ಆ್ಯಪ್ನಗರ

ಕರಾವಳಿಯಲ್ಲಿ ನಾಳೆ‌ ಈದುಲ್ ಫಿತ್ರ್

ಕರಾವಳಿಯಲ್ಲಿ ಶವ್ವಾಲ್‌ ತಿಂಗಳ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಜೂ.4ರಂದು ರಮ್ಝಾನ್‌ 30ನೇ ಉಪವಾಸ ಆಚರಿಸಲು ಖಾಝಿ ತೀರ್ಮಾನಿಸಿದ್ದಾರೆ ಎಂದು ಝೀನತ್‌ ಬಕ್ಷ್‌ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಅವರ ಪ್ರಕಟಣೆ ತಿಳಿಸಿದೆ.

Vijaya Karnataka Web 4 Jun 2019, 9:31 am
ಮಂಗಳೂರು: ಮುಸ್ಲಿಮರ ಈದುಲ್‌ ಫಿತ್ರ್‌ ಹಬ್ಬವನ್ನು ಜೂ.5ರಂದು ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಹೇಳಿದ್ದಾರೆ.
Vijaya Karnataka Web Eid Ul Fitr

ಕರಾವಳಿಯಲ್ಲಿ ಶವ್ವಾಲ್‌ ತಿಂಗಳ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಜೂ.4ರಂದು ರಮ್ಝಾನ್‌ 30ನೇ ಉಪವಾಸ ಆಚರಿಸಲು ಖಾಝಿ ತೀರ್ಮಾನಿಸಿದ್ದಾರೆ ಎಂದು ಝೀನತ್‌ ಬಕ್ಷ್‌ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಅವರ ಪ್ರಕಟಣೆ ತಿಳಿಸಿದೆ.

ಮುಸ್ಲಿಮ್ ಬಾಂಧವರು ಕಳೆದ ಒಂದು ತಿಂಗಳಿನಿಂದ ರಂಜಾನ್ ಉಪವಾಸ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ.

ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಸಂಭ್ರಮದಿಂದ ರಂಜಾನ್‌ (ಈದ್‌-ಉಲ್‌-ಫಿತರ್‌) ಆಚರಿಸಲಾಗುತ್ತದೆ. ಬೆಳಗ್ಗೆದ್ದು ಸ್ನಾನಾದಿ ವಿಧಿ-ವಿಧಾನಗಳನ್ನು ಪೂರೈಸಿ ತಮಗೆ ಸಮೀಪದ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ