ಆ್ಯಪ್ನಗರ

ತುಳುವಿನ ಪ್ರಾಚೀನ ಶಾಸನ ಅಧ್ಯಯನ ಪೂರ್ಣ

ಮಂಗಳೂರಿನ ಕುಲಶೇಖರದ ಶ್ರೀವೀರನಾರಾಯಣ ದೇವಾಲಯದಲ್ಲಿ ಇತ್ತೀಚೆಗೆ ಪತ್ತೆಯಾದ ಶಾಸನದ ಅಧ್ಯಯನ ಪೂರ್ಣಗೊಂಡಿದೆ. ಇದರ ಪ್ರಕಾರ ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಎನ್ನುವ ಹೆಗ್ಗಳಿಕೆ ಇದು ಪಾತ್ರವಾಗಿದೆ. ಆಳುಪ ಚಕ್ರವರ್ತಿ 1 ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ ಎಂದು ಶಿರ್ವದ ಎಂಎಸ್‌.ಆರ್‌.ಎಸ್‌. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

Vijaya Karnataka 23 Feb 2019, 3:51 pm
ಮಂಗಳೂರು: ಮಂಗಳೂರಿನ ಕುಲಶೇಖರದ ಶ್ರೀವೀರನಾರಾಯಣ ದೇವಾಲಯದಲ್ಲಿ ಇತ್ತೀಚೆಗೆ ಪತ್ತೆಯಾದ ಶಾಸನದ ಅಧ್ಯಯನ ಪೂರ್ಣಗೊಂಡಿದೆ. ಇದರ ಪ್ರಕಾರ ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಎನ್ನುವ ಹೆಗ್ಗಳಿಕೆ ಇದು ಪಾತ್ರವಾಗಿದೆ. ಆಳುಪ ಚಕ್ರವರ್ತಿ 1 ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ ಎಂದು ಶಿರ್ವದ ಎಂಎಸ್‌.ಆರ್‌.ಎಸ್‌. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
Vijaya Karnataka Web tulu language
ತುಳುವಿನ ಪ್ರಾಚೀನ ಶಾಸನ ಅಧ್ಯಯನ ಪೂರ್ಣ


ಈ ಶಾಸನ 'ಶ್ರೀ ಹರಿಯೇ ನಮಃ' ಎಂಬ ಒಂದು ಸಾಲಿನ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿದೆ. ನಂತರ ಶಾಸನದಲ್ಲಿ ಸೌರ ಪಂಚಾಗದ ರೀತ್ಯಾ ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಶಾಸನ ಆಳುಪರ ಚರಿತ್ರೆ ಮತ್ತು ತುಳು ಸಾಹಿತ್ಯ ಹಾಗೂ ತುಳು ಲಿಪಿ ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮಹತ್ವದ ದಾಖಲೆಯಾಗಿದೆ. ಈ ಶಾಸನ 1 ನೇ ಕುಲಶೇಖರ ಆಳುಪೇಂದ್ರನ ಕುರಿತಾಗಿ ದೊರೆಯುವ ಪ್ರಪ್ರಥಮ ಶಾಸನವಾಗಿದೆ. ಇದುವರೆಗೆ ಕ್ರಿ.ಶ. 1162 ರ ಕೊರ್ಸಿ-ಕಾಲ್ತೋಡು ಶಾಸನವನ್ನು ಆತನ ಪ್ರಥಮ ಶಾಸನವೆಂದು ಭಾವಿಸಲಾಗಿತ್ತು. ಆದರೆ, ಕುಲಶೇಖರದ ತುಳು ಶಾಸನ ಆತನ ಆಳ್ವಿಕೆಯ ಕ್ರಿ.ಶ. 1159ರ ಕಾಲಕ್ಕೆ ಸಂಬಂಧಿಸಿರುವುದರಿಂದ, ಇದೇ ಆತನ ಪ್ರಥಮ ಶಾಸನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತುಳುವಿನ ಶುದ್ಧ ಪದ: ಹೆಚ್ಚಾಗಿ ತುಳುನಾಡಿನಲ್ಲಿ ಸಿಕ್ಕಿರುವ ಶಾಸನಗಳಲ್ಲಿ ತುಳು ಹಾಗೂ ಸಂಸ್ಕೃತ ಪದಗಳು ಕಾಣಿಸಿಕೊಳ್ಳುತ್ತದೆ. ಆದರೆ ಈಗ ಸಿಕ್ಕಿರುವ ಶಾಸನದಲ್ಲಿ ಶುದ್ಧ ತುಳು ಪದಗಳಾದ ಧನುಪುಳೇ, ರತ್ನತೆಂದ್‌, ಸಕ್‌, ಪದರಾಡ್‌, ಪದಿರಾಡ್‌, ದಿಕ್ಕ್‌, ಲೋಕೊಂತಮಾಂತ - ವಿಶ್ವಪ್ರಸಿದ್ಧ ಮುಂತಾದ ಪದಗಳನ್ನು ಬಳಸಲಾಗಿದೆ. ಆದ್ದರಿಂದ ಈ ಶಾಸನವನ್ನು ತುಳು ಭಾಷೆಯ ಅತ್ಯಂತ ಪ್ರಾಚೀನ ಹಾಗೂ ಪ್ರಪ್ರಥಮ ಶಾಸನವೆಂದು ಪರಿಗಣಿಸಬಹುದು ಎನ್ನುವುದು ಪ್ರೊ.ಟಿ.ಮುರುಗೇಶಿ ಅವರ ಮಾತು.

ಈ ತುಳು ಶಾಸನದಲ್ಲಿ ತುಳು ಸಾಹಿತ್ಯ, ಸಂಸ್ಕೃತಿಯ ವಿಚಾರದಲ್ಲಿ ಬಹಳ ಮಹತ್ವಪೂರ್ಣವಾದ ಶಾಸನ, ಈ ಹಿಂದೆ ಸಿಕ್ಕಿರುವ ಶಾಸನಗಳಲ್ಲಿ ಕಾಲಮಾನದ ಉಲ್ಲೇಖಗಳೇ ಇರುತ್ತಿರಲಿಲ್ಲ. ಆದರೆ ಈಶಾಸನದಲ್ಲಿ ಕಾಲಮಾನದ ಉಲ್ಲೇಖವಿದೆ. ಈ ಮೂಲಕ ಮುಂದಿನ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ಈ ಶಾಸನ ಶೋಧ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಹೋರಾಟಕ್ಕೂ ಪ್ರಬಲ ಆಧಾರವಾಗಿದೆ ಎನ್ನುವುದು ಪ್ರೊ.ಟಿ.ಮುರುಗೇಶಿ ಅವರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ