ಆ್ಯಪ್ನಗರ

ಪ್ರವೀಣ್‌ ನೆಟ್ಟಾರ್‌ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್‌ ಹಸ್ತಾಂತರಿಸಿದ ಸಿಎಂ ಬೊಮ್ಮಾಯಿ

ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರ್‌ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್‌ನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಹಸ್ತಾಂತರಿಸಲಾಯಿತು. ಮುಖ್ಯಂತ್ರಿಗಳು ಪ್ರವೀಣ್‌ ಮನೆಗೆ ಭೇಟಿ ನೀಡಿ, ಪತ್ನಿ ನೂತನಾ, ತಾಯಿ ರತ್ನಾವತಿ ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.

Vijaya Karnataka Web 28 Jul 2022, 11:23 pm
ಪುತ್ತೂರು : ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರ್‌ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್‌ನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಹಸ್ತಾಂತರಿಸಲಾಯಿತು.
Vijaya Karnataka Web Dakshina Kannada, July 27 (ANI): (File Photo) BJP Yuva Morcha worker Praveen Net...
Dakshina Kannada, July 27 (ANI): (File Photo) BJP Yuva Morcha worker Praveen Nettaru who was allegedly murdered on Tuesday evening, at Bellare in Dakshina Kannada district. (ANI Photo)


ಪ್ರವೀಣ್‌ ಮನೆಗೆ ಭೇಟಿ ನೀಡಿ, ಪತ್ನಿ ನೂತನಾ, ತಾಯಿ ರತ್ನಾವತಿ ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಚೆಕ್‌ ಹಸ್ತಾಂತರಿಸಿದರು. ಇದರಲ್ಲಿ 25 ಲಕ್ಷ ರೂಪಾಯಿಗಳನ್ನು ಬಿಜೆಪಿ ವತಿಯಿಂದ ನೀಡಲಾಗಿದ್ದರೆ, 25 ಲಕ್ಷವನ್ನು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗಿದೆ. ಪಕ್ಷದ ಚೆಕ್‌ನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಸ್ತಾಂತರಿಸಿದರು. ಸರಕಾರದ ನೆರವಿನ ಚೆಕ್‌ನ್ನು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದರೆ, ಸಚಿವರು, ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

1 ಕೋಟಿ ಸಂಗ್ರಹದ ಗುರಿ
ಸರಕಾರ 25 ಲಕ್ಷ ರೂಪಾಯಿ ನೀಡಿದ ಹೊರತಾಗಿಯೂ ಬಿಜೆಪಿ ಮತ್ತು ಪರಿವಾರ ಸಂಘಟನೆಗಳಿಂದಲೂ ಹಣ ಸಂಗ್ರಹಿಸಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಸುಳ್ಯ ಮಂಡಲ ಬಿಜೆಪಿಯು ಪಕ್ಷ ಮತ್ತು ಪರಿವಾರ ಸಂಘಟನೆಗಳ ಜಂಟಿ ಪ್ರಯತ್ನದ ಫಲವಾಗಿ 50 ಲಕ್ಷ ರೂ. ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ಒಟ್ಟಾರೆಯಾಗಿ ಪ್ರವೀಣ್‌ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮುಖಂಡರು ಮಾತುಕತೆ ನಡೆಸಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಎನ್‌ಐಎ, ಎಸ್‌ಐಟಿ ತನಿಖೆಗೆ ವಿಎಚ್‌ಪಿ ಆಗ್ರಹ..!

ಪತ್ನಿ, ತಾಯಿ ಜಂಟಿ ಖಾತೆ
ಕೊಲೆ ನಡೆದ 24 ಗಂಟೆಯಲ್ಲಿ ಪ್ರವೀಣ್‌ ಪತ್ನಿ ನೂತನಾ ಅವರ ಹೆಸರಿನ ಬ್ಯಾಂಕ್‌ ಖಾತೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಈಗಾಗಲೇ ಈ ಖಾತೆಗೆ ಒಂದಷ್ಟು ಹಣ ಜಮೆಯಾಗಿದೆ ಎಂದು ಗೊತ್ತಾಗಿದೆ. ಗುರುವಾರ ಮನೆಗೆ ಭೇಟಿ ನೀಡಿದ ಮುಖಂಡರು ಕೂಡ ಪರಿಹಾರ ಧನ ನೀಡಿದ್ದಾರೆ. ಈ ನಡುವೆ, ನೂತನಾ ಮತ್ತು ಅವರ ಅತ್ತೆ ರತ್ನಾವತಿ (ಪ್ರವೀಣ್‌ ತಾಯಿ) ಅವರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಸಿದ್ಧತೆ ಮಾಡಲಾಗಿದೆ. ಜಂಟಿ ಖಾತೆಗೆ ಹಣ ಸಂದಾಯವಾಗುವಂತೆ ಕ್ರಮ ವಹಿಸಲಾಗುತ್ತದೆ. ಸಾರ್ವಜನಿಕರಿಂದ ಬರುವ ನಿಧಿಗೆ ಪತ್ನಿ ಮತ್ತು ತಾಯಿ ಇಬ್ಬರೂ ಪಾಲುದಾರರಾಗುವುದು ಈ ಮೂಲಕ ಭವಿಷ್ಯದಲ್ಲಿಇಡೀ ಕುಟುಂಬಕ್ಕೆ ಆಧಾರವಾಗುವುದು ಇದರ ಉದ್ದೇಶ. ಪ್ರವೀಣ್‌ ತಾಯಿಗೂ ಆರೋಗ್ಯ ಸಮಸ್ಯೆ ಇದ್ದು, ತಂದೆ ಹೃದಯದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜತೆಗೆ ಕುಟುಂಬಕ್ಕೆ ನೂತನ ಮನೆ ನಿರ್ಮಿಸುವ ಪ್ರವೀಣ್‌ ಕನಸು ಕೂಡ ನನಸಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ