ಆ್ಯಪ್ನಗರ

ಸ್ವಮೂತ್ರ ಸೇವಿಸಿ, ರೋಗಮುಕ್ತರಾಗಿ: ಸುಲೋಚನಾ ಸಲಹೆ

ನಮ್ಮದೇ ಮೂತ್ರವನ್ನು ನಾವೇ ಕುಡಿಯೋದು ಎಂದರೆ ಒಮ್ಮಿಂದೊಮ್ಮೆಲೇ ವಾಕರಿಕೆ ಬಂದಂತಾಗುತ್ತದೆ ನಿಜ. ಆದರೆ ಸಾವಿರಾರು ವರ್ಷಗಳಿಂದಲೂ ಸ್ವಮೂತ್ರ ಸೇವನೆ ಎಂಬುದು ಆರೋಗ್ಯ ಪರಮಶ್ರೇಷ್ಠ ಸೂತ್ರವಾಗಿ ಗುಟ್ಟಾಗಿ ನಡೆದುಕೊಂಡೇ ಬಂದಿದೆ. ಸ್ವಮೂತ್ರ ಸೇವನೆಯಿಂದ ಇಪ್ಪತ್ತಕ್ಕಿಂತಲೂ ಹೆಚ್ಚಿನ ರೋಗಗಳಿಂದ ಮುಕ್ತ ರಾಗಬಹುದು ಎಂದು ಉಡುಪಿಯ ಸಂಶೋಧಕಿ, ಯೂರಿನ್ ಚಿಕಿತ್ಸೆಯ ತಜ್ಞೆ ಸುಲೋಚನಾ ಕೊಡವೂರ್ ಹೇಳಿದರು.

ವಿಕ ಸುದ್ದಿಲೋಕ 7 Apr 2016, 6:30 am
ಪುತ್ತೂರು: ನಮ್ಮದೇ ಮೂತ್ರವನ್ನು ನಾವೇ ಕುಡಿಯೋದು ಎಂದರೆ ಒಮ್ಮಿಂದೊಮ್ಮೆಲೇ ವಾಕರಿಕೆ ಬಂದಂತಾಗುತ್ತದೆ ನಿಜ. ಆದರೆ ಸಾವಿರಾರು ವರ್ಷಗಳಿಂದಲೂ ಸ್ವಮೂತ್ರ ಸೇವನೆ ಎಂಬುದು ಆರೋಗ್ಯ ಪರಮಶ್ರೇಷ್ಠ ಸೂತ್ರವಾಗಿ ಗುಟ್ಟಾಗಿ ನಡೆದುಕೊಂಡೇ ಬಂದಿದೆ. ಸ್ವಮೂತ್ರ ಸೇವನೆಯಿಂದ ಇಪ್ಪತ್ತಕ್ಕಿಂತಲೂ ಹೆಚ್ಚಿನ ರೋಗಗಳಿಂದ ಮುಕ್ತ ರಾಗಬಹುದು ಎಂದು ಉಡುಪಿಯ ಸಂಶೋಧಕಿ, ಯೂರಿನ್ ಚಿಕಿತ್ಸೆಯ ತಜ್ಞೆ ಸುಲೋಚನಾ ಕೊಡವೂರ್ ಹೇಳಿದರು.
Vijaya Karnataka Web
ಸ್ವಮೂತ್ರ ಸೇವಿಸಿ, ರೋಗಮುಕ್ತರಾಗಿ: ಸುಲೋಚನಾ ಸಲಹೆ


ಪುತ್ತೂರು ನಗರಸಭೆಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಪರಿಸರ ಸ್ವಚ್ಛತೆ ಹಾಗೂ ಆರೋಗ್ಯ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಹಲವು ದಶಕಗಳಿಂದ ಯೂರಿನ್ ಥೆರಪಿಯ ಬಳಕೆ, ಸಂಶೋಧನೆ, ಸಲಹೆ, ಮಾರ್ಗದರ್ಶನ ಮಾಡುತ್ತಾ ಬಂದಿರುವ ಸುಲೋಚನಾ ಅವರು, ಮಹಿಳೆ, ಪುರುಷ, ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರಿಗೂ ಸರ್ವರೋಗ ಪರಿಹಾರಕನಾಗಿ ಸ್ವಮೂತ್ರ ಪಾನ ಮಾಡಬಹುದು ಎಂದರು. ಆರೋಗ್ಯವಂತರು ಕೂಡ ಸ್ವಮೂತ್ರ ಸೇವನೆ ಮಾಡುವ ಮೂಲಕ ತಮ್ಮ ಚೆತನ್ಯ ವದ್ಧಿ ಮಾಡಿಕೊಳ್ಳಬಹುದು ಎಂದವರು ಸಲಹೆ ನೀಡಿದರು.

ಕ್ಯಾನ್ಸರ್, ಮೂತ್ರಸೋಂಕು, ಗರ್ಭಕೋಶದ ಸಮಸ್ಯೆ, ಅಂಡಾಣು/ ವೀರ್ಯಾಣು ಬಿಡುಗಡೆಯಾಗದೇ ಇರುವ ಸಮಸ್ಯೆ, ಮಹಿಳೆಯರಲ್ಲಿ ಋತುಚಕ್ರ ಸರಿಯಾಗಿ ಆಗದೇ ಇರುವುದು, ವಾತ ಸಂಬಂಧಿ ಸಮಸ್ಯೆಗಳು, ಕಿಡ್ನಿ ವೆಫಲ್ಯ, ಜಾಂಡೀಸ್ ರೋಗವೂ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ರೋಗಗಳಿಗೆ ಯೂರಿನ್ ಚಿಕಿತ್ಸೆ ರಾಮಬಾಣ ಎಂದು ಹೇಳಿದ ಅವರು, ಅಥರ್ವಣ ವೇದದಲ್ಲಿ ಇದರ ಉಲ್ಲೇಖವಿದೆ. ಬೆಬಲ್ ಹಳೆಯ ಸೂಕ್ತದಲ್ಲೂ ಇದರ ಮಾಹಿತಿ ಇದೆ. ಕುರಾನ್‌ನಲ್ಲಿ ಇದೆಯೇ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ ಎಂದವರು ಹೇಳಿದರು.

ನಿರಂತರ ಸ್ವಮೂತ್ರ ಸೇವನೆ ಮಾಡುವ ವ್ಯಕ್ತಿಗಳು ರೋಗ ಮುಕ್ತರಾಗುವುದು ಮಾತ್ರವಲ್ಲದೆ ಅವರ ಆತ್ಮ ಚೆತನ್ಯ ವದ್ಧಿಯಾಗಿ ಧನಾತ್ಮಕ ಶಕ್ತಿ ಸಂಚಯನವಾಗುತ್ತದೆ. ಗೋಮೂತ್ರ ಅತ್ಯಂತ ಪವಿತ್ರ ಎಂದೂ, ಔಷಧಿಕಾರಕ ಎಂದೂ ನಾವು ಈಗಲೂ ಹೇಳುತ್ತಾ ಬಂದಿದ್ದೇವೆ. ಆದರೆ ಗೋಮೂತ್ರವನ್ನು ಮಾನವ ಮೂತ್ರಕ್ಕೆ ಪರ್ಯಾಯವಾಗಿ ಬಳಸಲು ಆರಂಭಿಸಿದರು. ಮಾನವ ಮೂತ್ರ ಗೋಮೂತ್ರಕ್ಕಿಂತ ಹತ್ತು ಪಟ್ಟು ಶ್ರೇಷ್ಠ. ಬಳಕೆಯ ಬಗ್ಗೆ ಇರುವ ಹೇಸಿಗೆಯಿಂದಾಗಿ ಮಾತ್ರ ಈ ಚಿಕಿತ್ಸೆ ಜನಪ್ರಿಯಗೊಂಡಿಲ್ಲ. ಒಮ್ಮೆ ಮಾನಸಿಕ ಬ್ಲಾಕ್ ಪುಡಿ ಮಾಡಿ ಸ್ವಮೂತ್ರ ಸೇವನೆ ಮಾಡುವುದು ರೂಢಿ ಮಾಡಿಕೊಂಡರೆ ಸಕಲ ರೋಗಗಳಿಂದ ಮುಕ್ತ ಪಡೆಯಬಹುದು ಎಂದರು. ಸ್ವಮೂತ್ರ ಸೇವನೆಯ ಬಗ್ಗೆ ತಾನು ಅಧ್ಯಯನ ಮಾಡಿ ಬರೆದ ಪುಸ್ತಕದ ಬಗ್ಗೆ ಅವರು ಮಾಹಿತಿ ನೀಡಿದರು.

ಸಮುದಾಯ ಅಭಿವದ್ಧಿ ಸಂಘಟನೆಯ ಕಾರ್ಯಕರ್ತೆಯರು, ಸದಸ್ಯೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಾದದಲ್ಲಿ ಭಾಗವಹಿಸಿದರು. ಸಮು ದಾಯ ಅಭಿವದ್ದಿ ಸಂಘಟನೆ ಗುಂಪುಗಳ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು. ಸ್ವಚ್ಛತೆ ಬಗ್ಗೆ ವಿವೇಕಾನಂದ ಕಾಲೇಜಿನ ಉಪನ್ಯಾಸಕರಾದ ಶ್ರೀಶ ಕುಮಾರ್ ಮಾಹಿತಿ ನೀಡಿದರು. ಸಮುದಾಯ ಸಂಘಟಕ ಉಸ್ಮಾನ್ ಬೊಳುವಾರು ಕಾರ್ಯಕ್ರಮ ನಿರ್ವಹಿಸಿದರು. ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೆ ಸ್ವಾಗತಿಸಿದರು.

ಕ್ಯಾನ್ಸರ್ ಪೀಡಿತರು ಎಷ್ಟೋ ರೀತಿಯ ಔಷಧಗಳಿಂದ ಗುಣಮುಖರಾಗದೇ ಇದ್ದವರು ಕೂಡ ನನ್ನ ಸಲಹೆ ಪ್ರಕಾರ ಸ್ವಮೂತ್ರ ಸೇವನೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ., ಸ್ವಮೂತ್ರ ಚಿಕಿತ್ಸೆ ಮಾಡಿಕೊಳ್ಳುವವರು ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ನಿತ್ಯ ಸೇವಿಸಬೇಕು., ಇಮ್ಮಡಿ ಎತ್ತಿದ ಚಪ್ಪಲಿಯನ್ನು ಹೆಣ್ಣು ಮಕ್ಕಳು ನಿರಂತರ ಧರಿಸುವುದರಿಂದ ಗರ್ಭಕೋಶದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಈ ಚಿಕಿತ್ಸೆ ಮಾಡಿಕೊಳ್ಳುತ್ತಿರುವ ದೊಡ್ಡದೊಂದು ಗುಂಪಿನ ನೆಟ್‌ವರ್ಕ್ ನನ್ನ ಬಳಿ ಇದೆ. ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ