾರ್‌ ಮಾತನಾಡಿದರು. ಚಿತ್ರದುರ್ಗದ ಗಾಣಿಗ ಪೀಠದ ಜಯಬಸವ ಸ್ವಾಮೀಜಿ, ಕಟ್ಟಿಗೆಹಳ್ಳಿಯ ಸಿದ್ಧಾರೂಢ ಬಸವ ಆಶ್ರಮದ ಕೇಶವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಆರ್‌.ಜಿ.ಪಾಟೀಲ್‌, ತಾಲೂಕು ಘಟಕದ ಅಧ್ಯಕ್ಷ ಹಿರೇಬಸಪ್ಪ ಸಜ್ಜನ, ಗೌರವಾಧ್ಯಕ್ಷ ಯಮನೂರಪ್ಪ ಕೊಳಜಿ ಅಧ್ಯಕ್ಷ ತೆ ವಹಿಸಿದ್ದರು. ಜಿ.ಪಂ.ಉಪಾಧ್ಯಕ್ಷೆ ಲಕ್ಷ ್ಮಮ್ಮ ನೀರಲೂಟಿ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಗವಿಸಿದ್ದಪ್ಪ, ಗ್ರಾ.ಪಂ.ಅಧ್ಯಕ್ಷೆ ಹುಸೇನಮ್ಮ ಈಳಿಗೇರ, ಗ್ರಾ.ಪಂ.ಯಲಬುರ್ಗಿ ಸೋಮಪ್ಪ, ವೀರೇಶ ಬಲಕುಂದಿ, ಅರವಿಂದಗೌಡ, ಅಯ್ಯನಗೌಡ, ಟಿ.ವಿ.ಉಮೇಶ ಸಜ್ಜನ, ಮಹಾಂತೇಶ ಸಜ್ಜನ, ವಿರೂಪಾಕ್ಷ ಪ್ಪ ಬೊಮ್ಮನಾಳ, ಶಶಿಧರ ಕೊಳಜಿ, ವಿರೂಪಾಕ್ಷ ಪ್ಪ ಹೊರಪೇಟೆ, ಜಿ.ಕೊಟ್ರೇಶ, ಪ್ರಕಾಶ ಹಾದಿಮನಿ, ಶಿವರಾಜ ಪಾಟೀಲ್‌, ಉಮೇಶ ಮೆಣಸಿಗೇರಿ, ಪರಮೇಶಪ್ಪ ಸಜ್ಜನ ಇನ್ನಿತರರಿದ್ದರು. ತಾಲೂಕು ಗಾಣಿಗ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಮೃತೇಶ ಸಜ್ಜನ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಕುಂಭ, ಕಳಶದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ