ಸುಳ್ಯ: ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು. ಈ ಬಾರಿ ಎಲ್ಲ ಬೂತ್ಗಳಲ್ಲಿಯೂ ದೊಡ್ಡ ಪ್ರಮಾಣದ ಸರತಿ ಇರಲಿಲ್ಲ. ಅತಿ ವೇಗದಲ್ಲಿ ಮತಗಟ್ಟೆ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ನಡೆಸಿಕೊಡುತ್ತಿದ್ದರು. ಸುಳ್ಯ ನಗರದ ನೆಹರು ಸ್ಮಾರಕ ಕಾಲೇಜು ಮತ್ತು ಸ್ನೇಹ ಶಾಲಾ ಬೂತ್ಗಳನ್ನು ಮಾದರಿ ಬೂತ್ ಆಗಿ ಮಾಡಲಾಗಿತ್ತು. ಇಲ್ಲಿ ಪ್ರವೇಶ ದ್ವಾರಗಳನ್ನು ತಳಿರು ತೋರಣ ಕಟ್ಟಿ ಅಲಂಕರಿಸಲಾಗಿತ್ತು. ಅಲ್ಲದೆ ಒಂದು ಕಡೆ ನವೀಲಿನ ರಂಗೋಲಿ ಬಿಡಿಸಲಾಗಿತ್ತು.
ಸುಳ್ಯದಲ್ಲಿ ಎರಡು ಮಾದರಿ ಬೂತ್
ವಿಕ ಸುದ್ದಿಲೋಕ 18 Apr 2014, 5:53 am
Subscribe