Please enable javascript.ಎಂಡೋ ಸಂತ್ರಸ್ತರ ಸೊಸೈಟಿ ರಚನೆಗೆ ತೀರ್ಮಾನ - ಎಂಡೋ ಸಂತ್ರಸ್ತರ ಸೊಸೈಟಿ ರಚನೆಗೆ ತೀರ್ಮಾನ - Vijay Karnataka

ಎಂಡೋ ಸಂತ್ರಸ್ತರ ಸೊಸೈಟಿ ರಚನೆಗೆ ತೀರ್ಮಾನ

ವಿಕ ಸುದ್ದಿಲೋಕ 8 Jan 2015, 5:57 am
Subscribe

ಎಂಡೋ ಸಂತ್ರಸ್ತರ ಸಹಕಾರ ಸಂಘ ರಚನೆಗೆ ಎಂಡೋ ಸಂತ್ರಸ್ತರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಂಡೋ ಸಂತ್ರಸ್ತರ ಸೊಸೈಟಿ ರಚನೆಗೆ ತೀರ್ಮಾನ
ಕಡಬ: ಎಂಡೋ ಸಂತ್ರಸ್ತರ ಸಹಕಾರ ಸಂಘ ರಚನೆಗೆ ಎಂಡೋ ಸಂತ್ರಸ್ತರ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಶ್ವತ ಪುನರ್ವಸತಿ ಹಾಗೂ ಪರಿಹಾರ ಯೋಜ ನೆಯು ಉತ್ತಮ ರೀತಿಯಲ್ಲಿ ವಿನಿಯೋಗವಾಗ ಬೇಕೆಂಬ ಹಿತದೃಷ್ಟಿಯಿಂದ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಸೋಮವಾರ ನಡೆದ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಸಂತ್ರಸ್ತರ ಸೊಸೈಟಿ ರಚಿಸುವುದಾಗಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋ ಗ್ಯಾಧಿಕಾರಿ ರಾಮಕೃಷ್ಣ ರಾವ್ ಮಾತನಾಡಿ, ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಸೇವೆಗಾಗಿ ಖಾಸಗಿ ಮೆಡಿಕಲ್ ಕಾಲೇಜುಗಳ ಜತೆ ಹೊಂದಾಣಿಕೆ ಮಾಡಿಕೊಂಡು ಪ್ರತೀ ತಿಂಗಳು ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ತಾಲೂಕು ಆರೋಗ್ಯಾಧಿಕಾರಿ, ನೋಡೆಲ್ ಅಧಿಕಾರಿ, ಆರೋಗ್ಯ ಸಹಾಯಕಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಂಡೋ ಸಂತ್ರಸ್ತರ ಮನೆಗೆ ತಿಂಗಳಿಗೆ ಒಂದು ಬಾರಿಯಾದರೂ ಭೇಟಿ ನೀಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಶೇ.25 ಮನೋವಿಕಲತೆಯಿರುವ ಎಂಡೋ ಸಂತ್ರಸ್ತರಿಗೆ ವಾರದ ಪ್ರತೀ ಮಂಗಳ ವಾರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಚಿಕಿ ತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ರಿಜಿಸ್ಟ್ರಾರ್ ಕಚೇರಿಯ ಅಧೀಕ್ಷಕ ನಾಗೇಂದ್ರರಾವ್ ಸೊಸೈಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ, ಆಲಂ ಕಾರನ್ನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲೆಗೊಂದು ಸಮಿತಿ ರಚನೆಯಾಗಬೇಕು. ಜಿಲ್ಲಾ ಮಟ್ಟದಲ್ಲಿ ರಚ ನೆಯಾಗುವುದರಿಂದ ನಾಲ್ಕು ತಾಲೂಕಿನ ಸಂತ್ರಸ್ತ ರನ್ನು ಹಾಗೂ ಅವರ ಪೋಷಕರನ್ನು ಒಂದುಗೂಡಿಸಿ 15 ಜನರ ಸಮಿತಿ ರಚಿಸಿ ನೋಂದಾವಣೆ ಮಾಡ ಬೇಕು. ಪಾಲು ಬಂಡವಾಳಕ್ಕಾಗಿ ಪರವಾನಗಿ ಪಡೆ ಯಬೇಕು. ಇದಕ್ಕೆ ಮೊದಲು ಒಬ್ಬ ಪ್ರವರ್ತಕರನ್ನು ಆಯ್ಕೆ ಮಾಡಿ ಆತನನ್ನೇ ಸೊಸೈಟಿಯ ಅಧ್ಯಕ್ಷ ನಾಗಬೇಕೆಂದು ಮಾಹಿತಿ ನೀಡಿದರು. ಕೋಚ ಕಟ್ಟೆ ಅಬ್ಬಾಸ್ ಅವರನ್ನು ಪ್ರವರ್ತಕರನ್ನಾಗಿ ನೇಮಿಸಲಾಯಿತು.

ಪುತ್ತೂರು ಬಳಕೆದಾರರ ವೇದಿಕೆ ಅಧ್ಯಕ್ಷ ಡಾ.ನಿತ್ಯಾನಂದ ಪೈ, ತಾಲೂಕು ಆರೋಗ್ಯಾಧಿಕಾರಿ ಬದ್ರುದ್ದೀನ್, ಸುರುಳಿ ರಾಮಮೊಹನ್ ರೈ, ಉಪಸ್ಥಿತರಿದ್ದರು. ಪೀರ್ ಮಹಮ್ಮದ್ ಸಾಹೇಬ್ ಸ್ವಾಗತಿಸಿದರು. ಅಬ್ಬಾಸ್ ವಂದಿಸಿದರು.

ಪ್ರತಿ ಆರೋಗ್ಯ ಕೇಂದ್ರದಲ್ಲಿ ಫಿಸಿಯೋಥೆರಪಿ ವ್ಯವಸ್ಥೆ : ಮುಂಬರುವ ದಿನಗಳಲ್ಲಿ ಎಂಡೋ ಪೀಡಿತ ಮಕ್ಕಳ ಆರೋಗ್ಯದ ಹಿತದೃಷ್ಟಿ ಯಿಂದ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಪಿಯ ವ್ಯವಸ್ಥೆ ಮಾಡಲಾಗುವುದು. ಸೊಸೈಟಿ ರಚನೆ ಹಾಗೂ ಚಿಕಿತ್ಸೆಯ ಅನುಕೂಲತೆಗಾಗಿ ಎಂಡೋ ಸಂತ್ರಸ್ತರ ಸರ್ವೆ ಮಾಡಲಾಗುವುದು. ಸಂತ್ರಸ್ತರ ಪಟ್ಟಿಯಿಂದ ಬಿಟ್ಟು ಹೋದ ಹೆಸರುಗಳ ಸೇರ್ಪಡೆಗೆ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸೊಸೈಟಿ ರಚನೆಯಾದ ಬಳಿಕ ಸಂತ್ರಸ್ತರಿಗೆ ಬರಬೇಕಾದ ಎಲ್ಲ ಸೌಲಭ್ಯಗಳನ್ನು ಸೊಸೈಟಿ ಮೂಲಕವೇ ವಿತರಿಸಲಾಗುವುದು. ಶೀಘ್ರವಾಗಿ ಮೊಬೈಲ್ ಮೆಡಿಕಲ್ ಯುನಿಟನ್ನು ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಂಡೋ ಸಂತ್ರಸ್ತರ ಹಾಗು ಕುಟುಂಬದ ಒಬ್ಬ ಸದಸ್ಯನಿಗೆ ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಬಸ್‌ಪಾಸ್ ವ್ಯವಸ್ಥೆಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಂಡೋಸಂತ್ರಸ್ತರ ನೋಡೆಲ್ ಅಧಿಕಾರಿ ಅರುಣ್ ಕುಮಾರ್ ಹೇಳಿದರು.

ಕಾರ್ಡ್ ಮಾಹಿತಿ: ಎಂಡೋ ಸಂತ್ರಸ್ತರಿಗೆ ಪ್ರತೀ ತಿಂಗಳು ನೀಡುವ ವೈದ್ಯಕೀಯ ಶಿಬಿರದಲ್ಲಿ ಔಷಧೀಯ ಕೊರತೆಯಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಚಂದ್ರಾವತಿ ವಿನಂತಿಸಿದರು. ಸ್ವಾಸ್ಥ್ಯ ಸ್ಪಂದನ ಕಾರ್ಡ್ ಮತ್ತು ರೆಫರಲ್ ಕಾರ್ಡ್ ಇದ್ದವರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆಯಿಲ್ಲ ಎಂದು ಕೆ.ಎನ್.ಜಯಲಕ್ಷ್ಮೀ ಹೇಳಿದರು. ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿಗಳು ಚಿಕಿತ್ಸೆಗೆ ತೆರಳುವ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಾರ್ಡ್ ಪಡೆದಿರಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಆಗದ ಕೇಸುಗಳನ್ನು ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತೇವೆ. ಇಂತಹ ಕೇಸುಗಳಿಗೆ ನಾವು ಪ್ರತ್ಯೇಕ ಕಾರ್ಡ್ ನೀಡಿ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿ ದ್ದೇವೆ. ಎಂದರು. ಮತ್ತು ಸ್ವಾಸ್ಥ್ಯ ಸ್ಪಂದನ ಕಾರ್ಡ್ ಮತ್ತು ರೆಫರಲ್ ಕಾರ್ಡ್ ಪಡೆದವರ ಮಾಹಿತಿಯನ್ನು ವಾರದೊಳಗೆ ನೀಡು ವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ