Please enable javascript.ವರ್ಗಾವಣೆ ಪತ್ರ ನೀಡಲು ನಿರಾಕರಣೆ : ದೂರು - Refusal to transfer the deed: Complaint - Vijay Karnataka

ವರ್ಗಾವಣೆ ಪತ್ರ ನೀಡಲು ನಿರಾಕರಣೆ : ದೂರು

ವಿಕ ಸುದ್ದಿಲೋಕ 27 May 2016, 9:00 am
Subscribe

ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡಲು ನಿರಾಕರಿಸುತ್ತಿರುವುದನ್ನು ವಿರೋಧಿಸಿ, ಪಾಲಕರ ಹೋರಾಟ ಸಮಿತಿ ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಿಡಿಪಿಐ ಎ.ಶ್ಯಾಮಸುಂದರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

refusal to transfer the deed complaint
ವರ್ಗಾವಣೆ ಪತ್ರ ನೀಡಲು ನಿರಾಕರಣೆ : ದೂರು

ಕೊಪ್ಪಳ; ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡಲು ನಿರಾಕರಿಸುತ್ತಿರುವುದನ್ನು ವಿರೋಧಿಸಿ, ಪಾಲಕರ ಹೋರಾಟ ಸಮಿತಿ ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಿಡಿಪಿಐ ಎ.ಶ್ಯಾಮಸುಂದರ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

2013-14 ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ನಿಯಮ ಉಲ್ಲಂಘಿಸಿ, ಹೆಚ್ಚುವರಿ ಶುಲ್ಕ ಪಡೆದಿದ್ದು, ಇದರ ವಿರುದ್ಧ ಪಾಲಕರು ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ, ಶಾಲಾ ಆಡಳಿತ ಮಂಡಳಿ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು. ಈ ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷ ಣ ಇಲಾಖೆ ತನಿಖೆ ನಡೆಸಿತ್ತು. ತನಿಖೆಯಲ್ಲಿ ಹೆಚ್ಚುವರಿ ಶುಲ್ಕ ಪಡೆದಿರುವುದು ಸಾಬೀತಾಗಿದೆ. ಈ ಹಣ ಮರು ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಶಿಕ್ಷ ಣ ಇಲಾಖೆ ಹಲವು ಬಾರಿ ಶಾಲಾ ಆಡಳಿತ ಮಂಡಳಿಗೆ ಮರು ಪಾವತಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಕಳೆದ 2 ವರ್ಷಗಳಿಂದ ಪಾಲಕರಿಗೆ ಯಾವುದೇ ಹೆಚ್ಚುವರಿ ಶುಲ್ಕ ಮರು ಪಾವತಿ ಮಾಡಲು ಶಾಲಾ ಆಡಳಿತ ಮಂಡಳಿ ಮುಂದೆ ಬಂದಿಲ್ಲ. ಇನ್ನು ಜಿಲ್ಲಾ ಮಟ್ಟದ ಶಿಕ್ಷ ಣ ನಿಯಂತ್ರಣ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷ ರಾಗಿದ್ದು, ಪಾಲಕರು ಹೆಚ್ಚುವರಿ ಹಣ ಮರಳಿ ಕೊಡಿಸುವಂತೆ ಇಂದಿಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ನಿಗದಿಪಡಿಸಿದ ಸಭೆಗೆ ಆಡಳಿತ ಮಂಡಳಿ ಬಾರದ ಹಿನ್ನೆಲೆಯಲ್ಲಿ ಸಭೆ ಮುಂದೂಡುತ್ತ ಹೋಗುತ್ತಿದೆ. ಇನ್ನು ಶುಲ್ಕ ನೀಡಿ, ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿ ಎಂದು ಶಾಲೆಯ ಆಡಳಿತ ಮಂಡಳಿತ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹೇಳುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಪಾಲಕರು ಡಿಡಿಪಿಐಗೆ ದೂರು ಸಲ್ಲಿಸಿದ್ದಾರೆ. ಡಿಡಿಪಿಐ ಎ.ಶ್ಯಾಮಸುಂದರ್‌ ಶಾಲೆಯ ಮುಖ್ಯಗುರುಗಳಿಗೆ ಪತ್ರ ರವಾನಿಸಿದರೂ ಶಾಲಾ ಆಡಳಿತ ಮಂಡಳಿ ವರ್ಗಾವಣೆ ಪತ್ರ ನೀಡುತ್ತಿಲ್ಲ. ಇದರಿಂದ ಪಾಲಕರು ತೊಂದರೆ ಎದುರಿಸುವಂತಾಗಿದೆ. ಪಾಲಕರ ಹೋರಾಟ ಸಮಿತಿಯ ಬಸವರಾಜ ಶೀಲವಂತರ, ಪ್ರಕಾಶ ಕಂದಕೂರು, ಗಾಳೆಪ್ಪ ಮುಂಗೋಲಿ, ಗೋವಿಂದರಾವ್‌ ಪದಕಿ, ಶಶಿಕುಮಾರ ಪುರಂದರೆ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ